Breaking News

ಕಾಂಗ್ರೆಸ್‌ ಅಭ್ಯರ್ಥಿ ಕಚೇರಿಗೆ ಹೋಗಿ ಮುಖಂಡರಿಗೆ ಸಿಎಂ ಏಕನಾಥ ಶಿಂಧೆ ತರಾಟೆ!

Spread the love

ಮುಂಬೈ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಮುಂಬೈನ ಅಂಧೇರಿ ಸಮೀಪದ ಚಾಂದೀವಲಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಸೀಂಖಾನ್‌ ಕಚೇರಿಗೆ ತೆರಳಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸೋಮವಾರ ತಡರಾತ್ರಿ ಸಿಎಂ ಏಕನಾಥ ಶಿಂಧೆ ಖಾನ್‌ ಅವರ ಕಚೇರಿ ಮುಂದೆ ತೆರಳುತ್ತಿದ್ದರು.

ಈ ವೇಳೆ ಆ ಪಕ್ಷದ ಕಾರ್ಯಕರ್ತರು “ವಿಶ್ವಾಸಘಾತಕ’ ಎಂದು ಘೋಷಣೆ ಹಾಕಿದ್ದರು. ಜತೆಗೆ ಶಿಂಧೆ ಕಾರನ್ನು ತಡೆಯಲು ಯತ್ನಿಸಿದರು ಎಂದು ಆರೋಪಿಸಲಾಗಿದೆ.

ಇದರಿಂದ ಕೋಪಗೊಂಡ ಅವರು ಕಾರಿನಿಂದ ಇಳಿದು ಅಭ್ಯರ್ಥಿಯ ಕಚೇರಿಗೆ ತೆರಳಿ “ನಿಮ್ಮ ಪಕ್ಷದ ಮುಖಂಡರಿಗೆ ದುರ್ವರ್ತನೆಯನ್ನೇ ಕಲಿಸಿ’ ಎಂದು ತರಾಟೆಗೆ ತೆಗೆದುಕೊಂಡರು. ನಂತರ ಅವರು ಕಾರನ್ನೇರಿ ತೆರಳಿದರು. ಈ ಘಟನೆಯ ವಿಡಿಯೋ ವೈರಲ್‌ ಆಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ