Breaking News

ಘಟಪ್ರಭಾ ನದಿಗೆ ಹರಿದು ಬಂದ ಹೆಚ್ಚಿನ‌ ನೀರು. ಮುಳುಗಿದ ಬ್ಯಾರೇಜ್

Spread the love

ಮುಧೋಳ: ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಿಡಕಲ್‌ ಜಲಾಶಯದಿಂದ ಹೆಚ್ಚಿನ‌ ಪ್ರಮಾಣ ನೀರು ಘಟಪ್ರಭಾ ನದಿಗೆ ಹರಿದುಬರುತ್ತಿರುವ ಕಾರಣ ತಾಲೂಕಿನ ಬ್ರಿಡ್ಜ್ ಕಂ ಬ್ಯಾರೇಜ್ ಗಳು‌ ಮುಳುಗಿ ಜನಸಂಚಾರ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.

ಮಿರ್ಜಿ-ಮಹಾಲಿಂಗಪುರ ಸಂಪರ್ಕ ರಸ್ತೆಯಲ್ಲಿರುವ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ‌ ನೀರು ಹರಿಯುತ್ತಿದ್ದು ಸದ್ಯ ವಾಹನ ಸಂಚಾರಕ್ಕೆ ಅಡಚಣೆಯಾಗಿಲ್ಲ.

ಪರಿಸ್ಥಿತಿ ಇದೇರೀತಿ ಮುಂದುವರಿದರೆ ಸಂಜೆ ಅಥವಾ ನಾಳೆ ವೇಳೆಗೆ ಸಂಚಾರ ಸ್ಥಗಿತಗೊಳ್ಳುವ ಭೀತಿ‌ ಎದುರಾಗಿದೆ.

ಜೀರಗಾಳ ಸಮೀಪದ ಬ್ರಿಡ್ಜ ಕಂ ಬ್ಯಾರೇಜ್ ಮೇಲೆ‌ ಹೆಚ್ಚಿನ‌ ಪ್ರಮಾಣದಲ್ಲಿ ನೀರು ರಭಸವಾಗಿ ಹರಿಯುತ್ತಿದ್ದು, ಮುಂಜಾಗೃತವಾಗಿ ಈ ಮಾರ್ಗದ ಸಂಚಾರ ಸ್ಥಗಿತಗೊಂಡಿದೆ.
ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ‌ ಅಸ್ತವ್ಯಸ್ತಗೊಂಡಿದ್ದು, ಇದೀಗ ಘಟಪ್ರಭ ನದಿಯು ಮತ್ತೆ ಉಕ್ಕೇರಿ ಹರಿಯುವ ಮುನ್ಸೂಚನೆ‌ ನೀಡಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ