Breaking News

ಮುನಿರತ್ನ ವಿರುದ್ಧ ಮೂರು ತಿಂಗಳ ಹಿಂದೆಯೇ ದಾಖಲಾಗಿತ್ತು ದೂರು: ಕೇಸ್ ಕೊಟ್ಟು ಹಿಂದೆ ಸರಿದಿದ್ದ ದೂರುದಾರೆ!

Spread the love

ತ್ಯಾಚಾರ ಪ್ರಕರಣದಲ್ಲಿ ಎಸ್​ಐಟಿ ಕಸ್ಟಡಿಯಲ್ಲಿರುವ ಶಾಸಕ ಮುನಿರತ್ನರನ್ನು ನಿರಂತರವಾಗಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದರೆ, ಮುನಿರತ್ನ ವಿರುದ್ಧ ಮೂರು ತಿಂಗಳ ಹಿಂದೆಯೇ ದೂರು ದಾಖಲಾಗಿದ್ದರೂ ಎಫ್​ಐಆರ್ ದಾಖಲಾಗಿರಲಿಲ್ಲ ಎನ್ನಲಾಗಿದೆ. ಅಷ್ಟಲ್ಲದೇ, ದಾರುದಾರೆ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದ್ದು, ಸಾಕಷ್ಟು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ

 

ಬೆಂಗಳೂರು, ಅಕ್ಟೋಬರ್ 2: ಒಂದಲ್ಲ ಎರಡಲ್ಲ, ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಆರ್​ಆರ್ ನಗರ ಕ್ಷೇತ್ರದ ಶಾಸಕ ಮುನಿರತ್ನ ಈಗ ಎಸ್​ಐಟಿ ಕಸ್ಟಡಿಯಲ್ಲಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳ ವಿಚಾರಣೆ ಎದುರಿಸುತ್ತಿದ್ದಾರೆ. ಸಂತ್ರಸ್ತೆಯ ಆರೋಪಗಳೆಲ್ಲ ಸುಳ್ಳು ಅಂತ ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಮುನಿರತ್ನ ವಿರುದ್ಧ ಮೂರು ತಿಂಗಳ ಹಿಂದೆಯೇ ಅತ್ಯಾಚಾರ ಆರೋಪದ ಬಗ್ಗೆ ದೂರು ನೀಡಲಾಗಿತ್ತು ಎಂಬ ವಿಚಾರ ಬಯಲಾಗಿದೆ.

ಶಾಸಕ ಮುನಿರತ್ನ ವಿರುದ್ದ ಜೂನ್​​ನಲ್ಲೇ ದೂರು ದಾಖಲಾಗಿತ್ತು. ಜೂನ್​​ನಲ್ಲಿಯೇ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತ ಮಹಿಳೆ ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರನ್ನು ಅರ್ಜಿಯಾಗಿ ಪಡೆದುಕೊಂಡಿದ್ದ ಪೊಲೀಸರು ಅರ್ಜಿ ಸಂಬಂಧ ವಿಚಾರಣೆಗೆ ಸಾಕ್ಷಿ ನೀಡುವಂತೆ ದೂರುದಾರೆಗೆ ತಿಳಿಸಿದ್ದರು. ಈ ಸಂಬಂಧ ದೂರುದಾರೆಗೆ ನೋಟಿಸ್ ನೀಡಲಾಗಿತ್ತು. ಆದ್ರೆ ದೂರುದಾರೆ ಪೊಲೀಸರ ಮುಂದೆಯೇ ಹಾಜಾರಾಗಿರಲಿಲ್ಲ. ಹೀಗಾಗಿ ಪೊಲೀಸರು ವಿಚಾರಣೆಯನ್ನು ಹಾಗೇಯೇ ಬಿಟ್ಟಿದ್ದರು. ಈಗ ಮತ್ತೆ ಅದೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರಿಂದ ಕೇಸ್ ದಾಖಲು ಮಾಡಿ ಅರೆಸ್ಟ್ ಮಾಡಲಾಗಿತ್ತು. ಆದರೆ ಈ ವಿಚಾರವಾಗಿ ಕೆಲ‌ ಪ್ರಶ್ನೆಗಳಿಗೆ ಉತ್ತರ ಸಿಗುತ್ತಿಲ್ಲ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ