Breaking News

ಆರೋಪಿ ಭೀಮಶಿ ಭಜಂತ್ರಿ ತಲೆಗೂದಲು ಹಿಡಿದು ಪರೇಡ್ ವೇಳೆ ಎಸ್‍ಪಿ ಅನುಪಮ ಅಗ್ರವಾಲ ಕೆನ್ನೆಗೆ ಬಾರಿಸಿದ್ದಾರೆ.

Spread the love

ವಿಜಯಪುರ: ರೌಡಿಗಳ ಪರೇಡ್ ವೇಳೆ ಎಸ್‍ಪಿ ಅನುಪಮ ಅಗರವಾಲ ಅವರು ರೌಡಿಶೀಟರ್ ತಲೆಗೂದಲು ಹಿಡಿದು ಕೆನ್ನೆಗೆ ಬಾರಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಬೆಳ್ಳಂಬೆಳಗ್ಗೆ ವಿಜಯಪುರ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ರೌಡಿಗಳಿಗೆ ಪರೇಡ್ ನಡೆದಿದೆ. ಇದೆ ವೇಳೆ ಬಡ್ಡಿ ವ್ಯವಹಾರದ ರೌಡಿಶೀಟರ್‍ಗೆ ಎಸ್‍ಪಿ ಕೆನ್ನೆಗೆ ಬಾರಿಸಿದ್ದಾರೆ. ವಿಜಯಪುರ ನಗರದ ನಾನಾ ಪೊಲೀಸ್ ಠಾಣೆಗಳ ಸುಮಾರು 110ಕ್ಕೂ ಹೆಚ್ಚು ರೌಡಿಗಳಿಗೆ ಪೊಲೀಸರು ಪರೇಡ್ ನಡೆಸಿದ್ದಾರೆ.

ಜಿಲ್ಲೆಯಲ್ಲಿ ಕ್ರೈಂ ಹೆಚ್ಚಾಗುತ್ತಿದ್ದಂತೆ ಎಸ್‍ಪಿ ರೌಡಿಶೀಟರ್ ಗಳ ಪರೇಡ್ ಗೆ ಮುಂದಾಗಿದ್ದಾರೆ. ಬಡ್ಡಿ ವ್ಯವಹಾರದ ರೌಡಿಶೀಟರ್ ಲೈಸೆನ್ಸ್ ಹೊಂದಿರುವ ಗನ್ ನಿಂದ ಬೆದರಿಸಿದ ಆರೋಪ ಹೊತ್ತಿರುವ ಆರೋಪಿ ಭೀಮಶಿ ಭಜಂತ್ರಿ ತಲೆಗೂದಲು ಹಿಡಿದು ಪರೇಡ್ ವೇಳೆ ಎಸ್‍ಪಿ ಅನುಪಮ ಅಗ್ರವಾಲ ಕೆನ್ನೆಗೆ ಬಾರಿಸಿದ್ದಾರೆ.


Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ