Breaking News
Home / ರಾಜಕೀಯ / ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು? ಅವರು ಯೂತ್ ಐಕಾನ್: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್

ಬಿ ವೈ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು? ಅವರು ಯೂತ್ ಐಕಾನ್: ವಿಜಯೇಂದ್ರ ಪರ ರೇಣುಕಾಚಾರ್ಯ ಬ್ಯಾಟಿಂಗ್

Spread the love

ಬೆಂಗಳೂರು: ಪಕ್ಷ ಸಂಘಟನೆ ಗಟ್ಟಿಯಾಗಲು ಬಿ ವೈ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಬೇಕೆಂದು ಜನ ಮಾತಾಡುತ್ತಿದ್ದಾರೆ. ಮಾಜಿ ಸಿಎಂ ಅವರ ಯಡಿಯೂರಪ್ಪ ಮಗ ಅಂತ ರಾಜ್ಯಾಧ್ಯಕ್ಷ ಸ್ಥಾನ ಕೊಡಬೇಡಿ.

ಸ್ವಂತ ವರ್ಚಸ್ಸಿನ ಯುವ ನಾಯಕ ಎಂದು ನೀಡಿ ಎನ್ನುವ ಮೂಲಕ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರು ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೆಂಗಳೂರಿನ ನಿವಾಸಕ್ಕೆ ಭೇಟಿ ನೀಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಕೀಯದಲ್ಲಿ ಗಾಡ್ ಫಾದರ್​ಬೇಕು. ಯಡಿಯೂರಪ್ಪ ಅವರಿಗೆ ಆ ಸಾಮರ್ಥ್ಯ ಇತ್ತು. ಅವರ ನಾಯಕತ್ವ ಪಕ್ಷ ಗಟ್ಟಿಗೊಳಿಸಿದೆ.‌ ಈಗಿನ ಪರಿಸ್ಥಿತಿಗೆ ಈಗಾಗಲೇ ಕೆಲವರು ಪಕ್ಷದಿಂದ ಹೊರಗೆ ಹೋಗಿದ್ದಾರೆ. ಅಭದ್ರತೆಯಿಂದ ಯಾರು ಬೇಕಾದರೂ ಪಕ್ಷ ಬಿಟ್ಟು ಹೋಗಬಹುದು ಎಂದು ಮಾರ್ಮಿಕವಾಗಿ ನುಡಿದರು.

ಮುಂದುವರೆದು, ಪ್ರಧಾನಿ ಮೋದಿಯವರು ಯಡಿಯೂರಪ್ಪ ಅವರನ್ನು ಕಡೆಗಣಿಸಿಲ್ಲ. ಮಧ್ಯದಲ್ಲಿ ಇರುವ ಕೆಲವರು ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿದ್ದಾರೆ. ಯಡಿಯೂರಪ್ಪ ಬಿಟ್ಟರೆ, ಬೇರೆ ಯಾರು ಕೈಯಲ್ಲಿಂದಲೂ ಪಕ್ಷ ನಿಭಾಯಿಸುವುದಕ್ಕೆ ಆಗಲ್ಲ. ಪಕ್ಷಕ್ಕೆ ಯಡಿಯೂರಪ್ಪರಂತ ಆಕರ್ಷಣೆಯ ನಾಯಕತ್ವ ಬೇಕು ಅಂತಾ ಕೇಳುತ್ತಿದ್ದೇನೆ ಎಂದರು. ಹಾಗೇ ಕಳೆದ ಒಂದು ತಿಂಗಳಿಂದ ಯಡಿಯೂರಪ್ಪರನ್ನು ಭೇಟಿ ಮಾಡಿರಲಿಲ್ಲ.‌ ಅವರ ಮುಖ ನೋಡಿದರೆ ನನಗೆ ಏನೋ ಸಂತೋಷ.‌ ಅವರಂಥ ದೊಡ್ಡ ನಾಯಕರು ಬಿಜೆಪಿಯಲ್ಲಿ ಯಾರು ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ವಿಜಯೇಂದ್ರ ಪರವಾಗಿ ಮಾತಾನಾಡಿದ್ರೆ ಯಡಿಯೂರಪ್ಪ ಮಾತನಾಡಿಸಿದರು ಅನ್ನುತ್ತಾರೆ. ಆದರೆ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗುವುದರಲ್ಲಿ ತಪ್ಪೇನು?. ವಿಜಯೇಂದ್ರ ಒಬ್ಬ ಯೂತ್ ಐಕಾನ್, ಅವರಿಗೆ ಪಕ್ಷದ ನಾಯಕತ್ವ ಕೊಟ್ಟರೆ ತಪ್ಪೇನು. ‌ಅವರು ತಮ್ಮದೇ ಆದ ಸ್ವಂತ ಬಲದಿಂದ ಬೆಳೆಯುತ್ತಿದ್ದಾರೆ. ನಾನು ಎಲ್ಲ ಕಡೆ ಪ್ರವಾಸ ಮಾಡಿದಾಗ ಕಾರ್ಯಕರ್ತರು ಕೂಡ ಅದನ್ನೇ ಹೇಳಿದ್ದಾರೆ.‌ ಸದ್ಯದ ಪರಿಸ್ಥಿತಿಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಬೇಕೆಂದು ಕೇಳುತ್ತಿದ್ದಾರೆ. ಹಿಂದೆ ಯಡಿಯೂರಪ್ಪರನ್ನು ನಂಬಿಯೇ ಕಾಂಗ್ರೆಸ್, ಜೆಡಿಎಸ್​ನಿಂದ ಶಾಸಕರು ಬಂದರು. ಬಿಜೆಪಿಯಲ್ಲಿ ಈಗಾಗಲೇ ಬಹಳ ಜನರು ಬೇಸತ್ತಿದ್ದಾರೆ. ಮುಂದೆ ಅವರೆಲ್ಲ ಬಿಜೆಪಿ ಬಿಟ್ಟು ಹೋಗ್ತಾರೆ. ಬಿಜೆಪಿಯನ್ನು ಮತದಾರರು ಸೋಲಿಸಿಲ್ಲ, ಸೋಲಿಸಿದ್ದು ನಮ್ಮವರೇ ಎಂದು ಅಸಮಾಧಾನ ಹೊರ ಹಾಕಿದರು.

ನಾನು ಯಡಿಯೂರಪ್ಪ ಗರಡಿಯಲ್ಲಿ ಬೆಳೆದವನು. ಬಿಜೆಪಿ ಬಿಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಸೇರುವುದಾಗಿ ಹೇಳಿಲ್ಲ. ಪಕ್ಷ ಕಟ್ಟೋಣ ಅಂತ ಯಡಿಯೂರಪ್ಪ ಹೇಳಿದ್ದಾರೆ. ಲೋಕಸಭೆ ಚುನಾವಣೆ ಬರುತ್ತಿದೆ. ರಾಜ್ಯದಲ್ಲಿ ಯಡಿಯೂರಪ್ಪ ಮಾತ್ರ ಎಲ್ಲ ನಿಭಾಯಿಸ್ತಾರೆ. ಅವರಂಥಹ ನಾಯಕರು ಮಾತ್ರ ಎಲ್ಲವನ್ನು ನಿಭಾಯಿಸಲು ಸಾಧ್ಯ. ಇಲ್ಲದಿದ್ದರೆ ಕಷ್ಟ ಆಗಲಿದೆ ಎಂದರು. ಮುಂದೆ, ಆಪರೇಷನ್ ಕಮಲ ಬಗ್ಗೆ ಡಿಕೆಶಿ, ಕಾಂಗ್ರೆಸ್ ಶಾಸಕ ರವಿ ಗಾಣಿಗ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಆಪರೇಷನ್ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಅವರದ್ದೇ ಇದೆ, ತನಿಖೆ ನಡೆಸಲಿ. ಆಪರೇಷನ್ ಮಾಡಿದ್ದರೆ ತನಿಖೆ ಮಾಡಿ ಹೊರಗೆಳೆಯಲಿ. ರೇಣುಕಾಚಾರ್ಯ, ಜೆಡಿಎಸ್ ಜತೆ ಮೈತ್ರಿ ವಿಚಾರ ಬಗ್ಗೆ ನಾನು ಮಾತಾಡಲ್ಲ, ಅದು ಹೈಕಮಾಂಡ್ ನಿರ್ಧಾರ ಎಂದು ಹೇಳಿದರು.

ವಿಜಯೇಂದ್ರ ಹೊರತುಪಡಿಸಿ ಶೋಭಾಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ, ಸಹೋದರಿ ಶೋಭಾ ಕರಂದ್ಲಾಜೆ ಕೇಂದ್ರ ಸಚಿವರಾಗಿ ಸಂಘಟನೆಯಲ್ಲಿ ತೊಡಗಿದ್ದಾರೆ. ನನಗೆ ಅವರ ಮೇಲೆ ಗೌರವ ಇದೆ. ಕೂಸು ಹುಟ್ಟೋಕು ಮುನ್ನ ನಾನು ಯಾಕೆ ಕುಲಾವಿ ಹೊಲಿಸಬೇಕು..? ಬರುವಂತ ಲೋಕಸಭಾ ಚುನಾವಣೆ ಮೋದಿಯವರ ಚುನಾವಣೆ ಆಗಿದೆ. ಆ ಚುನಾವಣೆಗೆ ಯಡಿಯೂರಪ್ಪರಂತ ನಾಯಕತ್ವ ಬೇಕೇ ವಿನಃ, ಬೇರೆ ಯಾರ ಕೈಯಿಂದಲೂ ಪಕ್ಷ ನಿಭಾಯಿಸೋಕೆ ಸಾಧ್ಯವಿಲ್ಲವೆಂದರು. ಈ ಸಂದರ್ಭದಲ್ಲಿ ತುಮಕೂರು ಲೋಸಕಭಾ ಸಂಸದ ಬಸವರಾಜು, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ದೆಹಲಿಯ ಮಾಜಿ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಹೋಟೆಲ್ ರೂಮಿನಲ್ಲಿ ಇಬ್ಬರು ಪುರುಷರೊಂದಿಗೆ ವಿವಾಹಿತ ಮಹಿಳೆಯ ಚೆಲ್ಲಾಟ

Spread the love ಇತ್ತೀಚಿನ ದಿನಗಳಲ್ಲಿ ವಿವಾಹಿತ ಪುರುಷರು ಮತ್ತು ಮಹಿಳೆಯರ ಅಕ್ರಮ ಸಂಬಂಧದ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ಇಂತಹದ್ದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ