Breaking News

ಕೆಲಸದ ಒತ್ತಡದ ನಡುವೆಯೂ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡ:S.P

Spread the love

ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಕೆಲಸದ ಒತ್ತಡದ ನಡುವೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರ ತಂಡ ಶನಿವಾರ ನಡೆಸಿದ 11ನೇ ಫೋನ್ ಇನ್ ಕಾರ್ಯಕ್ರಮದಲ್ಲಿ ನಗರ ಸೇರಿದಂತೆ ಜಿಲ್ಲೆಯ ಜನರು ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡರು.

ಎಂದಿನಂತೆ ಸಾರ್ವಜನಿಕರು ಕರೆ ಸ್ವೀಕರಿಸಿದ ‌ಎಸ್ಪಿ ನಮಸ್ಕಾರ್ ರೀ.. ನಾನ ಎಸ್ಪಿ ಮಾತನಾಡುತ್ತಿದ್ದೇನೆ ಹೇಳ್ರಿ ಎನ್ನುತ್ತಲೇ ಸಾರ್ವಜನಿಕರ ಸಮಸ್ಯೆ ಆಲಿಸಿದರು.

ನಗರದ ಶಹಾಪುರದ ವ್ಯಕ್ತಿಯೊರ್ವ ಆಸ್ತಿ ಮಾರಾಟ ಮಾಡಿದ್ದೇನೆ. ಆದರೆ ಕೆಲವರು ಬೇದರಿಕೆ ಹಾಕುತ್ತಿದ್ದಾರೆ. ನ್ಯಾಯಾಲಯದಲ್ಲಿ ನಮ್ಮಂತೆಯಾದರೂ ಕೆಲವರು ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ನಿಮ್ಮ ಆಸ್ತಿ ವಿಚಾರದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಲು ಬರುವುದಿಲ್ಲ. ನ್ಯಾಯಾಲಯಕ್ಕೆ ಹೋಗಿ ನಿಮಗೆ ಬೇದರಿಕೆ ಹಾಕುತ್ತಿದ್ದರೆ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರ ರಕ್ಷಣೆ ನೀಡುತ್ತಾರೆ ಎಂದರು.

ಬೈಲಹೊಂಗಲ ತಾಲೂಕಿನ ಗದ್ದಿಕೊರವಿನ ಕೊಪ್ಪದ ಆಸ್ತಿ ವಾಜ್ಯಕ್ಕೆ ಸಂಬಂಧಿಸಿದಂತೆ ಸಹೋದರ‌ ಕಿರುಕುಳ ನೀಡುತ್ತಿದ್ದಾರೆ ಎಂದು ಕರೆ ಮಾಡಿ ದೂರಿದರು‌. ಇದಕ್ಕೆ ಸ್ಪಂದಿಸಿದ ಎಸ್ಪಿ ಅವರು ನ್ಯಾಯಾಲಯದ ವಿಷಯದಲ್ಲಿ ಪೊಲೀಸರು ಹಸ್ತಕ್ಷೇಪ ಮಾಡಲು ಬರುವುದಿಲ್ಲ ನ್ಯಾಯಾಲಯದಲ್ಲಿ ಬಗೆ ಹರಿಸಿಕೊಳ್ಳಿ ಎಂದರು.

 

ಗದಗ ಜಿಲ್ಲೆಯ ವ್ಯಕ್ತಿಯೊರ್ವ ಕರೆ ಮಾಡಿ ರೇಷ್ಮೆ ಬೆಳೆಗಾರರು ಗದಗನಿಂದ ರಾಮನಗರಕ್ಕೆ ರೇಷ್ಮೆ ಮಾರಾಟ ಮಾಡುತ್ತೇವೆ. ಅಲ್ಲಿ ದಳ್ಳಾಳಿಗಳು, ದಬ್ಬಾಳಿಕೆ ಮಾಡಿ ತೂಕದಲ್ಲಿ‌ ಮೋಸ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆ ಬಗೆ ಹರಿಸಿಕೊಡಬೇಕೆಂದು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಸಂಜೀವ ಪಾಟೀಲ ರಾಮನಗರ ಎಸ್ಪಿ ಅವರೊಂದಿಗೆ ಮಾತನಾಡುವೆ. ನೀವು ಒಂದು ಸಾರಿ ಕರೆ ಮಾಡಿ ದೂರು ನೀಡಿ ಎಂದರು.

 

 


Spread the love

About Laxminews 24x7

Check Also

ಬೆಳಗಾವಿ ಜಲಾಶಯಗಳಲ್ಲಿ ಜೀವಕಳೆ

Spread the love ಬೆಳಗಾವಿ: ಜಿಲ್ಲೆಯಲ್ಲಿ ಈ ಬಾರಿ ಪೂರ್ವ ಮುಂಗಾರು ಉತ್ತಮವಾಗಿದೆ. ಜೂನ್‌ ಅಂತ್ಯದವರೆಗೆ ಮುಂಗಾರು 286.46 ಮಿ.ಮೀ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ