Home / ರಾಜಕೀಯ / ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್​​ಗೆ ಆಂತರಿಕ ಸಮೀಕ್ಷಾ ವರದಿಗಳ ಆಘಾತ

ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್​​ಗೆ ಆಂತರಿಕ ಸಮೀಕ್ಷಾ ವರದಿಗಳ ಆಘಾತ

Spread the love

ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಇದೀಗ ಮತ್ತೊಮ್ಮೆ ಹೊರ ಬಂದಿದೆ. ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷಕ್ಕೆ ಬಹುಮತ ಕಷ್ಟವಂತೆ..

 

ಬೆಂಗಳೂರು : ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಗೆ ಪೂರಕವಲ್ಲದ ಸಮೀಕ್ಷಾ ವರದಿಗಳು ಬಿಜೆಪಿ ಹೈಕಮಾಂಡ್ ಕೈ ಸೇರಿವೆ. ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಮತ್ತೊಮ್ಮೆ ಕಮಲ ಧ್ವಜ ಹಾರಿಸಬೇಕು ಎನ್ನುವ ಆಶಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ವರಿಷ್ಠರ ನಿದ್ದೆಗೆಡಿಸಿದೆ.

ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಲಾಗಿದ್ದರೂ ಸಮೀಕ್ಷೆಗಳು ಮಾತ್ರ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ವರದಿಯ್ನನೇ ನೀಡುತ್ತಿವೆ.

ಯಡಿಯೂರಪ್ಪ ಅವಧಿಯಲ್ಲಿ ಮೊದಲ ಬಾರಿಗೆ ಹೈಕಮಾಂಡ್ ನೇರವಾಗಿ ಖಾಸಗಿ ಏಜೆನ್ಸಿ ಮೂಲಕ ಆಂತರಿಕ ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷಾ ವರದಿಯಲ್ಲಿ 80 ಸ್ಥಾನಕ್ಕಿಂತ ಹೆಚ್ಚು ಗೆಲ್ಲುವುದು ಕಷ್ಟ ಎನ್ನುವುದನ್ನು ತಿಳಿಸಲಾಗಿತ್ತು. ಮುಖ್ಯಮಂತ್ರಿ ಬದಲಾದ ನಂತರ ಬೊಮ್ಮಾಯಿ ಆಡಳಿತದಲ್ಲಿಯೂ ಮತ್ತೊಂದು ಸಮೀಕ್ಷೆ ನಡೆಸಲಾಯಿತು.

ಆ ವರದಿಯಲ್ಲಿಯೂ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆಯುವ ನಿಟ್ಟಿನಲ್ಲಿ ಹಿಂದೆ ಬೀಳಲಿದೆ ಎನ್ನುವ ವರದಿಯನ್ನೇ ನೀಡಿತು. 70-80 ಸ್ಥಾನಗಳಲ್ಲಿ ಮಾತ್ರ ಕಮಲ ಅರಳಲಿದೆ ಎನ್ನುವ ವರದಿಯನ್ನು ನೀಡಿದ್ದು, ಇದರಿಂದ ತೃಪ್ತರಾಗದ ವರಿಷ್ಠರು ಇತ್ತೀಚೆಗೆ ಮತ್ತೊಂದು ಸಮೀಕ್ಷೆ ನಡೆಸಿದ್ದಾರೆ.

ಮೂರನೇ ಸಮೀಕ್ಷೆಯೂ ಪೂರಕವಲ್ಲ : ಅಲ್ಲದೇ, ಖಾಸಗಿ ಏಜೆನ್ಸಿ ನಡೆಸಿದ ಮೂರನೇ ಸಮೀಕ್ಷೆಯೂ ಹೈಕಮಾಂಡ್ ಆಶಯಕ್ಕೆ ವಿರುದ್ಧವಾದ ವರದಿಯನ್ನು ನೀಡಿದೆ. ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಇದೀಗ ಮತ್ತೊಮ್ಮೆ ಹೊರ ಬಂದಿದೆ.

ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷಕ್ಕೆ ಬಹುಮತ ಕಷ್ಟ. ಅಷ್ಟು ಮಾತ್ರವಲ್ಲ ಹಾಲಿ ಇರುವ ಹಲವು ಶಾಸಕರಿಗೂ ಸೋಲಿನ ಭೀತಿ ಇದೆ ಎನ್ನುವ ವರದಿ ವರಿಷ್ಠರ ಕೈಸೇರಿದೆ. ಹೀಗಾಗಿ, ಈ ಬಾರಿ ಹೈಕಮಾಂಡ್ ನೇರವಾಗಿ ಚುನಾವಣಾ ಉಸ್ತುವಾರಿ ವಹಿಸುವ ಸಾಧ್ಯತೆ ಸ್ಪಷ್ಟವಾಗಿದೆ.

ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ?: ಹಳೆ ಮೈಸೂರು ಭಾಗಗಳಾದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಚಾಮರಾಜನಗರ ಜಿಲ್ಲೆಗಳಲ್ಲಿ ಗೆಲುವು ಸುಲಭದ ಮಾತಲ್ಲ. ಈ ಭಾಗದಲ್ಲಿ ಪಕ್ಷ ಗಟ್ಟಿಯಾಗಬೇಕಿದೆ. ವರದಿ ಆಧರಿಸಿ ಈಗಾಗಲೇ ಕೆಲಸ ಆರಂಭ ಮಾಡಿರುವ ಬಿಜೆಪಿ ಪಕ್ಷ ವೀಕ್ ಇರುವ ಕಡೆ ಅನ್ಯ ಪಕ್ಷದ ಶಾಸಕರನ್ನು, ಸ್ಥಳೀಯ ನಾಯಕರನ್ನು ಸೆಳೆದು ಸಂಘಟನೆ ಮಾಡಲು ಕಸರತ್ತು ಆರಂಭಿಸಿದೆ. ಇದು ಹೈಕಮಾಂಡ್​ನ ಮೊದಲ ಅಸ್ತ್ರವಾಗಿದೆ ಎನ್ನಲಾಗುತ್ತಿದೆ.


Spread the love

About Laxminews 24x7

Check Also

ಬುಧವಾರದಂದು ಪ್ರಧಾನಿಗಳು ಆಗಮಿಸುವ ಸ್ಥಳವನ್ನು ಪರಿಶೀಲಿಸಿದ : ಬಾಲಚಂದ್ರ & ರಮೇಶ್ ಜಾರಕಿಹೊಳಿ

Spread the loveಬೆಳಗಾವಿ- ಪ್ರಧಾನಿ ನರೇಂದ್ರ ಮೋದಿಯವರು ಬೆಳಗಾವಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ ಪ್ರಚಾರಾರ್ಥವಾಗಿ ಬೆಳಗಾವಿಗೆ ಬರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ