Breaking News

ಕಾರಿನ ಮೇಲೆ ಆನೆಗಳ ದಾಳಿ, ಚಾಲಕ ಜಸ್ಟ್ ಮಿಸ್

Spread the love

ಚಾಮರಾಜನಗರ: ಹೆದ್ದಾರಿ ನಡುವೆ ಆನೆಗಳು ಗುಂಪುಗಟ್ಟಿ ಪ್ರಯಾಣಿಕರಿಗೆ ತೊಂದರೆ ಕೊಟ್ಟಿವೆ. ವಾಹನಗಳನ್ನು ಜಖಂ ಗೊಳಿಸಿದ್ದು, ಚಾಲಕನೊಬ್ಬ ಪಾರಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಗಡಿ ಭಾಗವಾದ ಹಾಸನೂರಿನ ಬಳಿ ಘಟನೆ ನಡೆದಿದ್ದು, ತಮಿಳುನಾಡಿನ ಡಿಂಡಿಗಲ್ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಆನೆಗಳು ಪುಂಡಾಟ ನಡೆಸಿವೆ. ಮರಿಯಾನೆಯೊಂದಿಗೆ ಹೆದ್ದಾರಿಗೆ ಬಂದಿದ್ದ ಆನೆಗಳು ವಾಹನಗಳನ್ನು ಅಡ್ಡಗಟ್ಟಿವೆ. ಬಳಿಕ ವಾಹನಗಳನ್ನು ಜಖಂ ಗೊಳಿಸಿವೆ.

ಆನೆಗಳು ಬರುತ್ತಿದ್ದರೂ ಭಯವಿಲ್ಲದೆ ಕಾರು ಚಾಲಕ ಮುಂದಕ್ಕೆ ಸಾಗುತ್ತಿದ್ದಾಗ ಆನೆ ಅಡ್ಡಗಟ್ಟಿದೆ. ಆನೆ ದಾಳಿ ಮಾಡುವ ಆತಂಕದಿಂದ ಚಾಲಕ ಕಾರಿನಿಂದ ಕೆಳಗಿಳಿದು ಓಡಿ ಹೋಗಿದ್ದಾನೆ. ಆತ ಓಡಿ ಹೋಗುತ್ತಿದ್ದಂತೆ ಆನೆ ಕಾರಿನ ಮೇಲೆ ದಾಳಿ ನಡೆಸಿದೆ. ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. 


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ