Breaking News
Home / ಜಿಲ್ಲೆ / ಬೆಳಗಾವಿ / ಅಥಣಿ / ಮಹಾ ಸರ್ಕಾರದಲ್ಲಿ ಆಪರೇಷನ್ ಕಮಲಕ್ಕೆ ಗೋಕಾಕ್ ಸಾಹುಕಾರ್ ಪಾತ್ರ ವಹಿಸಿದ್ದಾರೆ: ಮಹೇಶ್​ ಕುಮಟಳ್ಳಿ

ಮಹಾ ಸರ್ಕಾರದಲ್ಲಿ ಆಪರೇಷನ್ ಕಮಲಕ್ಕೆ ಗೋಕಾಕ್ ಸಾಹುಕಾರ್ ಪಾತ್ರ ವಹಿಸಿದ್ದಾರೆ: ಮಹೇಶ್​ ಕುಮಟಳ್ಳಿ

Spread the love

ಅಥಣಿ(ಬೆಳಗಾವಿ): ರಮೇಶ್ ಜಾರಕಿಹೊಳಿ ಎಲ್ಲೆಡೆ ತಮ್ಮ ಸಂಪರ್ಕ ಹೊಂದಿರುವ ನಾಯಕರಾಗಿದ್ದಾರೆ. ಅವರು ಪಕ್ಷದಲ್ಲಿ ತಮ್ಮದೇ ಆದ ಕಾರ್ಯಚಟುವಟಿಕೆಗಳಿಂದ ಗುರುತಿಸಿಕೊಂಡಿದ್ದಾರೆ‌. ಯಾವ ಯಾವ ಸಮಯದಲ್ಲಿ ಪಕ್ಷಕ್ಕೆ ಅವರ ಅವಶ್ಯಕತೆ ಇರುತ್ತದೆಯೋ ಆಗ ಅವರು ಅನುಕೂಲ ಮಾಡಿಕೊಡುತ್ತಾರೆ. ಅಲ್ಲದೆ ಸದ್ಯ ಮಹಾರಾಷ್ಟ್ರ ಬಂಡಾಯ ಶಾಸಕರ ಸಂಪರ್ಕದಲ್ಲೂ ರಮೇಶ್ ಜಾರಕಿಹೊಳಿ ಇದ್ದಾರೆ ಎಂದು ಹೇಳುವ ಮೂಲಕ ಮಹಾ ಸರ್ಕಾರದಲ್ಲಿ ಆಪರೇಷನ್ ಕಮಲಕ್ಕೆ ಗೋಕಾಕ್ ಸಾಹುಕಾರ್ ಪಾತ್ರ ವಹಿಸಿದ್ದಾರೆ ಎಂದು ಪರೋಕ್ಷವಾಗಿ ಮುಗುಳ್ನಗೆಯಲ್ಲಿಯೇ ಶಾಸಕ ಮಹೇಶ್​ ಕುಮಟಳ್ಳಿ ಹೇಳಿದರು.

ಶಿವಸೇನೆಯ ಶಾಸಕರು ಮಹಾರಾಷ್ಟ್ರದಲ್ಲಿ ಆಡಳಿತರೂಢ ಶಿವಸೇನೆ ಹಾಗೂ ಎನ್​ಸಿಪಿಯ ಮೈತ್ರಿ ಸರ್ಕಾರದ ವಿರುದ್ಧ ಬಂಡಾಯದ ಬಾವುಟ ಹಾರಿಸಿ ರೆ‌ಸಾರ್ಟ್ ರಾಜಕಾರಣದತ್ತ ಮುಖಮಾಡಿದ್ದಾರೆ. ಈ ಬಂಡಾಯದ ಲಾಭ ಪಡೆಯಲು ಮಹಾರಾಷ್ಟ್ರದ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ‌. ಇದರ ಬೆನ್ನಲ್ಲೇ ಅಥಣಿಯ ಶಾಸಕರಾದ ಮಹೇಶ್ ಕುಮಟಳ್ಳಿ ಅವರು ಗುರುವಾರ ಕಕಮರಿ ಗ್ರಾಮದಲ್ಲಿ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ.


Spread the love

About Laxminews 24x7

Check Also

‘ಲೋಕಾ’ ದಾಳಿಯಲ್ಲಿ ಪತ್ತೆಯಾಯ್ತು ಅಧಿಕಾರಿಯ ಆಕ್ರಮ ಸಂಪತ್ತು;17 ಸೈಟ್, 27 ಎಕರೆ ಕೃಷಿ ಭೂಮಿ:

Spread the love ಕೊಪ್ಪಳ: ಕೊಪ್ಪಳದ ಕೃಷಿ ಇಲಾಖೆ ಉಪ ನಿರ್ದೇಶಕ ಸಹದೇವ ಯರಗುಪ್ಪ ಅವರಿಗೆ ಸೇರಿದ ಮನೆ ಮತ್ತು ಕಚೇರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ