Breaking News

ಬೆತ್ತಲೆ ಸೇವೆ ತಪ್ಪಿಸಿದ ಪೊಲೀಸರು

Spread the love

ಗದಗ: ಬೆಟಗೇರಿ ಹೊರವಲಯದ ನಾಗಸಮುದ್ರ ಸಮೀಪದ ದಂಡಿನ ದುರ್ಗಮ್ಮದೇವಿ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಈ ವೇಳೆ ದೇಹಕ್ಕೆ ಬೇವಿನಸೊಪ್ಪು ಸುತ್ತಿಕೊಂಡು ಬೆತ್ತಲೆ ಸೇವೆ ಸಲ್ಲಿಸಲು ಮುಂದಾದ ಭಕ್ತರನ್ನು ಪೊಲೀಸರು ತಡೆದರು.

 

ಮಹಾರಾಷ್ಟ್ರ, ಆಂಧ್ರ ಪ್ರದೇಶ ಸೇರಿದಂತೆ ರಾಜ್ಯದ ಸಾವಿರಾರು ಭಕ್ತರು ಸೋಮವಾರವೇ ನಗರಕ್ಕೆ ಬಂದಿದ್ದರು.

ಮಕ್ಕಳು, ಕೆಲ ಭಕ್ತರು ದೀರ್ಘ ದಂಡ ನಮಸ್ಕಾರ ಹಾಕಿ, ಹರಕೆ ತೀರಿಸಿದರು.

 

‘ಹರಕೆ ಹೊತ್ತಿದ್ದ ಕೆಲವು ಭಕ್ತರು ಬೆತ್ತಲೆ ಸೇವೆ ಮಾಡಲು ಬಂದಿದ್ದರು. ಪೊಲೀಸರು ಅದಕ್ಕೆ ಅವಕಾಶ ನೀಡದೇ ಅವರನ್ನು ವಾಪಸ್‌ ಕಳಿಸಿದ್ದಾರೆ. ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಲಾಗಿದೆ’ ಎಂದು ಗದಗ ತಹಶೀಲ್ದಾರ್‌ ಕಿಶನ್‌ ಕಲಾಲ್‌ ತಿಳಿಸಿದ್ದಾರೆ.

ಮಹಾರಾಷ್ಟ್ರ ಹೆಣ್ಣು ಮಗಳೊಬ್ಬಳು ಬೇವಿನ ಸೊಪ್ಪು ಸುತ್ತಿಕೊಂಡು ಹರಕೆ ತೀರಿಸಲು ಜನರ ನಡುವೆ ನುಗ್ಗಿ
ಬಂದಳು. ಆದರೆ, ಸ್ಥಳದಲ್ಲಿದ್ದ ಪೊಲೀ ಸರು ಆ ಮಹಿಳೆಯನ್ನು ತಡೆದಿದ್ದಾರೆ. ಅರೆಬೆತ್ತಲೆ ಸೇವೆ ಸಲ್ಲಿಸಲು ಅವಕಾಶ ನೀಡಿಲ್ಲ’ ಎಂದು ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ತಿಳಿಸಿದ್ದಾರೆ.


Spread the love

About Laxminews 24x7

Check Also

ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: ಅಭಿಮಾನಿಗಳ ಮನೆಗಳಿಗೆ ಯಶ್​ ಭೇಟಿ

Spread the love ಗದಗ: ರಾಕಿಂಗ್ ಸ್ಟಾರ್ ಯಶ್ (Rocking star Yash) ಜನ್ಮದಿನದ ಹಿನ್ನೆಲೆಯಲ್ಲಿ ತಮ್ಮ ಊರಿನ ಬೀದಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ