Breaking News

ಪ್ರೇಮ’ಪಾಶ’ಕ್ಕೆ ಕೊರಳೊಡ್ಡಿದ ಎಂಬಿಎ ಪದವೀಧರೆ

Spread the love

ಉಡುಪಿ: ಪ್ರೇಮ ಪಾಶಕ್ಕೆ ಸಿಲುಕಿ ಎಂಬಿಎ ಪದವೀಧರ ನೇಣಿಗೆ ಶರಣಾದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಬ್ರಹ್ಮಾವರ ತಾಲೂಕು ಸಾಯ್ಬರಕಟ್ಟೆ ಸಮೀಪದ ಕಾಜ್ರಳ್ಳಿ ನಿವಾಸಿ ಅನಿಶಾ ಜಿ. ಪೂಜಾರಿ ಆತ್ಮಹತ್ಯೆಗೆ ಶರಣಾದ ಯುವತಿ. ಅನಿಶಾ ಮತ್ತು ಸತೀಶ್ ಶೆಟ್ಟಿ ಕಳೆದ ಐದಾರು ವರ್ಷಗಳಿಂದ ಪ್ರೀತಿಸುತ್ತಿದ್ದರು. ಪ್ರೀತಿ ಮದುವೆಯ ಹಂತಕ್ಕೆ ಬಂದಾಗ ಸತೀಶ್ ಮದುವೆಗೆ ಒಪ್ಪಿಲ್ಲ. ಅನಿಶಾ ಪರಿಪರಿಯಾಗಿ ಬೇಡಿದರೂ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಪ್ರಿಯತಮನಿಗೆ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅನಿಶಾ ಹೇಳಿದರು ಚೇತನ್ ಕಡೆಗಣಿಸಿದ್ದಾನೆ ಎಂದು ಮನೆಯವರು ದೂರುತ್ತಾರೆ. ಸತೀಶ್‍ಗೆ ಮದುವೆ ನಿಶ್ಚಯವಾಗಿದ್ದು, ಛತ್ರ ಬುಕ್ ಮಾಡಲು ಮುಂದಾಗಿದ್ದಾನೆ ಎಂದು ಕುಟುಂಬಕ್ಕೆ ಈಗ ಮಾಹಿತಿ ಸಿಕ್ಕಿದೆ. ಸತೀಶ್ ಗೆ ಸಂಬಂಧಪಟ್ಟ ಹಾಡಿಯಲ್ಲಿ ಯುವತಿ ನೇಣಿಗೆ ಶರಣಾಗಿದ್ದಾಳೆ.

ಸಾವಿಗೆ ಮುನ್ನ ನಾಲ್ಕು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದು, ನಂಬಿಸಿ ಮೋಸ ಮಾಡಿರುವ ಬಗ್ಗೆ ಗೆಳತಿಗೆ ಸಂದೇಶಗಳನ್ನು ಅನಿಶಾ ರವಾನಿಸಿದ್ದಾಳೆ. ತನ್ನ ಫೇಸ್‍ಬುಕ್ ನಲ್ಲಿ ಚೇತನ್ ಗರ್ಲ್ಸ್ ಹುಚ್ಚ ಎಂದು ಬರೆದು ಫೋಟೋ ಅಪ್ಲೋಡ್ ಮಾಡಿದ್ದಾಳೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಿಶಾ ಪೂಜಾರಿ ಸಾವಿನ ನಂತರ ಸತೀಶ್ ತಲೆಮರೆಸಿಕೊಂಡಿದ್ದಾನೆ.

ಪೊಲೀಸರು ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಿದ್ದು, ಬಿಲ್ಲವ ಸಂಘಟನೆ ಮಧ್ಯಪ್ರವೇಶದ ನಂತರ ಎಫ್‍ಐಆರ್ ದಾಖಲು ಮಾಡಿದ್ದಾರೆ. ಯುವತಿಯ ಆತ್ಮಹತ್ಯೆಗೆ ಸತೀಶ್ ಶೆಟ್ಟಿಯ ಪ್ರೇರಣೆಯೇ ಕಾರಣ ಎಂದು ದೂರಲಾಗಿದೆ. ಕುಟುಂಬ ನ್ಯಾಯ ಕೊಡಿಸಿ ಎಂದು ಕಣ್ಣೀರಿಡುತ್ತಿದೆ.


Spread the love

About Laxminews 24x7

Check Also

ನಗರಸಭೆಯ ಆಸ್ತಿ ತೆರಿಗೆ ಹಣ ದುರ್ಬಳಕೆ: ಇಬ್ಬರ ಬಂಧನ

Spread the loveಉಡುಪಿ: ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ