Breaking News

ಜೆಡಿಎಸ್​ ಮುಖಂಡನ ಪುತ್ರನ ಆತ್ಮಹತ್ಯೆ ಕೇಸ್​ಗೆ ಟ್ವಿಸ್ಟ್! ಲೇಡಿ ಎಸ್​ಐ ​ಜತೆಗಿನ ಲವ್ವಿಡವ್ವಿಯೇ ಮುಳುವಾಯ್ತಾ?

Spread the love

ಮೈಸೂರು: ಜೆಡಿಎಸ್​ ಮುಖಂಡ ಬೆಳವಾಡಿ ಶಿವಮೂರ್ತಿ ಅವರ ಪುತ್ರ ಪ್ರದೀಪ್ ಆತ್ಮಹತ್ಯೆ ಕೇಸ್​ಗೆ ಸ್ಫೋಟಕ ತಿರುವು ಸಿಕ್ಕಿದ್ದು, ಲೇಡಿ ಸಬ್‌ ಇನ್ಸ್‌ಪೆಕ್ಟರ್​ ಹೆಸರು ತಳುಕು ಹಾಕಿಕೊಂಡಿದೆ.

ನಿನ್ನೆ(ಡಿ.23) ರಾತ್ರಿ ಮರಟಿಕ್ಯಾತನಹಳ್ಳಿಯ ಅಪಾರ್ಟ್‌ಮೆಂಟ್​ನಲ್ಲಿ ಪ್ರದೀಪ್​ ನೇಣಿಗೆ ಶರಣಾಗಿದ್ದು, ಈ ಸಾವಿಗೆ ಲೇಡಿ ಸಬ್​ ಇನ್ಸ್‌ಪೆಕ್ಟರ್ ಜತೆಗಿನ ಪ್ರೇಮಪುರಾಣವೇ ಕಾರಣ ಎಂದು ಆಪ್ತ ವಲಯದಲ್ಲಿ ಗುಸುಗುಸು ಶುರುವಾಗಿದೆ.

 

ಪ್ರದೀಪ್​ ತಂದೆ ಬೆಳವಾಡಿ ಶಿವಮೂರ್ತಿ ಅವರು ಮೈಸೂರು ಜಿಲ್ಲಾ ಜೆಡಿಎಸ್​ನ ಖಜಾಂಚಿ. ಪ್ರದೀಪ್​ ತಾಯಿ ಭಾಗ್ಯ ಶಿವಮೂರ್ತಿ ಅವರು ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ. ಇನ್ನು ಪ್ರದೀಪ್​ಗೆ ಈಗಾಗಲೇ ಮದುವೆ ಆಗಿ ಇಬ್ಬರು ಮಕ್ಕಳಿದ್ದಾರೆ. ಆದರೂ ಲೇಡಿ ಸಬ್‌ಇನ್ಸ್‌ಪೆಕ್ಟರ್ ಜತೆ ವಿವಾಹೇತರ ಸಂಬಂಧ ಇತ್ತು ಎನ್ನಲಾಗಿದೆ. ಆ ಲೇಡಿ ಸಬ್‌ಇನ್ಸ್‌ಪೆಕ್ಟರ್​ಗೂ ಈಗಾಗಲೇ ಬೇರೊಬ್ಬರೊಂದಿಗೆ ಮದುವೆ ಆಗಿದ್ದು, ಒಂದು ಮಗು ಕೂಡ ಇದೆ.

ಪ್ರದೀಪ್​ ಮತ್ತು ಲೇಡಿ ಸಬ್​ ಇನ್​ಸ್ಪೆಕ್ಟರ್​ಗೆ ಬೇರೆ ಬೇರೆ ಮದುವೆ ಆಗಿದ್ದರೂ ಇವರಿಬ್ಬರ ನಡುವೆ ವಿವಾಹೇತರ ಸಂಬಂಧ ಇತ್ತಂತೆ. ನಿನ್ನೆ ರಾತ್ರಿ ಇವರಿಬ್ಬರೂ ಭೇಟಿ ಆಗಿದ್ದರಂತೆ. ಆ ವೇಳೆ ಯಾವುದೋ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆ ಗಲಾಟೆಯಾಗಿತ್ತು. ಇದರಿಂದ ಬೇಸತ್ತ ಪ್ರದೀಪ್​, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪ್ರದೀಪ್ ಸಾವಿನ ಕುರಿತು ಆಪ್ತ ವಲಯದಲ್ಲಿ ಗುಸುಗುಸು ಕೇಳಿಬರುತ್ತಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ