ಹಾಸನ: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿಯವರಿಗೆ ಸೇರಿದ ಕಾರ್ ಬೈಕ್ಗೆ ಡಿಕ್ಕಿಯಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹನುಮಂತನಗರದ ಬಳಿ ನಡೆದಿದೆ.
ಶಾಸಕರ ಕಾರ್ ಚಾಲಕ ಕಾರ್ನಲ್ಲಿ ಬೇಲೂರಿನತ್ತ ಬರುತ್ತಿದ್ದ.. ಈ ವೇಳೆ ಮುಂದೆ ಚಲಿಸುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ. ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಅಪಘಾತದಲ್ಲಿ ಸ್ಥಳದಲ್ಲೇ ಮಹಿಳೆ ಹೂವಮ್ಮ (55) ಸಾವನ್ನಪ್ಪಿದ್ದು, ಪುತ್ರನಿಗೆ ಗಂಭೀರ ಗಾಯವಾಗಿದೆ. ಕಾರ್ ರಿಪೇರಿಗಾಗಿ ಬೆಂಗಳೂರಿಗೆ ಹೋಗುತ್ತಿದ್ದುದಾಗಿ ಶಾಸಕರ ಕಾರ್ ಚಾಲಕ ಹೇಳಿದ್ದಾನೆ ಎನ್ನಲಾಗಿದೆ. ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7