Breaking News

ದುಪ್ಪಟ್ಟಾವನ್ನು ಹಗ್ಗದಂತೆ ಬಳಸಿ ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು ರಕ್ಷಿಸಿದ ನವದಂಪತಿ

Spread the love

ಶಿಮ್ಲಾ: ಚಚಂಬಾ ಜಿಲ್ಲೆಯಲ್ಲಿ ಹಠಾತ್ ಪ್ರವಾಹದಲ್ಲಿ ಸಿಲುಕಿದ್ದ ಬೈಕ್ ಸವಾರನನ್ನು ದುಪ್ಪಟ್ಟಾವನ್ನು ಹಗ್ಗದಂತೆ ಬಳಸಿ ಕುಟುಂಬವೊಂದು ಸುರಕ್ಷಿತವಾಗಿ ರಕ್ಷಿಸಿದೆ.

ಭತಿಯತ್‌ನ ಭರ್ಮಲಾ ಪ್ರದೇಶದ ಕಾಕಿಯಾರಾ-ತುನುಹಟ್ಟಿ ರಸ್ತೆಯಲ್ಲಿ ನಡೆದಿದ್ದು, ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯು ಹಠಾತ್ ಜಲಾವೃತಗೊಂಡು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ಘಟಾಶ್ನಿಯ ಮಾಮ್ಲಾ ಗ್ರಾಮದ ಬೈಕ್ ಸವಾರನೋರ್ವ ನೀರಿನ ಮಧ್ಯೆ ಸಿಲುಕಿ ಪರದಾಡುತ್ತಿದ್ದರು. 

ಇದೇ ವೇಳೆ ಅದೇ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಹೋಗುತ್ತಿದ್ದ ಕುಟುಂಬವೊಂದು ಬೈಕ್ ಸವಾರನ ಪರಿಸ್ಥಿತಿ ಕಂಡು ವಾಹನ ನಿಲ್ಲಿಸಿದ್ದಾರೆ. ಕೂಡಲೇ ನವದಂಪತಿ ಸಹಾಯಕ್ಕೆ ಧಾವಿಸಿದ್ದು, ನವವರ ತನ್ನ ಪತ್ನಿ ಬಳಿಯಿದ್ದ ದುಪ್ಪಟ್ಟಾವನ್ನು ಹಗ್ಗದಂತೆ ಬಳಸಿ ಬೈಕ್ ಸವಾರನ ಕಡೆಗೆ ಎಸೆದರು. ಬೈಕ್ ಸವಾರ ದುಪ್ಪಟ್ಟಾವನ್ನು ಗಟ್ಟಿಯಾಗಿ ಹಿಡಿದುಕೊಂಡಾಗ ಕುಟುಂಬದ ಸದಸ್ಯರು ತಮ್ಮ ಕಡೆಗೆ ಬಟ್ಟೆಯನ್ನು ಎಳೆದು ರಕ್ಷಿಸಿದರು.

ಪ್ರವಾಹ ಪೀಡಿತ ರಸ್ತೆಯ ಬಳಿ ನಿಂತು ಮಹಿಳೆಯರು ದೂಪಟ್ಟಾದ ಮೂಲಕ ಬೈಕ್ ಸವಾರನನ್ನು ರಕ್ಷಿಸುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕುಟುಂಬದ ಧೈರ್ಯದಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಅವರ ಈ ಸಾಹಸ ಕಾರ್ಯವು ಆನ್‌ಲೈನ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು, ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಸಹಾಯ ಮಾಡಲು ತಮ್ಮ ಸ್ವಂತ ಸುರಕ್ಷತೆಯನ್ನು ಪಣಕ್ಕಿಟ್ಟಿದ್ದಕ್ಕಾಗಿ ಅನೇಕರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ


Spread the love

About Laxminews 24x7

Check Also

ಬಸವರಾಜ್ ಹೇಳಿದಂತೆ ಕೆಲಸ ಮಾಡಿದ್ದೇನೆ – ಸಿಐಡಿ ಮುಂದೆ ಗ್ಯಾನೇಂದ್ರ ತಪ್ಪೊಪ್ಪಿಗೆ

Spread the loveಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ  ಪಶುವೈದ್ಯಾಧಿಕಾರಿ ನೇಮಕ ಅಕ್ರಮ ಪ್ರಕರಣಕ್ಕೆ ತನಿಖೆ ತೀವ್ರಗೊಂಡಿದ್ದು, ಸಿಐಡಿ ಅಧಿಕಾರಿಗಳ ಮುಂದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ