Breaking News

ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳಕರರಿಗೆ ಪಿತೃಶೋಕ

Spread the love

ಕರ್ನಾಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹೇಮಂತ ನಿಂಬಾಳಕರರಿಗೆ ಪಿತೃಶೋಕ; ಡಾ. ಅಂಜಲಿತಾಯಿ ನಿಂಬಾಳಕರರ ಮಾವರ ನಿಧನ.

: ಕರ್ನಾಟಕ ರಾಜ್ಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ADGP) ಮಾನ್ಯ ಶ್ರೀ ಹೇಮಂತ ನಿಂಬಾಳಕರ ಅವರ ತಂದೆ ಹಾಗೂ ಖಾನಾಪೂರದ ಮಾಜಿ ಶಾಸಕಿ ಮತ್ತು ಎಐಸಿಸಿ ಕಾರ್ಯದರ್ಶಿ ಡಾ. ಅಂಜಲಿ ಹೇಮಂತ ನಿಂಬಾಳಕರ ಅವರ ಮಾವರಾದ ಶ್ರೀ ಮಧುಕರರಾವ್ ಬಾಳವಂತರಾವ್ ನಿಂಬಾಳಕರ (ವಯಸ್ಸು 87 ವರ್ಷ) ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ರಾತ್ರಿ ನಿಧನರಾದರು.

ದಿವಂಗತ ಮಧುಕರರಾವ್ ನಿಂಬಾಳಕರರು ಶಾಂತ, ಸಂಯಮಿ ಹಾಗೂ ಸಮಾಜಮುಖಿ ವ್ಯಕ್ತಿತ್ವವಾಗಿ ಪರಿಚಿತರಾಗಿದ್ದರು. ಅವರ ಅಂತ್ಯಕ್ರಿಯೆ ಇಂದು ಮಂಗಳವಾರ 28ರಂದು ಮಧ್ಯಾಹ್ನ 12 ಗಂಟೆಗೆ ಕೊಲ್ಹಾಪುರದ ಶಿವಾಜಿ ಸೇತುವೆ ಸಮೀಪ ಪಂಚಗಂಗಾ ನದಿತೀರದಲ್ಲಿರುವ ವೈಕುಂಠಭೂಮಿಯಲ್ಲಿ ನೆರವೇರಿಸಲಾಗುತ್ತದೆ.

ಖಾನಾಪೂರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಸೇರಿದಂತೆ ಎಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ನಿಂಬಾಳಕರ ಕುಟುಂಬದ ದುಃಖದಲ್ಲಿ ಭಾಗಿಯಾಗುತ್ತಾ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ