Breaking News
Home / new delhi / : ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ ‘ ಉಚಿತ ಲಸಿಕೆ ನೀಡಿ..ಇಲ್ಲವೇ ಅಧಿಕಾರ ಬಿಡಿ’

: ಸರ್ಕಾರದ ವಿರುದ್ಧ ಕರವೇ ಪ್ರತಿಭಟನೆ ‘ ಉಚಿತ ಲಸಿಕೆ ನೀಡಿ..ಇಲ್ಲವೇ ಅಧಿಕಾರ ಬಿಡಿ’

Spread the love

ಬೆಳಗಾವಿ : ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಾಕರ್ತರು ತಾಲೂಕಾಧ್ಯಕ್ಷರಾದ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ #ಉಚಿತ_ಲಸಿಕೆ_ಕೊಡಿ_ಇಲವೇ_ ಅಧಿಕಾರ ಬಿಡಿ ಎಂದು ಕೇಂದ್ರ ಸರಕಾರದ ವಿರುದ್ಧ ನಗರದ ವಾಲ್ಮೀಕಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

 

*ಹಕ್ಕೊತ್ತಾಯಗಳು*

 

*1. ಉಚಿತ ಲಸಿಕೆ*

 

ರಾಜ್ಯದ ಎಲ್ಲ ನಾಗರಿಕರಿಗೂ ಬಡವ-ಶ್ರೀಮಂತನೆಂಬ ಭೇದವಿಲ್ಲದೆ ಉಚಿತವಾಗಿಯೇ ಲಸಿಕೆ ಕೊಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣಕ್ಕೆ ಸಿಗುವ ಲಸಿಕೆಯಿಂದಾಗಿ ಅಸಮಾನತೆ ಸೃಷ್ಟಿಯಾಗುತ್ತದೆ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತವಾಗಿಯೇ ಲಸಿಕೆ ನೀಡಬೇಕು. ಹಲವಾರು ದೇಶಗಳಲ್ಲಿ ಯಾವ ರೀತಿ ಒಂದೇ ಒಂದು ಲಸಿಕೆಯನ್ನು ಮಾರಾಟಕ್ಕೆ ಇಟ್ಟಿಲ್ಲವೋ ಹಾಗೆಯೇ ಭಾರತದಲ್ಲೂ ಸಹ ಲಸಿಕೆ ಮಾರಾಟದ ವಿಷಯವಾಗಬಾರದು. ಖಾಸಗಿ ಆಸ್ಪತ್ರೆ, ಸಂಸ್ಥೆಗಳಿಗೆ ನೀಡಿರುವ ಶೇ 25 ರಷ್ಟು ವ್ಯಾಕ್ಸಿನ್ ಕೊಳ್ಳುವ ಅವಕಾಶವನ್ನು ರದ್ದುಗೊಳಿಸಿ, ನೂರಕ್ಕೆ ನೂರು ಲಸಿಕೆಗಳು ಉಚಿತವಾಗಿಯೇ, ಸರ್ಕಾರದಿಂದಲೇ ನೀಡಬೇಕು.

 

*2. ಕಾಲಮಿತಿಯೊಳಗೆ ಲಸಿಕೆ*

 

ಕೋವಿಡ್ ಮೂರನೇ ಅಲೆ ಅಕ್ಟೋಬರ್ ತಿಂಗಳಿನಲ್ಲಿ ಆರಂಭವಾಗಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಿರುವುದರಿಂದ ಸೆಪ್ಟೆಂಬರ್ ಅಂತ್ಯದೊಳಗೆ ಎರಡೂ ಡೋಸ್ ಲಸಿಕೆಗಳನ್ನು ಕರ್ನಾಟಕದ ಸಮಸ್ತ ಜನತೆಗೆ ನೀಡಬೇಕು. ಜೂನ್ ಅಂತ್ಯದೊಳಗೆ ಮೊದಲನೇ ಡೋಸ್ ನೀಡಬೇಕು. ಸೆಪ್ಟೆಂಬರ್ ಅಂತ್ಯದೊಳಗೆ ಎರಡನೇ ಡೋಸ್ ನೀಡಿ, ಲಸಿಕಾ ಅಭಿಯಾನವನ್ನು ಪೂರ್ಣಗೊಳಿಸಬೇಕು. ಲಸಿಕೆ ಇಲ್ಲದೆ ಜನರು ಸಾಯುವಂಥ ಸ್ಥಿತಿಯನ್ನು ನಿರ್ಮಾಣ ಮಾಡಬಾರದು.

 

*3. ಮನೆಮನೆಗೆ ಲಸಿಕೆ*

 

ಸರ್ಕಾರ ಕೂಡಲೇ ಚುನಾವಣೆ ಸಂದರ್ಭದ ಮತದಾನ ಬೂತ್ ಗಳ ಮಾದರಿಯಲ್ಲಿ ಕೋವಿಡ್ ಲಸಿಕೆ ಬೂತ್ ಸ್ಥಾಪಿಸಬೇಕು. ನೂಕುನುಗ್ಗಲು, ಜನದಟ್ಟಣೆ ಆಗದಂತೆ‌ ಎಲ್ಲ‌ ನಾಗರಿಕರು ಸುಲಭವಾಗಿ ವ್ಯಾಕ್ಸಿನ್ ಪಡೆಯುವಂಥ ಸ್ಥಿತಿ ನಿರ್ಮಾಣ ಮಾಡಬೇಕು.‌ ಸಾಧ್ಯವಾದರೆ ಮನೆಮನೆಗೂ ತೆರಳಿ ಲಸಿಕೆ‌ ನೀಡುವಂಥ ವ್ಯವಸ್ಥೆ ಜಾರಿಗೊಳಿಸಬೇಕು. ಲಸಿಕೆ ನೀಡಿಕೆಗೆ ಸರ್ಕಾರ ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಬೇಕು.‌ ಸ್ಮಾರ್ಟ್ ಫೋನ್ ಇಲ್ಲದ,‌ ರಿಜಿಸ್ಟ್ರೇಷನ್ ಮಾಡಿಸಲು ಗೊತ್ತಾಗದ ಹಳ್ಳಿಗಾಡಿನ ಜನರ ಸಮಸ್ಯೆ ನೀಗಿಸಬೇಕು.

 

4. ತಾರತಮ್ಯವಿಲ್ಲದ ಲಸಿಕೆ

 

ಒಕ್ಕೂಟ ಸರ್ಕಾರ ಮೊದಲ ಹಂತದ ಲಸಿಕೆ ಹಂಚಿಕೆಗಳಲ್ಲಿ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಪ್ರಮಾಣದ ಲಸಿಕೆ ಹಂಚಿಕೆ‌ ಮಾಡಿ, ದಕ್ಷಿಣದ ರಾಜ್ಯಗಳಿಗೆ ಕಡಿಮೆ ಪ್ರಮಾಣದಲ್ಲಿ ಹಂಚಿಕೆ ಮಾಡಿರುವುದು ಅಂಕಿಅಂಶಗಳಲ್ಲಿ ಬಯಲಾಗಿದೆ. ಒಕ್ಕೂಟ ಸರ್ಕಾರ ಆಕ್ಸಿಜನ್, ವೆಂಟಿಲೇಟರ್, ರೆಮ್ಡಿಸಿವಿರ್, ಆಂಫೋಟೆರಿಸಿನ್ ಬಿ ಇತ್ಯಾದಿಗಳ ಹಂಚಿಕೆ ಸಂದರ್ಭದಲ್ಲೂ ಕರ್ನಾಟಕದ ಪಾಲನ್ನು ಕಡಿಮೆ ಮಾಡಿ, ಗುಜರಾತ್ ಮತ್ತು ಉತ್ತರದ ರಾಜ್ಯಗಳಿಗೆ ಹೆಚ್ಚು ನೀಡಿದೆ. ಈ ತಾರತಮ್ಯವನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜೂನ್ 21 ರಿಂದ ಒಕ್ಕೂಟ ಸರ್ಕಾರ ನೀಡುವ ಲಸಿಕೆಗಳು ವೈಜ್ಞಾನಿಕವಾಗಿ, ಜನಸಂಖ್ಯೆ ಆಧರಿಸಿ ಹಂಚಿಕೆಯಾಗಬೇಕು.

 

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಸಂಚಾಲಕ ಕೃಷ್ಣಾ ಖಾನಪ್ಪನವರ , ಹನೀಪಸಾಬ ಸನದಿ , ಮುಗುಟ ಪೈಲ್ವಾನ್ , ದೀಪಕ ಆಶಿ , ರಾಜೇಂದ್ರ ಕೆಂಚನಗುಡ್ಡ , ಪ್ರತೀಕ ಪಾಟೀಲ ಉಪಸ್ಥಿತರಿದ್ದರು.


Spread the love

About Laxminews 24x7

Check Also

‘ತೇಜಸ್ವಿ ಸೂರ್ಯ’ ವಿರುದ್ಧ ಪ್ರಕರಣ ದಾಖಲು

Spread the love‘ತೇಜಸ್ವಿ ಸೂರ್ಯ’ ವಿರುದ್ಧ ಪ್ರಕರಣ ದಾಖಲು ಬೆಂಗಳೂರು: ‘ಎಕ್ಸ್’ ಹ್ಯಾಂಡಲ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಧರ್ಮದ ಆಧಾರದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ