Breaking News

ಒಳಮೀಸಲಾತಿ ಕುರಿತು ಇದೆ 27ರ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಆಹಾರ ಸಚಿವ:- ಕೆಹೆಚ್. ಮುನಿಯಪ್ಪ

Spread the love

ಬೆಂಗಳೂರು: ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ‌ ಹಾಗೂ ಅಬಕಾರಿ ಸಚಿವರಾದ ಆರ್ .ಬಿ.ತಿಮ್ಮಾಪುರ ರವರ ನೇತೃತ್ವದಲ್ಲಿ ನಿಯೊಗವು ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಬೇಟಿ‌ ಮಾಡಿ ಚರ್ಚಿಸಿದರು
ನೇಮಕಾತಿಯಲ್ಲಿ ಒಳಮೀಸಲಾತಿ ಹಳವಡಿಸಿ ನೇಮಕಾತಿ ಪ್ರಕ್ರಿಯೆಯಾಗಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು
ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಒಳಮೀಸಲಾತಿ ಅನುಷ್ಠಾನಗೊಳಿಸಲು ನಮ್ಮ ಸರ್ಕಾರಕ್ಕೆ ಬದ್ದತೆ ಇದ್ದು ನಾವು ಒಳಮೀಸಲಾತಿ ‌ಅನುಷ್ಠಾನ ಮಾಡುವಲ್ಲಿ ನಾವು ಯಾವುದೇ ವ್ಯತ್ಯಾಸಗಳಾಗದಂತೆ ಸರ್ಕಾರವು ನೂರೊಂದು ಜಾತಿಗಳಿಗೂ ಸರಿ ಸಮನಾದ ನ್ಯಾಯವನ್ನು ಒದಗಿಸಿಕೊಡಲಿದೆ ಎಂದರು

ಒಳಮೀಸಲಾತಿ ವಿಚಾರವಾಗಿ ಅನಗತ್ಯ ಹೇಳಿಕೆಗಳು ಹಾಗು ಹೋರಾಟಗಳನ್ನು ಯಾವ ಸಂಘಟನೆಯೂ ಮಾಡದಂತೆ ಮನವಿ ಮಾಡಿದರು ವಿಧಾನ ಸಭೆಯ ಅಧಿವೇಶನ ಮುಗಿದ ನಂತರ ಇದೆ ತಿಂಗಳ 27 ರಂದು ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದಿದ್ದು ಅಂದು ಅದರ ಕುರಿತು ಚರ್ಚಿಸಿ ಅಂತಿಮ‌ ತೀರ್ಮಾನವನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರು ತೆಗೆದುಕೊಳ್ಳಲಿದ್ದಾರೆ ಎಂದರು.

ಈ ವೇಳೆ ನಿಯೋಗದಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಮಾಜಿ ಸಂಸದ ಚಂದ್ರಪ್ಪ,ಹಾಗೂ ಮಾಜಿ ಸಚಿವ ಆಂಜನೇಯ ಶಾಸಕರಾದ ಶ್ರೀನಿವಾಸ್,ಬಸವಂತಪ್ಪ,ಸುದಾಮದಾಸ್,ತಿಮ್ಮಯ್ಯ,ಹಾಗೂ ವಸಂತ ಕುಮಾರ್ ಹಾಗೂ ಮುಖಂಡರು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ