ಚಿಕ್ಕೋಡಿ: ಮಾಜಿ ಸಿಎಂ ಸಿದ್ದರಾಮಯ್ಯನವರ ಭಾಷಣದ ವೇಳೆ ಕಂಠಪೂರ್ತಿ ಕುಡಿದು ಹೌದೋ ಹುಲಿಯಾ ಎಂದು ಕೂಗಿ ಖ್ಯಾತಿ ಗಳಿಸಿದ್ದ ಪೀರಪ್ಪ ಕಟ್ಟಿಮನಿ ಇದೀಗ ಲಾಕ್‌ಡೌನ್ ಹಿನ್ನೆಲೆ ತಾನೂ ಕುಡಿತ ಬಿಟ್ಟು ಇತರರಿಗೂ ಕುಡಿಯಬೇಡಿ ಎನ್ನುತ್ತಿದ್ದಾರಂತೆ.
ಕುಡಿದು ಬಂದ್ರೆ ಕುಟುಂಬದಲ್ಲಿ ಜಗಳವಾಗುತ್ತೆ, ಬಡತನ ಬರುತ್ತೆ, ನಾನು ಬಿಟ್ಟಿದ್ದೀನಿ.. ನೀವೂ ಬಿಡಿ ಅಂತ ಪೀರಪ್ಪ ಹೇಳುತ್ತಿದ್ದಾರಂತೆ. ಅಲ್ಲದೇ, ಸೆಲ್ಫಿ ತೆಗೆದುಕೊಳ್ಳುವವರು ನನಗೆ ಹಣ ನೀಡುತ್ತಿದ್ದರು, ಅದಕ್ಕೆ ನಾನು ಕುಡಿಯುತ್ತಿದ್ದೆ ಅಂತ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಐನಾಪುರ ಗ್ರಾಮದ ನಿವಾಸಿಯಾಗಿರುವ ಪೀರಪ್ಪ ಕಟ್ಟಿಮನಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ
Laxmi News 24×7