Breaking News

ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು.: ಎಸ್ಪಿ ಲಕ್ಷ್ಮಣ ನಿಂಬರಗಿ

Spread the love

ಬೆಳಗಾವಿ: ವಿಶ್ವಾದಾದ್ಯಂತ ಕೊರೊನಾ ವೈರಸ್ ವ್ಯಾಪಿಸಿದೆ. ಜನರು ಸಹ ಸೋಂಕು ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಸರ್ಕಾರದ ನಿಯಮಾನುಸಾರವಾಗಿ ನಡೆದರೆ ಹರಡುವಿಕೆಯನ್ನು ತಡೆಯಬಹುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದರು.

ಇಂದು ಕಚೇರಿಯಲ್ಲಿ ವಿಡಿಯೋದರಲ್ಲಿ ಮಾತನಾಡಿದ ಅವರು, ಎಲ್ಲ ದೇಶಗಳಲ್ಲಿ ಕೊರೊನಾ ವ್ಯಾಪಿಸಿಕೊಂಡಿದೆ. ಗುಂಪು ಗುಂಪು ತಿರುಗಾಡುವುದು, ರೈಲು ಸಂಚಾರ ತಿರುಗಾಡುವುದರಿಂದ ಹರಡುವಿಕೆಯನ್ನು ತಡೆಯಬಹುದು. ಸರ್ಕಾರದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿದ್ದೆ ಆದಲ್ಲಿ ಹತೋಟೆಗೆ ತರಬಹುದಾಗಿದೆ ಎಂದರು.

ಸರ್ಕಾರ, ಪೊಲೀಸ್ ಇಲಾಖೆ ನಿಮ್ಮೊಂದಿಗೆ ಇದೆ. ಜನರು ಭಯ ಪಡುವ ಅಗತ್ಯವಿಲ್ಲ. ಎಲ್ಲರೂ ಒಗ್ಗಟ್ಟಾಗಿ ನಿಯಮಗಳನ್ನು ಪಾಲಿಸಿದರೇ ಈ ಸವಾಲನ್ನು ಎದುರಿಸಬಹುದಾಗಿದೆ. ಜಿಲ್ಲಾಧಿಕಾರಿಗಳು ಜಿಲ್ಲಾದಾದ್ಯಂತ 144 ಸೆಕ್ಷನ್ ಜಾರಿ ಮಾಡಿದ್ದಾರೆ. ಜಾತ್ರೆ , ಹಬ್ಬ, ದಾಬಾ, ಸಿನಿಮಾ ಮಂದಿರ ಸೇರಿದಂತೆ ವಾಹನ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದರು.

ಜನರಿಗೆ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲಾಗಿದ್ದು, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಜನರು ಶಿಸ್ತು, ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಗತ್ಯ ಸೇವೆ ಸಲ್ಲಿಸುವಂತವರು ತಮ್ಮ ಸಂಸ್ಥೆ ನೀಡುವಂತಹ ಐಡಿ ಕಾರ್ಡ್ ಹೊಂದಿರಬೇಕು. ಆಗ ಪೊಲೀಸರು ಯಾವುದೇ ರೀತಿ ತಡೆಯುವುದಿಲ್ಲ ಎಂದು ಹೇಳಿದ್ದಾರೆ.

ಯಾವುದೇ ರೀತಿ ಜನರು ಅಗತ್ಯ ವಸ್ತುಗಳಿಗೆ ಸಿಗಲಿಲ್ಲವೆಂದು ಭಯ ಬೀತರಾಗುವ ಬೇಡ. ತೊಂದರೆಯಾದ ಜಿಲ್ಲಾ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ ಎಂದು ಹೇಳಿದರು.


Spread the love

About Laxminews 24x7

Check Also

ಬಂಟ್ವಾಳ ರಹಿಮಾನ್ ಹತ್ಯೆ..ಮತ್ತೆ ಪ್ರತೀಕಾರದ ಪೋಸ್ಟರ್: ಮಂಗಳೂರಿನಲ್ಲಿ ಏನೇನಾಯ್ತು?

Spread the loveಮಂಗಳೂರು, (ಮೇ 29): ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆಯಾಗಿ ತಿಂಗಳು ಕಳೆದಿಲ್ಲ. ಅಷ್ಟರಲ್ಲೇ ಕಡಲನಗರಿ ಮಂಗಳೂರಿನಲ್ಲಿ ಮತ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ