ಬೆಂಗಳೂರು: ಪಾದರಾಯನಪುರದಲ್ಲಿ ನಡೆಸಿದ ಸಮುದಾಯದ ಪರೀಕ್ಷೆಯಲ್ಲಿ ಬರೋಬ್ಬರಿ 7 ಮಂದಿಯಲ್ಲಿ ಸೋಂಕು ಇರೋದು ಪತ್ತೆಯಾಗಿದೆ. ಆದ್ರೆ ಏಳು ಮಂದಿ ಸದ್ಯ ಎಲ್ಲಿದ್ದಾರೆ ಎಂಬ ವಿಚಾರವೇ ನಿಗೂಢವಾಗಿದೆ. ಪರೀಕ್ಷೆ ವೇಳೆ ನೀಡಿದ ಇವರ ಮೊಬೈಲ್ ನಂಬರ್ ಗಳು ಸ್ವಿಚ್ಛ್ ಆಫ್ ಆಗಿವೆ.
ಏಳು ಮಂದಿಗೆ ಸೋಂಕು ತಗುಲಿರೋದು ದೃಢವಾಗ್ತಿದ್ದಂತೆ ಪಾದರಾಯನಪುರದಲ್ಲಿ ಸಮುದಾಯಕ್ಕೆ ಸೋಂಕು ಹಬ್ಬಿದ್ಯಾ ಎಂಬ ಅನುಮಾನ ಮೂಡುತ್ತಿದೆ. ಕೋವಿಡ್-19 ಪರೀಕ್ಷೆ ವೇಳೆ 261 ಮಂದಿ ಪೈಕಿ 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬಾಗಲಕೋಟೆ, ಬೆಳಗಾವಿಯಂತೆ ಬೆಂಗಳೂರಿಗೂ ತಬ್ಲಿಘಿಗಳ ಕಾಟ ಶುರುವಾಗಿದೆ. 7 ಮಂದಿ ತಬ್ಲಿಘಿಗಳು ಮೊಬೈಲ್ ಸ್ವಿಚ್‍ಆಫ್ ಮಾಡಿಕೊಂಡು ನಾಪತ್ತೆಯಾಗಿರೋದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ರೋಗಿ ನಂಬರ್ 860 ವಾರ್ಡ್ ಬಾಯ್ ವಾಸವಿದ್ದ ಬ್ಯಾಡರಹಳ್ಳಿಯ ರಸ್ತೆಯನ್ನ ಸೀಲ್‍ಡೌನ್ ಮಾಡಲಾಗಿದೆ. ಈತನ ಸ್ನೇಹಿತನು ಕೂಡ ಇಲ್ಲಿ ಓಡಾಡ್ತಿದ್ದ. ಇನ್ನು ವಾರ್ಡ್ ಬಾಯ್ ತಾನು ಮನೆಗೆ ಬಂದಿಲ್ಲ ಅಂತಾ ಹೇಳ್ತಿದ್ದು ಟ್ರಾವೆಲ್ ಹಿಸ್ಟರಿ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.