ಹುಬ್ಬಳ್ಳಿ : ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ರಾಷ್ಟ್ರಧ್ವಜ ವಿಚಾರದಲ್ಲಿ ಡೋಂಗಿ ರಾಜಕೀಯ ಇರಬಾರದು ಅಂತ ಹೇಳಿದ್ದೆ. ಹಿಂದೆ ಆರ್ ಎಸ್ ಎಸ್ ನ ಕೆಲವರು ರಾಷ್ಟ್ರಧ್ವಜ ಬೇಡ ಅಂದಿದ್ದವರು. ನಮ್ಮ ರಾಷ್ಟ್ರಧ್ವಜ, ಸಂವಿಧಾನ, ಪ್ರಜಾಪ್ರಭುತ್ವ ವಿರೋಧ ಮಾಡಿದ್ದರು. ಆರ್ ಎಸ್ ಎಸ್ ನವರು ನಾಗರಪುರದ ಕಚೇರಿಯ ಮೇಲೆ ಎಂದಾದರೂ ತ್ರಿವರ್ಣ ಧ್ವಜ …
Read More »ಅಭಿನವ ಕಾಡಸಿದ್ದೇಶ್ವರ ಸ್ವಾಮಿಜಿ ಕಾರು ಅಪಘಾತ
ಬಾಗಲಕೋಟೆ: ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಸ್ವಾಮೀಜಿ ಸೇರಿದಂತೆ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೋಗುಣಸಿ ತಾಂಡಾ ಬಳಿ ಸ್ವಾಮೀಜಿ ಅವರ ಕಾರು ನೀಲಗಿರಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಭಿನವ ಕಾಡಸಿದ್ದೇಶ್ವರ ಸ್ವಾಮೀಜಿ ಹಾಗೂ ಕಾರು ಚಾಲಕ ಸೇರಿದಂತೆ ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಗದಗ ಜಿಲ್ಲೆ ಹಾಲಕೇರಿಯಿಂದ ಗುಳೇದಗುಡ್ಡ ಪಟ್ಟಣಕ್ಕೆ ತೆರಳುತ್ತಿದ್ದ ವೇಳೆ ಕಾರು ಚಾಲಕನ ನಿಯಂತ್ರಣತಪ್ಪಿ ನೀಲಗಿರಿ ಮರಕ್ಕೆ ಡಿಕ್ಕಿ …
Read More »ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಲಯ 2ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ್ ಎಸಿಬಿ ಬಲೆಗೆ
ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ (Hubli-Dharwad Municipal Corporation ) ವಲಯ 2ರ ಬಿಲ್ ಕಲೆಕ್ಟರ್ ವೆಂಕಟೇಶ ದಾಸರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಪಹಣಿ ನೀಡಲು ಬಾರ್ & ರೆಸ್ಟೋರೆಂಟ್ ಒಂದರಲ್ಲಿ ಗುರುರಾಜ ಗಾಳಿ ಎಂಬುವರಿಂದ 6,000 ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಎಸಿಬಿ ಡಿವೈಎಸ್ಪಿ ಮಹಾಂತೇಶ್ವರ ಜಿದ್ದಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ವೆಂಕಟೇಶ ದಾಸರ್ ಅವರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು IPS ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ಸರ್ಕಾರ ಇಬ್ಬರು IPS ಅಧಿಕಾರಿಗಳನ್ನು …
Read More »ಹುಬ್ಬಳ್ಳಿಯ ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರ ಕಾರು ಅಪಘಾತವಾಗಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯ (Hubli) ಬಿವಿಬಿ (BVB) ಕಾಲೇಜ್ ಕ್ಯಾಂಪಸ್‌ನಲ್ಲಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ( Basavaraj Horatti ) ಅವರ ಕಾರು ಅಪಘಾತವಾಗಿದೆ. ಬೈಕ್ ಸವಾರ ಕೆಂಚಪ್ಪಗೆ ಗಂಭೀರ ಗಾಯವಾಗಿದ್ದು, ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ಕೆಂಚಪ್ಪ ಸವದತ್ತಿ ಮೂಲದ ಜೆಸಿಬಿ ಆಪರೇಟರ್ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯ ಬಿವಿಬಿ ಕಾಲೇಜ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮವೊಂದು …
Read More »ಮತ್ತೆ ಸಿ ಎಂ ಬದಲಾವಣೆ ಚರ್ಚೆ ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಹೇಳಿದ್ದೇನು?
ಹುಬ್ಬಳ್ಳಿ: ಸದ್ಯ ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ. ನನಗೆ ಪಕ್ಷದ ವರಿಷ್ಠರು ಕರೆ ಮಾಡಿ ಸಿಎಂ ಹುದ್ದೆ ಬಗ್ಗೆ ಮಾತನಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಈ ರೀತಿಯಾಗಿ ಗಾಳಿ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದರು. ಸಿದ್ದರಾಮೋತ್ಸವದಿಂದ ಬಿಜೆಪಿಗೆ ಏನು ಆಗಿಲ್ಲ. ಆದರೆ, ಆ ಕಾರ್ಯಕ್ರಮದಿಂದ ಕಾಂಗ್ರೆಸ್ಗೆ ಸೈಡ್ …
Read More »ಹುಬ್ಬಳ್ಳಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿ, ಓರ್ವ ಮಹಿಳೆ ಗಾಯಗೊಂಡಿದ್ದಾರೆ.
ಹುಬ್ಬಳ್ಳಿ: ನಗರದ ಹೊರವಲಯದ ಪುಣೆ-ಬೆಂಗಳೂರು ರಸ್ತೆಯಲ್ಲಿ ರಸ್ತೆ ದುರಂತ ಸಂಭವಿಸಿ ಒಂದೇ ಕುಟುಂಬದ ಮೂವರು ಸಾವನ್ನದ್ದಾರೆ. ಓರ್ವ ಮಹಿಳೆ ಗಂಭೀರವಾಗಿ ಗಾಯಗೊಂಡರು. ಹುಬ್ಬಳ್ಳಿ ಸಮೀಪದ ಜಿಗಳೂರ ಗ್ರಾಮದ ಬಳಿ ದುರ್ಘಟನೆ ನಡೆಯಿತು. ಮೃತರನ್ನು ಹನಮಂತಪ್ಪ ಬೇವಿನಕಟ್ಟ ಮತ್ತು ಪತ್ನಿ ರೇಣುಕಾ ಬೇವಿನಕಟ್ಟಿ ಹಾಗು ಅಳಿಯ ರವೀಂದ್ರ ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ದರ್ಗಾಗೆ ಗುದ್ದಿದೆ. ಪರಿಣಾಮ, ಕಾರಿನಲ್ಲಿದ್ದ ಮೂವರೂ ಸ್ಥಳದಲ್ಲೇ ಕೊನೆಯುಸಿರೆಳೆದರು. ಬೆಂಗಳೂರಿನಲ್ಲಿ …
Read More »ಲೋಡ್ ತುಂಬಿದ ಲಾರಿಯಿಂದ ಕುಸಿದ ನಾಲಾ ಬ್ರಿಡ್ಜ್
ಲೋಡ್ ಲಾರಿಯೊಂದು ನಾಲಾ ಬ್ರಿಡ್ಜ್ ಬಳಿ ಸಾಗುತ್ತಿದ್ದ ಸಂದರ್ಭದಲ್ಲಿ ನಾಲಾ ಕುಸಿದುಗೊಂಡ ಘಟನೆ ಹುಬ್ಬಳ್ಳಿಯ ತುಮಕೂರು ಓಣಿ ನಾಲಾ ಬ್ರಿಡ್ಜ್ ಬಳಿ ನಡೆದಿದೆ. ಹುಬ್ಬಳ್ಳಿಯ ವಾರ್ಡ್ ನಂ. 65 ರಲ್ಲಿ ಬರುವ ತುಮಕೂರ ಓಣಿಯಲ್ಲಿ ಲೋಡ್ ಲಾರಿಯಿಂದ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಯಿತು. ಲಾರಿಯ ಭಾರವನ್ನು ತಾಳಲಾರದೆ ಕುಸಿದು ಸಿಕ್ಕಾಕಿಕೊಂಡಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೂರ್ವ ಸಂಚಾರಿ ಠಾಣೆಯ ಪೊಲೀಸರು …
Read More »ಸಿದ್ದು ಕಾರ್ಯಕ್ರಮಕ್ಕೆ ಸಾಕಷ್ಟು ಪ್ರಯತ್ನಿಸಿ, ಹೆಚ್ಚಿನ ಹಣ ಖರ್ಚು ಮಾಡಿ ಜನ ಸೇರಿಸಿದ್ದಾರೆ.: ಶೆಟ್ಟರ್
ಹುಬ್ಬಳ್ಳಿ: ಸಿದ್ದರಾಮಯ್ಯ “ಅಮೃತಮಹೋತ್ಸವ’ದಿಂದ ಹಾನಿಯಾಗುವುದು ಕಾಂಗ್ರೆಸ್‌ಗೇ ಹೊರತು ಬಿಜೆಪಿಗಲ್ಲ. 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾದ ಜನ್ಮದಿನ ಆಚರಣೆಯಿಂದ ಬಿಜೆಪಿ ಬೆಳವಣಿಗೆ, ಸಂಘಟನೆ, ವ್ಯವಸ್ಥೆಗೆ ಯಾವುದೇ ರೀತಿ ಧಕ್ಕೆಯಾಗುವುದಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ರಾಹುಲ್ ಗಾಂಧಿ ಸೂಚನೆ ಮೇರೆಗೆ ಕೃತಕವಾಗಿ ಅಪ್ಪಿಕೊಂಡಿದ್ದಾರೆ ವಿನಃ ಮನಪೂರ್ವಕವಾಗಿ ಅಲ್ಲ. ತೋರಿಕೆಗಾಗಿ ನಾವೆಲ್ಲ ಒಂದಾಗಿದ್ದೇವೆ …
Read More »ಮನೆಯಲ್ಲಿ ಕತ್ತಿ ಸುಳಿಬಾರದು, ಕೊಲೆ ಆಗಬಾರದು ಅಂದ್ರೆ ಹಿಂದೂಗಳ ಬಳಿ ವ್ಯವಹರಿಸಿ; ಮುತಾಲಿಕ್ ಕರೆ
ಧಾರವಾಡ: ಸಾರ್ವಜನಿಕ ಗಣೇಶೋತ್ಸವಕ್ಕೆ (Ganeshotsava) ಸರ್ಕಾರ (Government) ಹಲವು ನಿರ್ಬಂಧ ಹಾಕುತ್ತಿದೆ. ಇದರಿಂದ ಎಷ್ಟೊಂದು ಕಿರಿಕಿರಿ ಆಗುತ್ತಿದೆ. ನಮಗೆ ಸ್ವಾತಂತ್ರ್ಯವೇ ಇಲ್ಲವಾಗಿದೆ. ಸರ್ಕಾರದ ಈ ನೀತಿಯನ್ನು ನಾನು ವಿರೋಧಿಸುತ್ತೆನೆ. ಇದು ಬಿಜೆಪಿ ಸರ್ಕಾರದಲ್ಲೇ (BJP Government) ಹೀಗಾಗುತ್ತಿದೆ ಎಂದರೆ ಹೇಗೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ (Pramod Muthalik) ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ. ಅವರು ಧಾರವಾಡದಲ್ಲಿ (Dharwad) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವರ್ಷಕ್ಕೊಮ್ಮೆ ಗಣೇಶೋತ್ಸವ ಹಬ್ಬ (Ganesha Festival …
Read More »ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದ ಶಾಸಕ ಪಾಟೀಲ್ಗೆ ಆಘಾತ: ವಾಪಸ್ ಬರುವಾಗ ಕಾಲು ಮುರಿತ!
ಹುಬ್ಬಳ್ಳಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹುಟ್ಟುಹಬ್ಬವು ದಾವಣಗೆರೆಯಲ್ಲಿ ಅದ್ಧೂರಿಯಾಗಿ ನಿನ್ನೆ (ಬುಧವಾರ) ನಡೆದಿದೆ. ಲಕ್ಷ ಲಕ್ಷ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಹಾರೈಸಿದ್ದಾರೆ. ಕಾಂಗ್ರೆಸ್ನ ಬಹುತೇಕ ಎಲ್ಲಾ ನಾಯಕರೂ ಹುಟ್ಟುಹಬ್ಬದಂದು ದಾವಣಗೆರೆಯ ಕಾರ್ಯಕ್ರಮದಲ್ಲಿ ಹಾಜರಾಗಿದ್ದರು. ಕಲಬುರಗಿಯ ಜಿಲ್ಲೆಯ ಅಫಜಲಪುರ ಶಾಸಕ ಎಂ.ವೈ. ಪಾಟೀಲ್ ಅವರು ಕೂಡ ದಾವಣಗೆರೆಗೆ ತೆರಳಿ ಅಲ್ಲಿ ಸಿದ್ದರಾಮಯ್ಯನವರಿಗೆ ಶುಭ ಹಾರೈಸಿದ್ದರು. ಅದೇ ಸಂತಸದಲ್ಲಿ ವಾಪಸ್ ಬಂದಿದ್ದ ಶಾಸಕ ಪಾಟೀಲ್ ಅವರು ಇಂದು …
Read More »