ಧಾರವಾಡ: ರಾಜ್ಯ ಸರಕಾರ ಜಿಂದಾಲ್‌ಗೆ ಅನುಕೂಲ ಮಾಡಿ ಜಾಗ ಕೊಡುತ್ತಿಲ್ಲ. 90 ಸಾವಿರ ಕೋಟಿ ರೂ.ಗಳನ್ನು ಜಿಂದಾಲ್ ಇಲ್ಲಿ ಹೂಡಿಕೆ ಮಾಡಿದೆ. ಯಾವುದೇ ಒಂದು ಸಂಸ್ಥೆಗೆ ಲೀಸ್ ಕೊಟ್ಟಾಗ ಕಾನೂನು ಪ್ರಕಾರ ಷರತ್ತು ಇರುತ್ತದೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು. ನಗರದಲ್ಲಿ ಜಿಂದಾಲ್‌ಗೆ ಭೂಮಿ ಕೊಡುತ್ತಿರುವುದನ್ನು ವಿರೋಧಿಸುತ್ತಿರುವ ಶಾಸಕ ಅರವಿಂದ ಬೆಲ್ಲದ ಅವರ ಕುರಿತು ಸುದ್ದಿಗಾರರುಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಲಾಡ್, ಬೆಲ್ಲದ್ ಕೈಗಾರಿಕೆ ಹೊಂದಿದವರು. ಕೆಐಎಡಿಬಿ ಜಾಗವನ್ನು …
Read More »ಮಣ್ಣಿನ ಗಣಪನ ನಾನಾ ರೂಪ ಸಿದ್ಧ
ಹುಬ್ಬಳ್ಳಿ: ಗಣೇಶನ ಹಬ್ಬಕ್ಕೆ ದಿನಗಣನೆ ಶುರುವಾಗಿರುವಂತೆಯೇ ನಗರದಲ್ಲಿ ಕಲಾವಿದರು ಮಣ್ಣಿನ ಗಣೇಶ ಮೂರ್ತಿಗಳಿಗೆ ಅಂತಿಮ ರೂಪ, ಬಣ್ಣ ನೀಡುತ್ತಿದ್ದಾರೆ. ಹುಬ್ಬಳ್ಳಿ ಗಣೇಶೋತ್ಸವಕ್ಕೆ ಅದರದ್ದೇ ಆದ ವಿಶೇಷತೆ ಇದೆ. 3-4 ತಲೆಮಾರುಗಳಿಂದ ಮಣ್ಣಿನ ಗಣಪತಿಗಳನ್ನು ತಯಾರಿಸುವ ಹಲವು ಕುಟುಂಬಗಳು ಇಲ್ಲಿವೆ. ಹೊಸೂರು 2ನೇ ಕ್ರಾಸ್, ಬಮ್ಮಾಪುರ ಓಣಿ, ಹಳೇಹುಬ್ಬಳ್ಳಿಯ ಅರವಿಂದ ನಗರ ಹಾಗೂ ಮರಾಠ ಗಲ್ಲಿಗಳಲ್ಲಿ ಈಗ ಮಣ್ಣಿನ ಗಣೇಶ ಮೂರ್ತಿ ತಯಾರಿಸುವ ಕುಟುಂಬಗಳು ಹಗಲು ರಾತ್ರಿ ಕಾರ್ಯ ನಿರತವಾಗಿವೆ. ಹೊಸೂರು- 2ನೇ …
Read More »ಶಾಸಕ ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ’ರಾಜ್ಯ ಸರ್ಕಾರ ಉರುಳಿಸಲು ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿರುವ ಮಂಡ್ಯ ಶಾಸಕ ಪಿ.ರವಿಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು. ‘ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಗಳನ್ನು ಮರೆ ಮಾಚಲು ಶಾಸಕರ ಖರೀದಿ ಕುರಿತು ಅಪಪ್ರಚಾರ ಮಾಡಲಾಗುತ್ತಿದೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ‘ಕಾಂಗ್ರೆಸ್ ಶಾಸಕರಿಗೆ ₹50 ರಿಂದ ₹100 ಕೋಟಿ ಆಮಿಷವೊಡ್ಡುತ್ತಿದ್ದಾರೆ ಎಂದು …
Read More »ರಾಜ್ಯ ಸರ್ಕಾರದಿಂದ ಬ್ಲ್ಯಾಕ್ ಮೇಲ್ ತಂತ್ರ: ಪ್ರಲ್ಹಾದ ಜೋಶಿ
ಹುಬ್ಬಳ್ಳಿ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಹಳೆಯ ಪ್ರಕರಣವನ್ನು ಮುನ್ನೆಲೆಗೆ ತರುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು. ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕೇಸ್ ಬಗ್ಗೆ ಮಾತನಾಡಿದರೆ, ನಿಮ್ಮ ಕೇಸ್ ಹೊರಗೆ ತರುತ್ತೇವೆ ಎಂಬ ಮನೋಭಾವ ಕಾಂಗ್ರೆಸ್‌ನದ್ದಾಗಿದೆ ಎಂದು ಹರಿಹಾಯ್ದರು. ಕುಮಾರಸ್ವಾಮಿ ವಿರುದ್ಧ ಗಣಿ ಪರವಾನಿಗೆ ಪ್ರಕರಣ 2008ರದ್ದು. …
Read More »ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ‘ಡಿಮಾಂಡ್
ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ‘ಡಿಮಾಂಡ್ ಸರ್ವೆ’ “ಡಿಮಾಂಡ್ ಸರ್ವೆ” ಕೈಗೊಳ್ಳುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳೊಂದಿಗೆ ಏರ್ಪೋರ್ಟ್ ಅಧಿಕಾರಿಗಳ ಸಭೆ ನಡೆಸಿದ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮೇಲ್ದರ್ಜೆಗೆ ಏರಿಸಲು ಅವಶ್ಯಕವೆನಿಸುವ ‘ಡಿಮಾಂಡ್ ಸರ್ವೆ’ ಕೈಗೊಳ್ಳುವಂತೆ ಬೆಳಗಾವಿ ಲೋಕಸಭಾ ಸದಸ್ಯರಾದ ಶ್ರೀ ಜಗದೀಶ್ ಶೆಟ್ಟರ್ ಇವರು ಬೆಳಗಾವಿ ಜಿಲ್ಲಾಧಿಕಾರಿಗಳು ದಿನಾಂಕ 21-08-2024 ರಂದು ನಡೆಸಿದ …
Read More »31ರಂದು ಬಂಜೆತನ ತಪಾಸಣೆ ಶಿಬಿರ
ಹುಬ್ಬಳ್ಳಿ: ಬಳ್ಳಾರಿಯ ಪಾರ್ವತಿ ನಗರದಲ್ಲಿನ ಗುಣಶೀಲ ಫರ್ಟಿಲಿಟಿ ಸೆಂಟರ್‌ನಲ್ಲಿ ಆಗಸ್ಟ್ 31ರಂದು ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 2.30ರವರೆಗೆ ಸಂತಾನಹೀನತೆ (ಬಂಜೆತನ) ಸಮಸ್ಯೆ ಎದುರಿಸುತ್ತಿರುವ ದಂಪತಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಪದೇ ಪದೇ ಗರ್ಭಪಾತ, ಐವಿಎಫ್ ಚಿಕಿತ್ಸೆ ವೈಫಲ್ಯ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡುಕೊಳ್ಳಬಹುದು. ಬಂಜೆತನ ನಿವಾರಣೆ ತಜ್ಞೆ ಡಾ. ದೇವಿಕಾ ಗುಣಶೀಲ ಅವರ ನೇತೃತ್ವದಲ್ಲಿ ವೈದ್ಯರ ತಂಡವು ಉಚಿತವಾಗಿ ಆರೋಗ್ಯ ತಪಾಸಣೆ …
Read More »ಜಿಎಸ್‌ಟಿಯಲ್ಲಿ ಬದಲಾವಣೆ: ಉದ್ಯಮಿಗಳಿಗೆ ಜಾಗೃತಿ
ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ತೆರಿಗೆ ಸಮಿತಿಯಿಂದ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ಇತ್ತೀಚಿನ ಬದಲಾವಣೆ ಕುರಿತ ವಿಚಾರ ಸಂಕಿರಣವನ್ನು ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿತ್ತು. ಲೆಕ್ಕಪರಿಶೋಧಕ ಶಂಭುಲಿಂಗಪ್ಪ ಪಾಟೀಲ ಅವರು, ಆದಾಯ ತೆರಿಗೆ ಕಾಯ್ದೆಯ ತಿದ್ದುಪಡಿ, ಪರಿಷ್ಕೃತ ತೆರಿಗೆ ಪದ್ಧತಿ ಕುರಿತು ಮಾಹಿತಿ ನೀಡಿದರು. ಲೆಕ್ಕಪರಿಶೋಧಕ ಕಿರಣ್ ಶಾವಿ ಅವರು, ಜಿಎಸ್‌ಟಿ ಕಾಯ್ದೆಯಲ್ಲಿನ ಬದಲಾವಣೆ ಬಗ್ಗೆ ತಿಳಿಸಿದರು. ಉದ್ದಿಮೆದಾರರೊಂದಿಗೆ ಸಂವಾದ ನಡೆಯಿತು. ಸಂಸ್ಥೆಯ ಅಧ್ಯಕ್ಷ ಎಸ್.ಪಿ. ಸಂಶಿಮಠ, …
Read More »ಸಮಸ್ಯೆಗಳ ಸುಳಿಯಲ್ಲಿ ‘ಹೆಗ್ಗೇರಿ’
ಹುಬ್ಬಳ್ಳಿ: ಈ ನಗರದ ಬೀದಿಗೆ ಕಾಲಿಟ್ಟರೆ ಸಾಕು ದುರ್ವಾಸನೆ ಮೂಗಿಗೆ ಅಸಹನೀಯವಾಗುತ್ತದೆ. ಮನೆ ಮುಂದೆ ಬಾಯ್ತೆರೆದ ದೊಡ್ಡ ಚರಂಡಿ ನಾಲಾ. ಚರಂಡಿ ಪಕ್ಕದಲ್ಲೇ ಆಡುವ ಮಕ್ಕಳು. ಸಂಜೆ ವಿಪರೀತ ಸೊಳ್ಳೆಗಳ ಕಾಟ.. ಈ ದುಸ್ಥಿತಿಯ ಚಿತ್ರಣವನ್ನು ಹಳೇಹುಬ್ಬಳ್ಳಿಯ ಹೆಗ್ಗೇರಿಯಲ್ಲಿ ಕಾಣಬಹುದು. ನಗರದ ಮಧ್ಯಭಾಗದಲ್ಲಿರುವ ಈ ಬಡಾವಣೆ ಸಮಸ್ಯೆಗಳ ಸರಮಾಲೆ ಹೊದ್ದು ಕೂತಿದೆ. 2 ಸಾವಿರಕ್ಕೂ ಹೆಚ್ಚು ಜನ ವಾಸಿಸುವ ಈ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲ. ಮನೆ ಎದುರೇ ಬೀಳುವ ತ್ಯಾಜ್ಯ, ಮನೆ …
Read More »ಶತಮಾನ ಕಂಡ ಶಾಲೆ ಕಟ್ಟಡ ಧ್ವಂಸ ಮಾಡಿದ ಕಿಡಿಗೇಡಿಗಳು
ಹುಬ್ಬಳ್ಳಿ: ಇಲ್ಲಿನ ಗಿರಣಿಚಾಳದಲ್ಲಿರುವ ಶತಮಾನ ಕಂಡ ಶಾಲೆ ಕಟ್ಟಡವನ್ನು ಕಿಡಿಗೇಡಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ. ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯವಾಗಿದ್ದು, ಜಾಗ ಕಬಳಿಸುವ ಹುನ್ನಾರವಾಗಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಸುಮಾರು 135 ವರ್ಷಗಳ ಇತಿಹಾಸವುಳ್ಳ ಶಾಲೆಯಾಗಿದ್ದು, ಹಳೆ ಕಟ್ಟಡವನ್ನು ಕೆಡವಿದ್ದಾರೆ. ತಡರಾತ್ರಿ ಕಿಡಿಗೇಡಿಗಳು ಕಟ್ಟಡ ಕೆಡವಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಕೆಡವಿರುವ ಕಟ್ಟಡದಲ್ಲಿ 4 ಮತ್ತು 5ನೇ ವರ್ಗದ ತರಗತಿಗಳು ನಡೆಯುತ್ತಿದ್ದವು. ಬಾಗಿಲು ಹಾಗೂ ಗೋಡೆ ಭಾಗ ಕೆಡವಿದ್ದು, …
Read More »ಸ್ಥಾನಕ್ಕೆ ಕುತ್ತು ಬಂದಿದ್ದರಿಂದ ಜಾತಿಯ ಲೇಪನ: ಜೋಶಿ ಟೀಕೆ
ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಹೋಗುತ್ತದೆ ಎಂಬುದು ಗೊತ್ತಾದ ನಂತರ ಅದಕ್ಕೆ ಜಾತಿಯ ಲೇಪನ ಮಾಡುತ್ತಿದ್ಧಾರೆ’ ಎಂದು ಕೇಂದ್ರ ನಾಗರಿಕ ಸರಬರಾಜು ಮತ್ತು ಆಹಾರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು. ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ನಾಯಕನನ್ನು ತೆಗೆದು ಬೇರೆಯವರನ್ನು ಸಿ.ಎಂ ಮಾಡುವಂತೆ ನಾವು ಹೇಳಿಲ್ಲ. ಸಿದ್ದರಾಮಯ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು, ರಾಜೀನಾಮೆ ಕೊಡಬೇಕು ಎಂಬುದಷ್ಟೇ ನಮ್ಮ ಆಗ್ರಹ. ಹಿಂದುಳಿದ ವರ್ಗದ ಎಸ್.ಬಂಗಾರಪ್ಪ ಅವರನ್ನು …
Read More »