ಜೈಪುರ್: ಖ್ಯಾತ ಬಾಲಿವುಡ್ ನಟ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ (95) ಶನಿವಾರ ನಿಧನರಾಗಿದ್ದಾರೆ. ಇರ್ಫಾನ್ ತಾಯಿ ಸಯೀದಾ ಬೇಗಂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರು ಜೈಪುರದ ಬೆನಿವಾಲ್ ಕಾಂತ ಕೃಷ್ಣ ಕಾಲೋನಿಯಲ್ಲಿ ವಾಸವಾಗಿದ್ದರು. ಇರ್ಫಾನ್ ವಿದೇಶದಲ್ಲಿದ್ದಾರೆ. ಆದರೆ ಕೊರೊನಾ ಲಾಕ್‍ಡೌನ್ ಪರಿಣಾಮದಿಂದಾಗಿ ವಿಮಾನಯಾನ ಸಂಪೂರ್ಣವಾಗಿ ಸ್ಥಗಿತವಾಗಿದೆ. ಹೀಗಾಗಿ ಅವರು ಭಾರತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಕೊನೆಯ ಬಾರಿಗೆ ತಾಯಿ ಅಂತಿಮ ದರ್ಶನವೂ …
Read More »ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ.
ಮುಂಬೈ, ಏ.25- ದೇಶದಲ್ಲೇ ಅತಿ ಹೆಚ್ಚು ಕೊರೊನಾ ಸೋಂಕಿನ ಸಾವು ಮತ್ತು ಸಾಂಕ್ರಾಮಿಕ ರೋಗಗಳ ಸಂಖ್ಯೆಯಲ್ಲಿ ಅಗ್ರಸ್ಥಾನದಲ್ಲಿರುವ ಮಹಾರಾಷ್ಟ್ರ ನಂಬರ್ ಒನ್ ಹಾಟ್‍ಸ್ಪಾಟ್ ರಾಜ್ಯ ಎನಿಸಿದೆ. ರಾಜ್ಯದ ವಿವಿಧೆಡೆ ಕೊರೊನಾ ಹೆಮ್ಮಾರಿಯ ಮರಣ ಮೃದಂಗದ ಮಾರ್ದನಿ ಮುಂದುವರಿದಿದ್ದು, ಒಂದೇ ದಿನ 18 ಮಂದಿ ಮೃತಪಟ್ಟಿದ್ದಾರೆ. ವಾಣಿಜ್ಯ ನಗರಿ ಮುಂಬೈನಲ್ಲೇ 11 ಜನರನ್ನು ವೈರಾಣು ಹೊಸಕಿ ಹಾಕಿದೆ. ದೇಶದಲ್ಲಿ ಮಾರಕ ಕೋವಿಡ್-19 ಸೋಂಕಿನಿಂದ 24 ತಾಸುಗಳಲ್ಲಿ ಇಷ್ಟು ರೋಗಿಗಳು ಅಸುನೀಗಿರುವುದು ಇದೇ …
Read More »ಭಜರಂಗ ದಳದ ಮಾಜಿ ಸಂಚಾಲಕ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನ ……..
ಬೆಂಗಳೂರು, ಏ. 25 : ಭಜರಂಗ ದಳದ ಮಾಜಿ ಸಂಚಾಲಕ, ಸಾಮಾಜಿಕ ಕಾರ್ಯಕರ್ತ, ವಾಗ್ಮಿ ಮಹೇಂದ್ರ ಕುಮಾರ್ (47)ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ಹೃದಯಾಘಾತದಿಂದ ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮಹೇಂದ್ರ ಕುಮಾರ್ ವಿಧಿವಶರಾಗಿದ್ದಾರೆ. ಭಜರಂಗ ದಳದ ರಾಜ್ಯ ಸಂಚಾಲಕರಾಗಿದ್ದ ಮಹೇಂದ್ರ ಕುಮಾರ್, 2008 ರಲ್ಲಿ ಕ್ರೈಸ್ತ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ನಡೆಸಿದ ಸಂಬಂಧ ಬಂಧನಕ್ಕೊಳಗಾಗಿದ್ದರು. ಬಳಿಕ ಅದೇ ಪ್ರಕರಣದಲ್ಲಿ ಅವರನ್ನು ದೋಷಮುಕ್ತಗೊಳಿಸಲಾಗಿತ್ತು. 2008 ರ …
Read More »ಪ್ರಭಾಸ್ ಜೊತೆ ಮದ್ವೆ- ಮೌನ ಮುರಿದ ನಿಹಾರಿಕಾ……….
ಹೈದರಾಬಾದ್: ಬಾಹುಬಲಿ ಖ್ಯಾತಿಯ ಪ್ರಭಾಸ್ ಇತ್ತೀಚೆಗೆ ವಿವಾಹದ ವಿಚಾರವಾಗಿ ಸುದ್ದಿಯಾಗುತ್ತಿದ್ದು, ಈ ಹಿಂದೆ ಕನ್ನಡತಿ ಅನುಷ್ಕಾ ಶೆಟ್ಟಿ ಜೊತೆ ಸುತ್ತಾಡುವ ಮೂಲಕ ಇವರಿಬ್ಬರು ವಿವಾಹವಾಗಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ನಂತರ ಸ್ವತಃ ಅನುಷ್ಕಾ ಶೆಟ್ಟಿ ಅವರೇ ಈ ಕುರಿತು ಪ್ರತಿ ಪ್ರತಿಕ್ರಿಯಿಸಿ ನಾವಿಬ್ಬರೂ ಜಸ್ಟ್ ಫ್ರೆಂಡ್ಸ್ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮೆಗಾ ಫ್ಯಾಮಿಲಿ ಜೊತೆಗೆ ಸಂಬಂಧ ಬೆಳೆಸುತ್ತಿದ್ದಾರೆ ಎಂಬ ಗಾಸಿಪ್ ಹಬ್ಬಿದೆ. ಹೌದು ಅನುಷ್ಕಾ ಶೆಟ್ಟಿ ಬಳಿಕ ಇದೀಗ …
Read More »ಮಂಗಗಳಲ್ಲಿ ಕಾಣಿಸಿಕೊಂಡ ಕೆಮ್ಮು, ಸುಸ್ತು: ಗ್ರಾಮದಲ್ಲಿ ಆತಂಕ…….
ಕೋಲಾರ: ನಿತ್ಯ ತರ್ಲೆ ಮಾಡೋ ಕೋತಿಗಳು ಇದ್ದಕ್ಕಿದಂತೆ ಮಂಕಾಗಿವೆ. ಕಳೆದ ಕೆಲವು ದಿನಗಳಿಂದ ಈ ಕೋತಿಗಳ ಆರೋಗ್ಯದಲ್ಲಾದ ಏರು ಪೇರು ಇಡೀ ಗ್ರಾಮವನ್ನೇ ಬೆಚ್ಚಿ ಬೀಳಿಸಿದ್ದು, ಕೊರೊನಾ ಆತಂಕದ ನಡುವೆ ಕೋತಿಗಳು ಮಂಕಾಗಿರುವುದು ಜನರಲ್ಲಿ ಭಯ ಹುಟ್ಟಿಸಿದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕೋಡುಗುರ್ಕಿ ಗ್ರಾಮದಲ್ಲಿ ಮಂಗಗಳು ಈ ರೀತಿ ವರ್ತಿಸುತ್ತಿದ್ದು, ಕೆಲವು ನಿತ್ರಾಣವಾಗಿ ಮಲಗಿದರೆ, ಇನ್ನೂ ಕೆಲವು ಏಳಲು ಸಾಧ್ಯವಾಗದೇ ಅಸಹಾಯಕ ಸ್ಥಿತಿಯಲ್ಲಿ ನೋಡುತ್ತಿವೆ. ಇನ್ನೂ ಹಲವು ಕೋತಿಗಳು …
Read More »ಶುಕ್ರವಾರ ಪತ್ತೆಯಾದ ಎರಡು ಪ್ರಕರಣಗಳು ಬೆಂಗಳೂರು ದಕ್ಷಿಣದ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿವೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರ ಒಂದೇ ದಿನ 19 ಮಂದಿಗೆ ಸೋಂಕು ತಗುಲಿರೋದು ದೃಢಪಟ್ಟಿದೆ. ಶುಕ್ರವಾರ ಪತ್ತೆಯಾದ ಎರಡು ಪ್ರಕರಣಗಳು ಬೆಂಗಳೂರು ದಕ್ಷಿಣದ ಜನರಲ್ಲಿ ಆತಂಕವನ್ನ ಹೆಚ್ಚು ಮಾಡಿವೆ. ರೋಗಿ ನಂಬರ್ 465 ಮತ್ತು 466 ಇಬ್ಬರು ಸೋಂಕಿತರಿಗೆ ಕೊರೊನಾ ಹೇಗೆ ತಗುಲಿದೆ ಎಂಬುವುದೇ ಗೊತ್ತಾಗುತ್ತಿಲ್ಲ. ರೋಗಿ ನಂಬರ್ 465: 45 ವರ್ಷದ ಹಂಪಿ ನಗರದ ನಿವಾಸಿಯಾಗಿರುವ ಮಹಿಳೆ ವಿದೇಶ ಪ್ರಯಾಣ ಬೆಳೆಸಿಲ್ಲ ಮತ್ತು ಯಾವ …
Read More »ಸ್ವಯಂಚಾಲಿತ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರ-ಕೆಎಲ್‍ಇ ವಿದ್ಯಾರ್ಥಿಗಳ ಸಂಶೋಧನೆ
ಹುಬ್ಬಳ್ಳಿ: ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವುದು ಸವಾಲಾಗಿ ಪರಿಣಮಿಸಿದ್ದು, ಸ್ಪರ್ಶದಿಂದಲೇ ಹರಡುವ ರೋಗವನ್ನು ತಡೆಯಲು ವಿವಿಧ ರೀತಿಯ ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಅದೇ ರೀತಿ ಇದೀಗ ಹುಬ್ಬಳ್ಳಿಯ ಕೆಎಲ್‍ಇ ಕಾಲೇಜಿನ ವಿದ್ಯಾರ್ಥಿಗಳು ಸೆನ್ಸಾರ್ ಆಧಾರಿತ ಹ್ಯಾಂಡ್ ಸ್ಯಾನಿಟೈಸರ್ ಯಂತ್ರವನ್ನು ಸಂಶೋಧಿಸಿದ್ದಾರೆ.ಕೊರೊನಾದಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯವಾಗಿದ್ದು, ಆದರೂ ಕೆಲವೊಮ್ಮೆ ನಮಗೆ ಅರಿವಿಲ್ಲದೆಯೇ ವೈರಸ್ ಹರಡುವ ಸಾಧ್ಯತೆ ಇರುತ್ತದೆ. ಕೊರೊನಾ ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ …
Read More »ಚೀನಿಯರು ಇದೇನಪ್ಪಾ ಮಾಡಿದ್ರು..?’- ಲಾಕ್‍ಡೌನ್ ಬಗ್ಗೆ ರೋಹಿತ್ ಶರ್ಮಾ ಬೇಸರ
ಮುಂಬೈ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆದಾಗಲೇ 2020ರ ಐಪಿಎಲ್ ಆವೃತ್ತಿ ಆರಂಭವಾಗಿ ಅಭಿಮಾನಿಗಳಿಗೆ ಭರಪೂರ ಮನರಂಜನೆ ಲಭಿಸುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಟೂರ್ನಿ ಮುಂದೂಡಲಾಗಿದ್ದು, ಅಭಿಮಾನಿಗಳು ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಈ ಕುರಿತು ಬೇಸರಗೊಂಡಿದ್ದಾರೆ. ಲಾಕ್‍ಡೌನ್‍ನಿಂದಾಗಿ ಮನೆಯಲ್ಲೇ ಉಳಿದಿರುವ ಹಲವು ಆಟಗಾರು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇತ್ತ ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಇನ್‍ಸ್ಟಾ ಮೂಲಕ ಅಭಿಮಾನಿಗಳೊಂದಿಗೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ …
Read More »ಬೆಂಗಳೂರು:ಎಣ್ಣೆ ಸೀಜ್ ಮಾಡಿದ್ದಕ್ಕೆ ಎಸಿಪಿಯೇ ಅಮಾನತು………
ಬೆಂಗಳೂರು: ಸರ್ಕಾರಿ ವಾಹನದಲ್ಲಿ ಸಾಗಿಸುತ್ತಿದ್ದ ಮದ್ಯವನ್ನು ಸೀಜ್ ಮಾಡಿದ್ದ ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿಯನ್ನೇ ಅಮಾನತು ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಎಸಿಪಿ ವಾಸು ಅವರನ್ನು ಅಡಿಷನಲ್ ಕಮಿಷನರ್ ಮುರುಗನ್ ಅಮಾನತುಗೊಳಿಸಿದ್ದಾರೆ. ತನ್ನ ಮಾತಿಗೆ ಬೆಲೆ ಕೊಟ್ಟಿಲ್ಲವೆಂದು ನನ್ನನ್ನು ಅಡಿಷನಲ್ ಕಮಿಷನರ್ ಮುರುಗನ್ ಸಸ್ಪೆಂಡ್ ಮಾಡಿದ್ದಾರೆ ಎಂದು ಎಸಿಪಿ ವಾಸು ಆರೋಪಿಸಿದ್ದಾರೆ. ಅಡಿಷನಲ್ ಕಮಿಷನರ್ ಮುರುಗನ್ ವಿಶ್ವವನ್ನೇ ಬೆಚ್ಚಿಬೀಳಿಸಿರುವ ಕೊರೊನಾ ವೈರಸ್ ತಡೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ಕೊರೊನಾ ಸೋಂಕಿನಿಂದ …
Read More »ಧಾರವಾಡ: ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿ ಡಿಸ್ಚಾರ್ಜ್……
ಧಾರವಾಡ: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖನಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಜಿಲ್ಲೆಯ ಇಬ್ಬರು ಕೊರೊನಾದಿಂದ ಗುಣಮುಖರಾದಂತಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಗುಣಮುಖನಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿರುವ ಕುರಿತು ಜಿಲ್ಲಾಧಿಕಾರಿ ದೀಪಾ ಚೋಳನ್ ಮಾಹಿತಿ ನೀಡಿದ್ದಾರೆ. ದೆಹಲಿ ಪ್ರವಾಸದಿಂದ ಮರಳಿ ಬಂದಿದ್ದ ಹುಬ್ಬಳ್ಳಿ ಮುಲ್ಲಾ ಓಣಿಯ 27 ವರ್ಷದ ವ್ಯಕ್ತಿಗೆ (ರೋಗಿ ನಂ.194) ಕೊರೊನಾ ಸೋಂಕು ತಗುಲಿರುವುದು ಏಪ್ರಿಲ್ 9 ರಂದು …
Read More »