Breaking News

ರಾಜ್ಯ

ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: ಪುಣೆಯಲ್ಲಿ ಗಣೇಶ ವಿಗ್ರಹ ವಿಸರ್ಜನೆ ಆಚರಣೆಗಳು ಸೇರಿದಂತೆ ಉತ್ಸವದಲ್ಲಿ ಭಾಗಿಯಾಗಿರುವ ‘ಡೋಲು-ತಾಸೆ’ (dhol-tasha)ತಂಡಗಳಲ್ಲಿ 30 ಜನರ ಸಂಖ್ಯೆಯನ್ನು ನಿರ್ಬಂಧಿಸುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ( NGT) ನಿರ್ದೇಶನಕ್ಕೆ ಸುಪ್ರೀಂ ಕೋರ್ಟ್ ಗುರುವಾರ(ಸೆ12) ತಡೆಯಾಜ್ಞೆ ನೀಡಿದೆ.   ಎನ್‌ಜಿಟಿ ಆದೇಶದ ವಿರುದ್ಧ ಪುಣೆ ಮೂಲದ ‘ಧೋಲ್-ತಾಶಾ’ ಗುಂಪಿನ ಅರ್ಜಿಯನ್ನು ಮಧ್ಯಾಹ್ನ 2 ಗಂಟೆಗೆ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ …

Read More »

ವಾಹನ ಸವಾರರಿಗೆ ಗುಡ್ ನ್ಯೂಸ್: ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ ಇದೆ. ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ಕಾರ್ಯದರ್ಶಿ ಪಂಕಜ್ ಜೈನ್ ಈ ಬಗ್ಗೆ ಸುಳಿವು ನೀಡಿದ್ದಾರೆ. ವಿಶ್ವದಾದ್ಯಂತ ಕಚ್ಚಾತೈಲದ ದರ ಸ್ವಲ್ಪ ಸಮಯದವರೆಗೆ ನಿರಂತರವಾಗಿ ಕಡಿಮೆಯಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಕಚ್ಚಾತೈಲ ದರ ದೀರ್ಘಕಾಲದವರೆಗೆ ಕಡಿಮೆಯಾದರೆ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಪರಿಗಣಿಸಬಹುದು ಎಂದು ಹೇಳಿದ್ದಾರೆ. ಸರ್ಕಾರ ಪೆಟ್ರೋಲ್, …

Read More »

ಸಿಎಂ ವಿರುದ್ಧ ಪ್ರಾಸಿಕ್ಯೂಷನ್​ ಅನುಮತಿ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಬೆಂಗಳೂರು: ರಾಜ್ಯಪಾಲರ ಅನುಮತಿ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ಮುಕ್ತಾಯಗೊಂಡಿದ್ದು, ಅರ್ಜಿ ಕುರಿತು ಹೈಕೋರ್ಟ್​ ಸದ್ಯ ತೀರ್ಪು ಕಾಯ್ದಿರಿಸಿದೆ. ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್ ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆಯನ್ನು ನಡೆಸಿದ ಕೋರ್ಟ್​, ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಿತ್ತು. ರಾಜ್ಯಪಾಲರ ಹಾಗೂ ಮುಖ್ಯಮಂತ್ರಿಗಳ ಪರ ವಕೀಲರ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಸುದೀರ್ಘ ವಿಚಾರಣೆಯ ಬಳಿಕ ಇದೀಗ ತೀರ್ಪನ್ನು ಕಾಯ್ದಿರಿಸಿದೆ. ಸಿಎಂ …

Read More »

ಹಾರ್ದಿಕ್ ಮಾಜಿ ಪತ್ನಿ ಮುಂಬೈನಲ್ಲಿ ಬಾಯ್​ ಫ್ರೆಂಡ್​ ಜೊತೆ ತಿರುಗಾಟ!

ಮುಂಬೈ: ಭಾರತದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮಾಜಿ ಪತ್ನಿ, ಮಾಡೆಲ್ ನತಾಶಾ ಸ್ಟಾಂಕೋವಿಕ್ ಮುಂಬೈನಲ್ಲಿದ್ದು, ಆಕೆ ಗೆಳೆಯ ಅಲೆಕ್ಸಾಂಡರ್ ಇಲಾಕ್ ಜೊತೆ ಸುತ್ತಾಟ ನಡೆಸುತ್ತಿದ್ದು ಗಮನಸೆಳೆಯುತ್ತಿದ್ದಾಳೆ. ಇದಕ್ಕೆ ಸಂಬಂಧಿಸಿದ ವೀಡಿಯೋ ವೈರಲ್​ ಆಗಿದೆ.   ನತಾಶಾ ಎರಡು ತಿಂಗಳ ಕಾಲ ಸರ್ಬಿಯಾದಲ್ಲಿ ತಂಗಿದ್ದು ಆಕೆ ಈಗ ಮುಂಬೈಗೆ ಬಂದಿದ್ದಾಳೆ. ಆದರೆ, ಆಕೆಯ ಜೊತೆ ಆಕೆಯ ಗೆಳೆಯ ಅಲೆಕ್ಸಾಂಡರ್ ಇಲಾಕ್ ಕೂಡ ಇರುವುದು ಗಮನಾರ್ಹ ಸಂಗತಿಯಾಗಿದೆ. ಇಬ್ಬರೂ ಮುಂಬೈನ ಬೀದಿಗಳಲ್ಲಿ …

Read More »

ನಾಗಮಂಗಲ ಗಲಭೆ ಪ್ರಕರಣದ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ : ‘CM ಸಿದ್ದರಾಮಯ್ಯ’ ಎಚ್ಚರಿಕೆ

ಬೆಂಗಳೂರು : ನಾಗಮಂಗಲ ಗಲಭೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ವೇಳೆ ನಡೆದಿರುವ ಕಲ್ಲುತೂರಾಟವು ಸಮಾಜದ ಶಾಂತಿ, ನೆಮ್ಮದಿಗೆ ಧಕ್ಕೆತರುವ ಕಿಡಿಗೇಡಿಗಳ ದುಷ್ಕೃತ್ಯ ಎನ್ನುವುದು ನಿಸ್ಸಂಶಯ. ಇದನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಈಗಾಗಲೇ 50ಕ್ಕೂ ಅಧಿಕ ಜನರನ್ನು ಬಂಧಿಸಲಾಗಿದ್ದು, ಸಮಾಜದ ಶಾಂತಿ, ಸುವ್ಯವಸ್ಥೆ ಕಾಪಾಡುವುದೇ ನಮ್ಮ ಮೊದಲ ಆದ್ಯತೆಯಾಗಿದೆ. ಕಳೆದ …

Read More »

ಕನ್ನಡದ ಔಷಧ ಚೀಟಿ ಬಗ್ಗೆ ಸರ್ಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು, ಸೆಪ್ಟೆಂಬರ್‌, 12: ನಿಯಮ ಜಾರಿಯಾಗುವ ಮೊದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆದು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದಕ್ಕೆ ಆರೋಗ್ಯ ಸಚಿವರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದೆ ಆ ನಿರ್ಧಾರ ಏನು ಎಂದು ಇಲ್ಲಿ ತಿಳಿಯಿರಿ. ರಾಜ್ಯದ ಹಲವು ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶಿಸಿ ಎಂಬುದಾಗಿ ಆರೋಗ್ಯ …

Read More »

ನಾಗಮಂಗಲ ಗಲಭೆ ಪ್ರಕರಣ : 150 ಆರೋಪಿಗಳ ವಿರುದ್ಧ ‘FIR’ ದಾಖಲು

ಮಂಡ್ಯ: ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶೋತ್ಸವ ಮೆರವಣಿಗೆ ವೇಳೆ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 150 ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. 53 ಆರೋಪಿಗಳ ಹೆಸರು ಮತ್ತು ವಿಳಾಸ ಸಮೇತ ಎಫ್‌ಐಆರ್ ದಾಖಲಿಸಲಾಗಿದೆ. 30 ಜನ ಮುಸ್ಲಿಂ ಆರೋಪಿಗಳ ವಿರುದ್ಧ ಹಾಗೂ 23 ಜನ ಹಿಂದೂ ಸಮುದಾಯದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.   ಸಿಸಿಕ್ಯಾಮರಾ ದೃಶ್ಯ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ ಎಂದು ಮಂಡ್ಯ ಎಸ್ ಪಿ …

Read More »

ರಟ್ಟೀಹಳ್ಳಿ ಕರ್ನಾಟಕವೋ, ಪಾಕಿಸ್ತಾನದ ಭಾಗವೋ?: ಪ್ರಮೋದ ಮುತಾಲಿಕ್‌

ರಟ್ಟೀಹಳ್ಳಿ ಕರ್ನಾಟಕವೋ, ಪಾಕಿಸ್ತಾನದ ಭಾಗವೋ?: ಪ್ರಮೋದ ಮುತಾಲಿಕ್‌   ಹಾವೇರಿ: ‘ಜಿಲ್ಲೆಯ ರಟ್ಟೀಹಳ್ಳಿಯಲ್ಲಿ ಗುರುವಾರ ಸಂಜೆ ಹಿಂದೂ ಮಹಾಸಭಾ ಗಣೇಶ ಮೂರ್ತಿ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ರಟ್ಟೀಹಳ್ಳಿ ಪ್ರವೇಶಿಸದಂತೆ ಜಿಲ್ಲಾಧಿಕಾರಿಯವರು ನನಗೆ ನಿರ್ಬಂಧ ಹೇರಿದ್ದಾರೆ. ರಟ್ಟೀಹಳ್ಳಿ ಕರ್ನಾಟಕ ಜಿಲ್ಲಾಧಿಕಾರಿ ನಿಷೇಧ ಹೇರಿದ್ದಾರೆ. ರಟ್ಟೀಹಳ್ಳಿ ಕರ್ನಾಟಕದಲ್ಲಿ ಇದೆಯೋ ಅಥವಾ ಪಾಕಿಸ್ತಾನದ ಭಾಗವೋ’ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಪ್ರಶ್ನಿಸಿದರು. ನಗರದಲ್ಲಿ‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಎಲ್ಲೂ …

Read More »

ರಾಜ್ಯ ಸರ್ಕಾರ ಗಲಾಟೆ ಮಾಡುವವರಿಗೆ ಶಕ್ತಿ, ಕುಮ್ಮಕ್ಕು ನೀಡುತ್ತಿದೆ’

ಶಿವಮೊಗ್ಗ ಸೆಪ್ಟೆಂಬರ್ 12: ಮಂಡ್ಯ ನಾಗಮಂಗಲ ಗಲಾಟೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ವಿರುದ್ಧ ವಿಪಕ್ಷಗಳ ವಾಗ್ದಾಳಿಗೆ ಕಾರಣವಾಗಿದೆ. ಮಂಡ್ಯ ಗಲಭೆಗೆ ರಾಜ್ಯ ಸರ್ಕಾರವೇ ಕಾರಣ ಎಂದು ದೂರಲಾಗುತ್ತಿದೆ. ಈ ಬಗ್ಗೆ ಶಾಸಕ ಚನ್ನಬಸಪ್ಪ ಪ್ರತಿಕ್ರಿಯೆ ನೀಡಿದ್ದು ಇದು ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ಎಂದು ಹೇಳಿದ್ದಾರೆ.   ಶಿವಮೊಗ್ಗದಲ್ಲಿಂದು ಮಾತನಾಡಿದ ಶಾಸಕ ಚನ್ನಬಸಪ್ಪ, ನಾಗಮಂಗಲ ಗಲಾಟೆ ಪ್ರಕರಣ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆಯಾಗಿದೆ. …

Read More »

ಸೆಪ್ಟೆಂಬರ್‌ 13ರಂದು ಬೆಂಗಳೂರಿನಲ್ಲಿ ಬೃಹತ್‌ ಉದ್ಯೋಗ ಮೇಳ-ನೋಂದಾಯಿಸಿಕೊಳ್ಳುವುದು ಹೇಗೆ?-ಇಲ್ಲಿದೆ ಮಾಹಿತಿ

ವಿವಿಧ ಕಂಪನಿಗಳ ವತಿಯಿಂದ ಜಿಲ್ಲಾವಾರು ಉದ್ಯೋಗ ಮೇಳಗಳನ್ನು ಮಾಡಲಾಗುಯತ್ತಿದೆ. ಹಾಗೆಯೇ ಇದೀಗ ಬೆಂಗಳೂರಿನಲ್ಲಿ ನಾಳೆ ಅಂದರೆ ಸೆಪ್ಟೆಂಬರ್‌ 13ರಂದು ಬೃಹತ್‌ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದರೆ ಎಷ್ಟು ಕಂಪನಿಗಳು ನೋಂದಣಿಯಾಗಿವೆ ಹಾಗೂ ಎಷ್ಟು ಮಂದಿಗೆ ಆಹ್ವಾನ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.   ಸೆಪ್ಟೆಂಬರ್ 13ರಂದು ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಬೃಹತ್ ಉದ್ಯೋಗಮೇಳಕ್ಕೆ ಇದುವರೆಗೆ 116 ಕಂಪನಿಗಳು ನೋಂದಾಯಿಸಿಕೊಂಡಿದ್ದು, ವಿವಿಧ ಕಂಪನಿ ಹಾಗೂ …

Read More »