ಮದ್ಯ (Alcohol) ಸೇವಿಸಿದ ನಂತರ ವ್ಯಕ್ತಿಯ ಒಟ್ಟಾರೆ ವರ್ತನೆಯಲ್ಲಿ ಬದಲಾವಣೆಯಾಗುವುದನ್ನು ನೀವು ಹೆಚ್ಚಾಗಿ ನೋಡಿದ್ದೀರಿ. ಅದರಲ್ಲೂ ಮದ್ಯಪಾನ ಮಾಡುವವರಿಗೆ ಇದರ ಬಗ್ಗೆ ಹೆಚ್ಚು ತಿಳಿಯುತ್ತದೆ. ಮದ್ಯ ಸೇವಿಸಿದ ಸ್ವಲ್ಪ ಸಮಯದ ನಂತರ ಕುಡಿಯುವವರ ಧ್ವನಿ (Voice) ಬದಲಾಗಲು ಪ್ರಾರಂಭಿಸುತ್ತದೆ. ವ್ಯಕ್ತಿಯು ನಡೆಯಲು ಕಷ್ಟಪಡುತ್ತಾನೆ ಮತ್ತು ಕ್ರಮೇಣ ದೇಹದ ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಸ್ವಲ್ಪ ಸಮಯದ (Time) ನಂತರ ಆಲ್ಕೋಹಾಲ್ ಏಕೆ ಪರಿಣಾಮ …
Read More »ಎರಡನೇ ವಿಮಾನ ನಿಲ್ದಾಣಕ್ಕೆ ಈ ಸ್ಥಳವೇ ಅಂತಿಮ?
ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಯೋಜನೆ ವೇಗ ಪಡೆದುಕೊಂಡಿದೆ. ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ನಿಗದಿ ಮಾಡಲು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ, ಡಿಸಿಎಂ ಡಿ.ಕೆ. ಶಿವಕುಮಾರ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಶುಕ್ರವಾರ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಐದು ಸ್ಥಳಗಳನ್ನು ಗುರುತಿಸಲಾಗಿದ್ದು, ಮುಂದಿನ ವಾರದೊಳಗೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಡಾಬಸ್‌ಪೇಟೆ, ನೆಲಮಂಗಲ, ಬಿಡದಿ, ಹಾರೋಹಳ್ಳಿ ಸೇರಿದಂತೆ …
Read More »ಮತ್ತೆ ನಾನೇ ಈ ರಾಜ್ಯದ ಸಿಎಂ ಆಗುತ್ತೇನೆ: H.D.K.
ಮತ್ತೆ ನಾನೇ ಈ ರಾಜ್ಯದ ಸಿಎಂ ಆಗುತ್ತೇನೆ: ಹೆಚ್.ಡಿ. ಕುಮಾರಸ್ವಾಮಿ ಸ್ಫೋಟಕ ಹೇಳಿಕೆ ಮಂಡ್ಯ: 2028ರವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಡೆಯಲ್ಲ, ಜನರೇ ಸರ್ಕಾರವನ್ನು ತೆಗೆಯುತ್ತಾರೆ. ಮತ್ತೆ ನಾನೇ ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ, ಜನರು ಬಯಸಿದ್ರೆ ಮತ್ತೆ ಯಾಕೆ ನಾನು ಸಿಎಂ ಆಗಬಾರದು? ಜನ ಮತ್ತೆ ತೀರ್ಮಾನ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು …
Read More »ದ.ಕ.- 54 ಸಾವಿರ, ಉಡುಪಿ- 39 ಸಾವಿರ ಬಿಪಿಎಲ್ ಕಾರ್ಡ್ ಪರಿಶೀಲನೆಗೆ ಸೂಚನೆ
ಕುಂದಾಪುರ/ಉಡುಪಿ/ಪುತ್ತೂರು: ವೆಚ್ಚ ಕಡಿತಕ್ಕೆ ಮುಂದಾಗಿರುವ ರಾಜ್ಯ ಸರಕಾರವು ಬಿಪಿಎಲ್ ಕಾರ್ಡ್‌ಗಳ ಪರಿ ಷ್ಕರಣೆಗೆ ಹೊರಟಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 54,093 ಮತ್ತು ಉಡುಪಿ ಜಿಲ್ಲೆಯಲ್ಲಿ 39,627 ಕಾರ್ಡ್‌ಗಳ ಪರಿ ಶೀಲನೆಗೆ ಸೂಚನೆ ಬಂದಿದ್ದು, ಈ ಪೈಕಿ ಶೇ. 2ರಷ್ಟು ಕಾರ್ಡ್ ರದ್ದಾಗುವ ಸಾಧ್ಯತೆ ಇದೆ. ಆದರೆ ಪೂರ್ಣ ಪ್ರಮಾಣದಲ್ಲಿ ಪರಿಶೀಲಿಸದೆ ರದ್ದು ಮಾಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾರ್ಡ್ ಪರಿಷ್ಕರಣೆಗೆ ಮುಂದಾಗಿರು ವುದರಿಂದ ಪೂರಕ ದಾಖಲೆಯನ್ನು ನೀಡು ವುದಕ್ಕಾಗಿ ಪಡಿತರದಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣ ವಾಗಿದ್ದು, ಅನ್ನಭಾಗ್ಯ ಅಕ್ಕಿ …
Read More »ಆಸ್ತಿಗಾಗಿ ಮಗಳನ್ನು ಕೊಲೆ ಮಾಡಲು ಮುಂದಾದ ತಂದೆ
ಸಿರುಗುಪ್ಪ: ಆಸ್ತಿಗಾಗಿ ತಂದೆಯೇ ಮಗಳನ್ನು ಕೊಲೆ ಮಾಡಲು ಮುಂದಾದ ಘಟನೆ ತಾಲೂಕಿನ ಅರಳಿಗನೂರು ಗ್ರಾಮದಲ್ಲಿ, ತೆಕ್ಕಲಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.18ರ ಶುಕ್ರವಾರ ನಡೆದಿದೆ. ಅರಳಿಗನೂರು ಗ್ರಾಮದ ದೊಡ್ಡರಂಗಪ್ಪನಿಗೆ ಶಿವಲಿಂಗಮ್ಮ ಅವರು ಮೊದಲನೇ ಪತ್ನಿ ಹಾಗೂ ಜಯಮ್ಮ ಅರು ಎರಡನೇ ಪತ್ನಿಯಾಗಿದ್ದು, ಮೊದಲನೇ ಪತ್ನಿ ಶಿವಲಿಂಗಮ್ಮನಿಗೆ ಗೊತ್ತಿಲ್ಲದಂತೆ ದೊಡ್ಡ ರಂಗಪ್ಪ ತನ್ನ ಎರಡನೇ ಪತ್ನಿ ಜಯಮ್ಮಳ ಹೆಸರಿಗೆ ಆಸ್ತಿಯನ್ನು ಮಾಡಿಸಿದ್ದರಿಂದ ಶಿವಲಿಂಗಮ್ಮನ ಮಗಳು ಸೋಮಲಿಂಗಮ್ಮ ತನಗೆ ಅಸ್ತಿಯಲ್ಲಿ ಪಾಲು ಬರಬೇಕೆಂದು ಸಿರುಗುಪ್ಪದ …
Read More »ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ.
ನವದೆಹಲಿ: ದೆಹಲಿಯಿಂದ ಲಂಡನ್ ಗೆ ಹೊರಟಿದ್ದ ವಿಸ್ತಾರ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿಮಾನಗಳಲ್ಲಿ ಬಾಂಬ್ ಬೆದರಿಕೆ ಬರುತ್ತಿರುವುದು ಇದು ಹದಿನೈದನೇ ಪ್ರಕರಣವಾಗಿದ್ದು ಕೂಡಲೇ ಎಚ್ಚೆತ್ತ ಅಧಿಕಾರಿಗಳು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ತಪಾಸಣೆ ನಡೆಸಿದ್ದಾರೆ ಆದರೆ ವಿಮಾನದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶುಕ್ರವಾರ(ಅ.19) …
Read More »ಕರೆಂಟ್ ಶಾಕ್ ತಗುಲಿ ಮಹಿಳೆ ಸಾವು
ಬೈಲಹೊಂಗಲ: ಮನೆಯಲ್ಲಿ ನೀರು ಕಾಯಿಸಲು ವಾಟರ್ ಹೀಟರ್ ನ ಸ್ವಿಚ್ ಒತ್ತಿದಾಗ ವಿದ್ಯುತ್ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಸಮೀಪದ ಹೊಸೂರ ಗ್ರಾಮದಲ್ಲಿ ಅ.15ರ ಮಂಗಳವಾರ ನಡೆದಿದೆ. ರೇಖಾ ರುದ್ರಪ್ಪ ಹುಡೇದ (52) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮೃತರು ಪತಿ, ಮೂವರು ಪುತ್ರಿಯರು, ಪುತ್ರನನ್ನು ಅಗಲಿದ್ದಾರೆ. ಈ ಕುರಿತು ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ಬೆಳಗಾವಿ – ಬೆಂಗಳೂರು ವಿಮಾನ ರದ್ದು ಮಾಡದಂತೆ ಕೇಂದ್ರ ಸಚಿವರಿಗೆ ಶೆಟ್ಟರ್ ಮನವಿ
ಬೆಳಗಾವಿ: ಬೆಳಗಾವಿ ಮತ್ತು ಬೆಂಗಳೂರು ಮಧ್ಯೆ ದಿನನಿತ್ಯ ಸಂಚರಿಸುವ ಇಂಡಿಗೋ ವಿಮಾನವನ್ನು ದಿನಾಂಕ 27 ರಿಂದ ಸ್ಥಗಿತಗೊಳಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಬುಧವಾರ ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ಆರ್ ನಾಯ್ಡು ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು. ಬೆಳಗಾವಿ ಬೆಂಗಳೂರು ಬೆಳಗಾವಿ ಮಧ್ಯೆ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡಬಾರದು. ಇದರಿಂದ ಪ್ರಯಾಣಿಕರಿಗೆ ಬಹಳ ತೊಂದರೆಯಾಗಲಿದೆ ಎಂದರು. ಬೆಳಗಾವಿ …
Read More »ಕಿತ್ತರೂ ಉತ್ಸವ ಹಿನ್ನೆಲೆಯಲ್ಲಿ ಬೆಳಗಾವಿ ನಗರದಲ್ಲೂ ರಸಮಂಜರಿ ಕಾರ್ಯಕ್ರಮ
ಬೆಳಗಾವಿ: ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳ ಆಯೋಜನೆ ಮಾಡಲಾಗುತ್ತಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ರಾಷ್ಟ್ರೀಯ ಖ್ಯಾತಿಯ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಕಿತ್ತೂರು ಉತ್ಸವದ ಮುನ್ಬಾ ದಿನವಾದ ಅ.22 ರಂದು ಸಂಜೆ 4 ಗಂಟೆಗೆ ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಸಮಂಜರಿ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು. …
Read More »ಯತ್ನಾಳ್ ವಿರುದ್ಧ ಕೇಸ್ ದಾಖಲು
ವಿಜಯಪುರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಆರೋಪದಡಿ ವಿಜಯಪುರ ನಗರ ಕ್ಷೇತ್ರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಇತರರ ವಿರುದ್ಧ ನಗರದ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾನಗರ ಪಾಲಿಕೆ ನಾಮನಿರ್ದೇಶಿತ ಸದಸ್ಯ ಪರಶುರಾಮ ಹೊಸಮನಿ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣ ದಾಖಲಾಗಿದೆ. …
Read More »
Laxmi News 24×7