Breaking News

ರಾಜ್ಯ

ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿಎಂಗೆ ಗಂಡಾಂತರ ತಪ್ಪಿದ್ದಲ್ಲ: ವಿಜಯೇಂದ್ರ

ಹಾವೇರಿ: ಮುಡಾ ಭೂ ಹಗರಣದ ತನಿಖೆಯನ್ನು ಲೋಕಾಯುಕ್ತದವರು ಒತ್ತಡದಲ್ಲಿ ಮಾಡುತ್ತಿದ್ದಾರೆ. ಯಾವ ಪ್ರಶ್ನೆಗೆ ಏನು ಉತ್ತರ ಕೊಡಬೇಕು ಎನ್ನುವುದು ಮೊದಲೇ ಸಿದ್ದವಾಗಿದೆ. ಲೋಕಾಯುಕ್ತ ಕ್ಲೀನ್ ಚಿಟ್ ಕೊಟ್ಟರೂ ಸಿದ್ದರಾಮಯ್ಯ ಗಂಡಾಂತರದಿಂದ ಪಾರಾಗಲು ಸಾಧ್ಯವಿಲ್ಲ” ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.   ಬಂಕಾಪುರದಲ್ಲಿ ಬುಧವಾರ(ನ) ಸುದ್ದಿಗಾರರೊಂದಿಗೆ ಮಾತನಾಡಿ ‘ಸಿಎಂ ಸಿದ್ದರಾಮಯ್ಯ ಮುಡಾ ಹಗರಣದಲ್ಲಿ ಆರೋಪಿ ನಂಬರ್ 1. ಅವರ ಅಕ್ಕಪಕ್ಕದಲ್ಲಿ ಜಮೀರ್ ಇರಬೇಕು ಇಲ್ಲದಿದ್ದರೆ ಭ್ರಷ್ಟರು ಇರಬೇಕು. ಚುನಾವಣೆ ಸಂದರ್ಭದಲ್ಲಿ …

Read More »

ಸಾಲಬಾಧೆ; ರೈತ ಮಹಿಳೆ ಸಾವು

ರಿಪ್ಪನ್‌ಪೇಟೆ: ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲೂರು ಗ್ರಾಮದ ರೈತ ಮಹಿಳೆ ಮೋಹಿನಿ (65) ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕಾಲಿಕ ಮಳೆಯಿಂದಾಗಿ ಭತ್ತ, ಶುಂಠಿ ಬೆಳೆ ಹಾನಿಯಾಗಿತ್ತು. ಸಹಕಾರ ಸಂಘದಲ್ಲಿ ಮಾಡಿದ ಸಾಲ ತಿರುವಳಿ ಮಾಡುವ ಕುರಿತು ಖಿನ್ನತೆಗೆ ಒಳಗಾಗಿದ್ದರು. ಸೋಮವಾರ ಮನೆಯಲ್ಲಿ ವಿಷ ಸೇವಿಸಿದ್ದ ಅವರನ್ನು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮೃತಪಟ್ಟಿದ್ದಾರೆ. ತಳಲೆ ಸಹಕಾರ ಬ್ಯಾಂಕ್‌ ಮತ್ತು ಜಿಲ್ಲಾ ಸಹಕಾರ ಸಂಘದ ಸ್ವಸಹಾಯ ಸಂಘ …

Read More »

S.D.A. ಆತ್ಮಹತ್ಯೆ ನನ್ನ ಪಿ.ಎ ಭಾಗಿಯಾದ ವಿಚಾರ ಗೊತ್ತಿಲ್ಲ: ಹೆಬ್ಬಾಳಕರ

ಬೆಳಗಾವಿ: ‘ತಹಶೀಲ್ದಾರ್‌ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರುದ್ರಣ್ಣ ಯಡವಣ್ಣವರ ಅವರ ಪ್ರಕರಣದಲ್ಲಿ ನನ್ನ ಆಪ್ತ ಸಹಾಯಕ ಸೋಮು ಬಾಗಿಯಾದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆಯಾಗಬೇಕು. ನೊಂದ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.   ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ನಮ್ಮ ಕೆಲಸಕ್ಕೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಪಿ.ಎ.ಗಳನ್ನು ನೇಮಕ ಮಾಡಿಕೊಂಡಿರುತ್ತೇವೆ. ಸಚಿವರಿಗೆ ಹತ್ತು …

Read More »

ವಿದೇಶದಲ್ಲಿ 15 ದಿನ ಅಧ್ಯಯನ ಕೈಗೊಳ್ಳಲಿರುವ ರಾಣಿ ಚನ್ನಮ್ಮ ವಿವಿಯ ವಿದ್ಯಾರ್ಥಿಗಳು

ಬೆಳಗಾವಿ: ‘ಬ್ರಿಟಿಷ್‌ ಕೌನ್ಸಿಲ್‌ನವರು ರಾಜ್ಯ ಉನ್ನತ ಶಿಕ್ಷಣ ಪರಿಷತ್‌ ಸಹಯೋಗದಲ್ಲಿ ಇಂಗ್ಲೆಂಡ್‌ನ ಯೂನಿವರ್ಸಿಟಿ ಆಫ್‌ ಈಸ್ಟ್‌ ಲಂಡನ್‌ಗೆ ನ.9ರಿಂದ 23ರವರೆಗೆ ಹಮ್ಮಿಕೊಂಡಿರುವ ಅಧ್ಯಯನ ಪ್ರವಾಸಕ್ಕೆ ಇಲ್ಲಿನ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ (ಆರ್‌ಸಿಯು) ಐದು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ’ ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ ಹೇಳಿದರು.   ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧ್ಯಯನ ‍ಪ್ರವಾಸಕ್ಕೆ ವಿದ್ಯಾರ್ಥಿಗಳ ಆಯ್ಕೆಗಾಗಿ ಸರ್ಕಾರದ ನಿರ್ದೇಶನದಂತೆ ಪರೀಕ್ಷೆ ಸಂಘಟಿಸಿದ್ದೆವು. ಇದರಲ್ಲಿ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ …

Read More »

ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!

ಮುಂಬೈ: ಜಾರ್ಖಂಡ್‌ ಚುನಾವಣೆಗಾಗಿ “ಇಂಡಿಯಾ’ ಒಕ್ಕೂಟ 7 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿರುವಂತೆಯೇ, ನ.20ರಂದು ನಡೆಯಲಿರುವ ಮಹಾರಾಷ್ಟ್ರ ಚುನಾವಣೆಗಾಗಿ ಬಿಜೆಪಿ, ಏಕನಾಥ ಶಿಂಧೆ ಬಣ ಶಿವಸೇನೆ, ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯನ್ನೊಳಗೊಂಡ “ಮಹಾಯುತಿ’ 10 ಗ್ಯಾರಂಟಿಗಳನ್ನು ಬಿಡುಗಡೆ ಮಾಡಿದೆ.   “ಲಡ್ಕಿ ಬಹೆನ್‌ ಯೋಜನೆ’ ಅನ್ವಯ ನೀಡುವ ಮಾಸಿಕ ಮೊತ್ತವನ್ನು ಈಗಿನ 1500 ರೂ.ಗಳಿಂದ 2100 ರೂ.ಗೆ ಹೆಚ್ಚಿಸುವ ಭರವಸೆ ನೀಡಲಾಗಿದೆ. 25 ಲಕ್ಷ ಉದ್ಯೋಗ ಸೃಷ್ಟಿ, ರೈತರ ಸಾಲಮನ್ನಾ, ಪಿಎಂ ಕಿಸಾನ್‌ …

Read More »

ಬರಾಕ್‌ ಒಬಾಮಾ ಆಹ್ವಾನಕ್ಕೆ ಸರಕಾರ ತೀರ್ಮಾನ

ಬೆಂಗಳೂರು: ಬೆಳಗಾವಿಯಲ್ಲಿ ನಡೆಯುವ ವಿಧಾನ ಮಂಡಲದ ಜಂಟಿ ಅಧಿವೇಶನ ಹಾಗೂ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ ಅವರನ್ನು ಆಹ್ವಾನಿಸಲು ರಾಜ್ಯ ಸರಕಾರ ತೀರ್ಮಾನಿಸಿದೆ. ಡಿ. 9ರಿಂದ ಬೆಳಗಾವಿ ಜಂಟಿ ಅಧಿವೇಶನ ಪ್ರಾರಂಭವಾಗುವ ಸಾಧ್ಯತೆ ಇದೆ. ಜತೆಗೆ ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನೆಯನ್ನು ಒಬಾಮಾ ಅವರೇ ನೆರವೇರಿಸುವ ಸಾಧ್ಯತೆ ಇದೆ. ಭಾಗವಹಿಸುವ ಕುರಿತಂತೆ ಒಬಾಮಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.

Read More »

ಹಗುರವಾಗಿ ಕಾರು ಚಲಾಯಿಸಿ ಎಂದಿದ್ದಕ್ಕೆ ಹಲ್ಲೆ ಮಾಡಿದ ಗಾಯಕ ಮಾಳು ನಿಪನಾಳ

ಬೆಳಗಾವಿ: ಹಗುರವಾಗಿ ಕಾರು ಚಲಾಯಿಸಿ ಎಂದಿದ್ದಕ್ಕೆ ಯುವಕ ಹಾಗೂ ಈತನ ಸಹೋದರಿ ಮೇಲೆ ‘ನಾ ಡ್ರೈವರ್’ ಹಾಡಿನ ಖ್ಯಾತಿಯ ಗಾಯಕ ಮಾಳು ನಿಪನಾಳ ಹಲ್ಲೆ ಮಾಡಿದ್ದು, ಗಾಯಗೊಂಡ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶೇಖಪ್ಪ ಹಕ್ಯಾಗೋಳ ಹಾಗೂ ಸಹೋದರಿಗೆ ಗಾಯವಾಗಿದ್ದು, ಚಿಕ್ಕೋಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ರಾಯಬಾಗ ತಾಲೂಕಿನ ನಿಪನಾಳ ಗ್ರಾಮದ ಹೊರವಲಯದಲ್ಲಿ ಯುವಕ ಹಾಗೂ ಆತನ ಸಹೋದರಿ ಬೈಕ್ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ನಾ ಡ್ರೈವರ್ ಹಾಡಿನ ಗಾಯಕ …

Read More »

ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

ಗದಗ: ಹೆಚ್ಚುತ್ತಿರುವ ಅರಣ್ಯ ನಾಶ, ನಗರೀಕರಣದ ಪರಿಣಾಮ ಜಿಲ್ಲೆಯ ಗಜೇಂದ್ರಗಡ, ನರಗುಂದ ಸೇರಿ ಪಕ್ಕದ ಕೊಪ್ಪಳ ಭಾಗದಲ್ಲಿ ತೋಳ-ನಾಯಿ, ನರಿ-ನಾಯಿ ರೂಪಾಂತರಿ ಮಿಶ್ರ ತಳಿಗಳು ಮೊಟ್ಟ ಮೊದಲ ಬಾರಿ ಪತ್ತೆಯಾಗಿವೆ. ಕೊಪ್ಪಳ ಹಾಗೂ ಗದಗ ಜಿಲ್ಲೆಯ ಗಡಿಭಾಗದಲ್ಲಿ ತೋಳ ಹಾಗೂ ನರಿಗಳ ಸಂಖ್ಯೆ ಹೆಚ್ಚಿವೆ. ಆಹಾರ ಅರಸಿ ಬರುಚ ಕುರಿಗಾಹಿಗಳ ಕುರಿಗಳ ಹಿಂಡಿನ ಮೇಲೆ ದಾಳಿ ಮಾಡುವುದು, ಗ್ರಾಮೀಣ ಹಾಗೂ ನಗರ ಪ್ರದೇಶಗಳಿಗೆ ಧಾವಿಸುತ್ತಿರುವ ತೋಳ ಹಾಗೂ ನರಿಗಳು, ಅಲ್ಲಿರುವ ನಾಯಿಗಳ …

Read More »

ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲ

ಬೆಂಗಳೂರು, : ಸಂಡೂರು ಗಣಿ ಹಗರಣ ಪ್ರಕರಣದ ತನಿಖೆ ವಿಚಾರವಾಗಿ ಕಳೆದ ಕೆಲವು ದಿನಗಳ ಹಿಂದೆ ಎಡಿಜಿಪಿ ಚಂದ್ರೇಶಖರ್​ ಮತ್ತು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ನಡುವೆ ಮುಸುಕಿನ ಗುದ್ದಾಟ ನಡೆದಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವರಾದ ಹೆಚ್‌ ಡಿ ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.   ಎಡಿಜಿಪಿ ಚಂದ್ರಶೇಖರ್ ಅವರು ನೀಡಿದ ದೂರಿನ ಆಧಾರದ ಮೇಲೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಅವರ ವಿರುದ್ಧ ಸಂಜಯನಗರ …

Read More »

ಕಲಬುರಗಿ ಮೂಲದ ಐಪಿಎಸ್ ಅಧಿಕಾರಿ ಅಮಿತ್ ಜವಳಗಿ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ಸಮೀಪದ ಚಂದನ್‌ ನಗರದ ಪೊಲೀಸ್ ಕಮಿಷನರ್ ಹುದ್ದೆಗೇರಿದ್ದಾರೆ.

ಕಲಬುರಗಿ: ಕಲಬುರಗಿ ಮೂಲದ ಐಪಿಎಸ್ ಅಧಿಕಾರಿ ಅಮಿತ್ ಜವಳಗಿ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ಸಮೀಪದ ಚಂದನ್‌ ನಗರದ ಪೊಲೀಸ್ ಕಮಿಷನರ್ ಹುದ್ದೆಗೇರಿದ್ದಾರೆ. ಪಶ್ಚಿಮ ಬಂಗಾಳದ ಚಂದನ್‌ನಗರ ವ್ಯಾಪ್ತಿಯ ಠಾಣೆಗಳಲ್ಲಿ ಆಸ್ತಿಗಳ ಡಿಜಿಟಲೀಕರಣ ಮಾಡಿ ಅವುಗಳಿಗೆ ಬಾರ್‌ ಕೋಡ್ ಅಳವಡಿಸಿದ ಸಾಧನೆಗಾಗಿ ಅಮಿತ್‌ ಅವರಿಗೆ ಪ‍್ರಸಕ್ತ ವರ್ಷದ ಭಾರತ ಸರ್ಕಾರದ ಇ-ಗವರ್ನನ್ಸ್ ಇಲಾಖೆಯ ರಾಷ್ಟ್ರೀಯ ಪ್ರಶಸ್ತಿಯು ಚಿನ್ನದ ಪದಕದೊಂದಿಗೆ ಲಭಿಸಿದೆ.   ಕಲಬುರಗಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು …

Read More »