ಧಾರವಾಡ: ಡ್ರಗ್ಸ್ ಪ್ರಕರಣ ರಾಜ್ಯಾದ್ಯಂತ ತನಿಖೆ ಆಗಬೇಕುಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಒತ್ತಾಯಿಸಿದ್ದಾರೆ. ಡ್ರಗ್ಸ್ ವಿಚಾರವಾಗಿ ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಅವರು, ಪ್ರಕರಣ ತನಿಖೆ ಬೇಗ ಬೇಗ ಮಾಡಬೇಕಿತ್ತು.ಕೆಲವು ಕಡೆ ಒಳ್ಳೆಯ ರೀತಿಯಿಂದ ತನಿಖೆ ನಡೆದಿದೆ . ಇನ್ನೂ ಕಾಲ ಮೀರಿಲ್ಲ. ರಾಜ್ಯಾದ್ಯಂತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಆಗಬೇಕು ಎಂದರು. ಎಐಸಿಸಿ ಕಾರ್ಯಕಾರಿ ಸಮಿತಿ ಬದಲಾವಣೆ ವಿಚಾರ ಮಾತನಾಡಿ, ಕೆಲಸ ಮಾಡುವ …
Read More »ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ
ಧಾರವಾಡ: ಲ್ಯಾಪ್ ಟಾಪ್ ವಿತರಿಸುವಂತೆ ವಿವಿಧ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಶನಿವಾರ ಭೇಟಿ ಮಾಡಿ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಕೊರೊನಾ ಸಂಕಷ್ಟದಿಂದಾಗಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಲು ವಿಳಂಬವಾಗಿದೆ. ಈ ಮೊದಲು ಲ್ಯಾಪ್ ಟ್ಯಾಪ್ ವಿತರಿಸುವುದಾಗಿ ಹೇಳಿದ ವಿವಿ, ಇದೀಗ …
Read More »15 ದಿನಕ್ಕೆ 4 ಲಕ್ಷ ಸಂಬಳ ಉಡೀಸ್ ಮಾಡುತ್ತಿದ್ದ ವೀರೇನ್ ಖನ್ನಾನ ಬಲಗೈ ಭಂಟ..!
ಬೆಂಗಳೂರು, ಸೆ.12- ತಿಂಗಳಿಗೆ 4 ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಆದಿತ್ಯ ಅಗರ್ವಾಲ್ ಅದನ್ನು 15 ದಿನಗಳಿಗೆ ಖಾಲಿ ಮಾಡಿಬಿಡುತ್ತಿದ್ದ ಎಂಬ ಕುತೂಹಲಕಾರಿ ಅಂಶಗಳು ಪತ್ತೆಯಾಗಿವೆ. ಡ್ರಗ್ಸ್ ಜಾಲದಲ್ಲಿ ಬಂಧಿತನಾಗಿರುವ ಸಾಫ್ಟ್‍ವೇರ್ ಎಂಜಿನಿಯರ್ ಆದಿತ್ಯ ಅಗರ್ವಾಲ್ ಮತ್ತೊಬ್ಬ ಕಿಂಗ್‍ಪಿನ್ ವೀರೇನ್ ಖನ್ನಾನ ಬಲಗೈ ಭಂಟ ಎನ್ನಲಾಗಿದೆ. ಈ ಇಬ್ಬರು ಜೀವನ ಚಿಕ್ಕದು. ಇರುವಷ್ಟು ದಿನ ಮಜಾ ಮಾಡಿ ಸಾಯಬೇಕು ಎಂಬ ಸಿದ್ಧಾಂತಕ್ಕೆ ಅಂಟಿಕೊಂಡಿದ್ದರು. ಹಾಗಾಗಿ ಇಬ್ಬರೂ ಮೋಜಿನ ಜೀವನದ ದಾಸರಾಗಿದ್ದರು. …
Read More »ಈ ಡ್ರಗ್ಸ್ ದಂಧೆಯಲ್ಲಿ ಜಮೀರ್ ಇರುವುದು ನೂರಕ್ಕೆ ನೂರು ಸತ್ಯ,32 ಮಂದಿ ರಾಜಕಾರಣಿಗಳು ಡ್ರಗ್ಸ್ ಮಾಫಿಯಾದಲ್ಲಿ: ಮುತಾಲಿಕ್
ಮಂಡ್ಯ: ನಮ್ಮ ರಾಜ್ಯದಲ್ಲಿ 32 ಮಂದಿ ರಾಜಕಾರಣಿಗಳು ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಈ ಬಗ್ಗೆ ನನಗೆ ಮಾಹಿತಿ ಇದೆ. ಸಂಪೂರ್ಣ ಮಾಹಿತಿ ಸಮೇತ ನಾನು ಇನ್ನೊಂದು ವಾರದಲ್ಲಿ ಆ ಲಿಸ್ಟ್ ನ್ನು ಹೋಂ ಮಿನಿಸ್ಟರ್ ಗೆ ಕೊಡುತ್ತೇನೆ. ನಾನು ಹಿಟ್ ಅಂಡ್ ರನ್ ಕೆಲಸ ಮಾಡಲ್ಲ. ಆಧಾರ ಸಹಿತವಾಗಿ ನಾನು ಬರುತ್ತೇನೆ. ನಟ ನಟಿಯರ …
Read More »ಟೈಗರ್ ಗ್ಯಾಂಗ್ ಬಗ್ಗೆ ಲಖನ ಜಾರಕಿಹೋಳಿ ಹೇಳಿದ್ದೇನು… ?
ಟೈಗರ್ ಗ್ಯಾಂಗ್ ಬಗ್ಗೆ ಲಖನ ಜಾರಕಿಹೋಳಿ ಹೇಳಿದ್ದೇನು… ? ಗೋಕಾಕ:ಸುಮಾರು ದಿನಗಳಿಂದ ಸುದ್ದಿ ಯಲ್ಲಿರುವ ಟೈಗರ್ ಗ್ಯಾಂಗ್ ಬಗ್ಗೆ ಇವತ್ತು ಲಕ್ಷ್ಮಿ ನ್ಯೂಸ್ ವಾಹಿನಿ ಜೊತೆ ಮಾತನಾಡಿದ ಚಿಕ್ಕ ಸಾಹುಕಾರರು ಇಬ್ಬರು ಸಹೋದರರ ಪರ ಹೇಳಿಕೆ ನೀಡಿದ್ದಾರೆ. ಬೆಳಗಾವಿ ಯಲ್ಲಿ ನನ್ನ ಅಣ್ಣಾ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಹೇಳಿದ್ದು ಸರಿಯಿದೆ ಈ ಒಂದು ಟೈಗರ್ ಗ್ಯಾಂಗ್ ಮುಂಚೆ ಇದ್ದಿದ್ದೇ ಬೇರೆ, ಇದು ಬೇರೆ ಯಾವುದೋ ಬಿಲ್ಲಿ …
Read More »ವಾಚ್‍ಮ್ಯಾನ್ ಆಗ್ಲಿಲ್ಲ, ಇನ್ನೂ ಆಸ್ತಿ ಬರ್ದು ಕೊಡ್ತೀರಾ -ಜಮೀರ್‌ಗೆ ಟಾಂಗ್ ನೀಡಿ ಟ್ವೀಟ್
ಮೈಸೂರು: ವಾಚ್‍ಮ್ಯಾನ್ ಆಗುತ್ತೇನೆ ಎಂದು ಆಗಲಿಲ್ಲ. ಇನ್ನೂ ಆಸ್ತಿ ಬರ್ದು ಕೊಡುತ್ತೀರಾ ಎಂದು ಬಿಜೆಪಿ ಶಾಸಕ ರಾಮದಾಸ್ ಕಾಂಗ್ರೆಸ್ ಶಾಸಕ ಜಮೀರ್ ಅಹಮ್ಮದ್ ಅವರನ್ನು ಕುಟುಕಿದ್ದಾರೆ ಸದ್ಯ ರಾಜ್ಯದಲ್ಲಿ ಬೀರುಗಾಳಿಯಂತೆ ಬೀಸುತ್ತಿರುವ ಡ್ರಗ್ ಪ್ರಕರಣದಲ್ಲಿ ಜಮೀರ್ ಅವರು ಕೊಲಂಬೋಗೆ ಹೋಗಿ ಬಂದಿದ್ದಾರೆ ಎಂಬ ಆರೋಪ ಬಂದಿದೆ. ಈ ವಿಚಾರವಾಗಿ ಶುಕ್ರವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಜಮೀರ್ ಅವರು, ನನ್ನ ಮೇಲೆ ಕೇಳಿ ಬಂದಿರುವ ಆರೋಪ ಸಾಬೀತಾದರೆ ನಾನು ನನ್ನೆಲ್ಲ ಆಸ್ತಿಯನ್ನು …
Read More »ಪರಿಹಾರದ ಚೆಕ್ ವಿತರಣೆ
ಬೆಳಗಾವಿ: ಬೆಂಕಿ ಆಕಸ್ಮಿಕದಿಂದ ಮನೆ ಕಳೆದುಕೊಂಡ ತಾಲ್ಲೂಕಿನ ಹಲಗಾ ಗ್ರಾಮದ ಐದು ಕುಟುಂಬಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಮಂಜೂರು ಮಾಡಿಸಿದ್ದಾರೆ. ಐದು ತಿಂಗಳ ಹಿಂದೆ ಆಕಸ್ಮಿಕ ಬೆಂಕಿ ಅನಾಹುತಕ್ಕೆ ಐದು ಮನೆಗಳು ಆಹುತಿಯಾಗಿದ್ದವು. ಪ್ರತಿ ಕುಟುಂಬಕ್ಕೆ ತಲಾ ₹ 5 ಲಕ್ಷ ಮಂಜೂರಾಗಿದೆ. ಶಾಸಕರ ಅನುಪಸ್ಥಿತಿಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು, ಯುವ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಹಾಗೂ ಪಕ್ಷದ ಕಾರ್ಯಕರ್ತರು ಚೆಕ್‌ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. …
Read More »ಮುಂಬೈ, ಗೋವಾದ ಹಲವೆಡೆ ಎನ್‍ಸಿಬಿ ದಾಳಿ ……………
ಮುಂಬೈ/ಪಣಜಿ, ಸೆ.12-ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯ ಭಾಗವಾಗಿ ಮಾದಕ ವಸ್ತುಗಳ ನಿಯಂತ್ರಣ ಮಂಡಳಿ (ಎನ್‍ಸಿಬಿ) ಅಧಿಕಾರಿಗಳ ತಂಡಗಳು ಇಂದು ಬೆಳಗ್ಗೆಯಿಂದ ಮುಂಬೈ ಮತ್ತು ಗೋವಾದ ವಿವಿಧೆಡೆ ಸರಣಿ ದಾಳಿಗಳನ್ನು ನಡೆಸಿದೆ. ಮುಂಬೈ ಮತ್ತು ಪಣಜಿಗಳ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ದಾಳಿಗಳು ನಡೆದಿದ್ದು, ಚಿತ್ರತಾರೆಯರೂ ಸೇರಿದಂತೆ ಕೆಲವರನ್ನು ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಸುಶಾಂತ್‍ಗೆ ಡ್ರಗ್ಸ್ ಪೂರೈಸುತ್ತಿದ್ದ ಆರೋಪದ ಸಂಬಂಧ ಬಂಧಿತರಾದ ಚಿತ್ರನಟಿ …
Read More »ಚುನಾವಣೆಗೆ ಬಿಜೆಪಿ, ಜೆಡಿಎಸ್ ಭರದ ಸಿದ್ಧತೆ
ಬೆಂಗಳೂರುಸ : ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಯಾಗುವ ಮೊದಲೇ ಆಡಳಿತಾರೂಢ ಬಿಜೆಪಿ ಹಾಗೂ ಜೆಡಿಎಸ್ ತೆರೆಮರೆಯಲ್ಲಿ ಭರದ ಸಿದ್ಧತೆ ಆರಂಭಿಸಿವೆ. ಕ್ಷೇತ್ರದ 264 ಬೂತ್‌ಗಳಲ್ಲಿ ಬೂತ್ ಕಮಿಟಿ, ಪೇಜ್ ಪ್ರಮುಖ್, ವಾಟ್ಸ್ ಆಯಪ್ ಗ್ರೂಪ್‌ಗಳನ್ನು ರಚಿಸಲು ಮುಂದಾಗಿದ್ದು, ಇದೇ ತಿಂಗಳ ಅಂತ್ಯದ ವೇಳೆಗೆ ಎಲ್ಲವನ್ನೂ ಪೂರ್ಣಗೊಳಿಸಲು ಉದ್ದೇಶಿಸಿದೆ. ಈಗಾಗಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಕ್ಷೇತ್ರಕ್ಕೆ ಭೇಟಿ ನೀಡಿ ಸ್ಥಳೀಯ ಮಟ್ಟದ ಮುಖಂಡರು ಹಾಗೂ …
Read More »800 ರೂ.ಗಡಿ ದಾಟಿದ ಬಾಕ್ಸ್ ಟೊಮೆಟೋ! ರೈತರ ಮೊಗದಲ್ಲಿ ಸಂತಸ
ಕೋಲಾರ: ನಗರದಲ್ಲಿರುವ ಏಷ್ಯಾದ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆಯಲ್ಲಿ ಶುಕ್ರವಾರ ಬಾಕ್ಸ್ ಟೊಮೆಟೋ 810 ರೂ.ವರೆಗೂ ಹರಾಜಾಗಿದ್ದು, ಟೊಮೆಟೋ ಬೆಳೆದವರ ಸಂತಸಕ್ಕೆಕಾರಣವಾಗಿದೆ. ಹದಿನೈದು ಕೆ.ಜಿ. ತುಂಬಿದ ಬಾಕ್ಸ್ ಒಮ್ಮೊಮ್ಮೆ ಕೇವಲ ಹದಿನೈದು ರೂ.ಗಿಂತಲೂ ಕಡಿಮೆ ಕುಸಿದು ರೈತರು ಟೊಮೆಟೋವನ್ನು ಬೀದಿಗೆ ಎಸೆಯುವುದನ್ನು ಕಾಣುತ್ತಿದ್ದೆವು. ಆದರೆ, ನಾಲ್ಕು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಟೊಮೆಟೋ ಬಾಕ್ಸ್ 800 ರ ಗಡಿ ದಾಟಿ ಹರಾಜಾಗಿರುವುದು ಧಾರಣೆ ಏರುಮುಖದ ನಿರೀಕ್ಷೆ ಹುಟ್ಟಿಸಿದೆ. ಮಳೆ …
Read More »
Laxmi News 24×7