Breaking News

ರಾಜ್ಯ

ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ 19-9-2020 ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು

ಜಲಸಂಪನ್ಮೂಲ ಸಚಿವರಾದ ರಮೇಶ್ ಜಾರಕಿಹೊಳಿ ಅವರ 19-9-2020 ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಪ್ರಮುಖಾಂಶಗಳು ————————– * ನದಿ ಪಾತ್ರದ ತೆರವು ಕುರಿತು ಮಹತ್ವದ ಮೊದಲ ಸಭೆ ಇಂದು ಆಯೋಜಿಸಲಾಗಿದೆ. * ಮಲಪ್ರಭಾ, ಘಟಪ್ರಭಾ, ಬಳ್ಳಾರಿ ನಾಲಾ, ಹಿರಣ್ಯಕೇಶಿ ನದಿಪಾತ್ರದ ಒತ್ತುವರಿ ಬಗ್ಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮೀಕ್ಷೆ ನಡೆಸಲಾಗುವುದು. * ಮುಂಚೆ ಪ್ರವಾಹ ಬಂದಾಗ ಮೂರೇ ತಾಸಿನಲ್ಲಿ ನೀರು ಇಳಿಮುಖ. * ಜಲಾಶಯಗಳಲ್ಲಿ ಹೂಳು …

Read More »

ಹಿರಿಯ ಸಮಾಜ ಸುಧಾರಕ ಆನಂದ ಚೋಪ್ರಾ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ : ಸಂತೋಷ ಜಾರಕಿಹೊಳಿ.

ಸವದತ್ತಿ ತಾಲ್ಲೂಕಿನ ಹಿರಿಯ ಸಮಾಜ ಸೇವಕರಾಗಿದ್ದ *ಆನಂದ ಚೋಪ್ರಾ* ಅವರ ಅಕಾಲಿಕ ಮರಣವು ನನ್ನ ಮನಸ್ಸಿಗೆ ದುಃಖ ತಂದಿದೆ. ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ *ಆನಂದ ಚೋಪ್ರಾ* ಅವರು ಜನಪರ ಕಾಳಜಿ ಹೊಂದಿದ್ದರು. ಬಡವರ ಮತ್ತು ದೀನದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಇವರ ನಿಧನದಿಂದ ಹಿರಿಯ ಸಮಾಜ ಸುಧಾರಕರನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ ಕುಟುಂಬದ ಸದಸ್ಯರಿಗೆ ಅಗಲಿಕೆಯ ಶೋಕ ಭರಿಸುವ ಶಕ್ತಿ …

Read More »

ಸಮಾಜ ಸೇವಕ ಆನಂದ ಚೋಪ್ರಾ ಅಕಾಲಿಕ ನಿಧನ ಅವರ ಆತ್ಮಕ್ಕೆ ಶಾಂತಿ ಸಿಗಲಿ : ರಮೇಶ ಜಾರಕಿಹೊಳಿ.

ಸವದತ್ತಿ ತಾಲ್ಲೂಕಿನ ಹಿರಿಯ ಸಮಾಜ ಸೇವಕರಾಗಿದ್ದ ನನ್ನ ಸ್ನೇಹಿತ *ಆನಂದ ಚೋಪ್ರಾ* ಅವರ ಅಕಾಲಿಕ ಮರಣವು ನನ್ನ ಮನಸ್ಸಿಗೆ ದುಃಖ ತಂದಿದೆ.       ಧಾರ್ಮಿಕ ಮತ್ತು ಸಾಮಾಜಿಕ ಸೇವೆಯಲ್ಲಿ ತೊಡಗಿದ್ದ *ಆನಂದ ಚೋಪ್ರಾ* ಅವರು ಜನಪರ ಕಾಳಜಿ ಹೊಂದಿದ್ದರು. ಬಡವರ ಮತ್ತು ದೀನದಲಿತರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದರು. ಇವರ ನಿಧನದಿಂದ ನಾನು ಒಬ್ಬ ಒಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ‌ ದೊರಕಲಿ‌ ಮತ್ತು ಅವರ …

Read More »

ಕರ್ನಾಟಕ ರಾಜ್ಯದ ಮೊದಲ ಕಿಸಾನ್ ರೈಲು ಬೆಂಗಳೂರಿನಿಂದ ಇಂದು ದೆಹಲಿಗೆ ಸಂಚಾರ; ರೈತರಲ್ಲಿ ಹೊಸ ನೀರಿಕ್ಷೆ..!

ಬೆಳಗಾವಿ : ದೇಶದ ಮೂರನೇ ಕಿಸಾನ್ ರೈಲು ಇಂದು ಬೆಂಗಳೂರಿನಿಂದ ದೆಹಲಿಗೆ ಸಂಚಾರ ನಡೆಸಲಿದೆ. ರೈಲಿನ ಮೂಲಕ ಅಂತರಾಜ್ಯ ಕೃಷಿ ಉತ್ಪನ್ನಗಳ ಸಾಗಾಟಕ್ಕೆ ಉಪಯೋಗವಾಗಲಿದ್ದು, ರೈತರಲ್ಲಿ ಹೊಸ ನೀರಿಕ್ಷೆಯನ್ನು ಹುಟ್ಟಿಸಿದೆ. ಬೆಂಗಳೂರು ನಿಂದ ದೆಹಲಿಯನ್ನು ತಲುಪಲು ರೈಲು 54 ಗಂಟೆಯ ಸಮಯ ತೆಗೆದುಕೊಳ್ಳಲಿದೆ. ರಾಜ್ಯದಲ್ಲಿ ಇದೇ ಮೊದಲ ಸಲ ಕಿಸಾನ್ ರೈಲು ಸಂಚಾರ ಇಂದಿನಿಂದ ಆರಂಭವಾಗಲಿದೆ. ಪ್ರತಿ ಶನಿವಾರ ಸಂಜೆ 4.45ಕ್ಕೆ ಬೆಂಗಳೂರಿನಿಂದ ಹೊರಟ ರೈಲು ಸೋಮವಾರ ರಾತ್ರಿ 11.45ಕ್ಕೆ …

Read More »

ಬೆಳಗಾವಿ: ಖಾಸಗಿಯಿಂದ ಸರ್ಕಾರಿ ಶಾಲೆಗಳತ್ತ ‘ದಾಖಲೆ’

ಬೆಳಗಾವಿ: ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಿಗೆ ದಾಖಲಿಸಿರುವ ‘ದಾಖಲೆಯ ಬೆಳವಣಿಗೆ’ ನಡೆದಿದೆ. ಈ ಶೈಕ್ಷಣಿಕ ಜಿಲ್ಲೆಯ ಬೈಲಹೊಂಗಲ, ಕಿತ್ತೂರು, ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಖಾನಾಪುರ, ಸವದತ್ತಿ ಹಾಗೂ ರಾಮದುರ್ಗ ಕ್ಷೇತ್ರಗಳಲ್ಲಿ 1ರಿಂದ 10ನೇ ತರಗತಿವರೆಗೂ ಮಕ್ಕಳು ಖಾಸಗಿಯಿಂದ ಸರ್ಕಾರಿ ಶಾಲೆಗಳತ್ತ ಬಂದಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದಿರುವ ಅಂಕಿ-ಅಂಶಗಳ ಪ್ರಕಾರ, ಈವರೆಗೆ 954 ಬಾಲಕರು ಮತ್ತು 852 ಬಾಲಕಿಯರು …

Read More »

ಟ್ರ್ಯಾಕ್ಟರ್‌ಗಳ ಚಕ್ರಗಳ ಕಳವು: 7 ಆರೋಪಿಗಳ ಬಂಧನ

ಬೆಳಗಾವಿ: ರಸ್ತೆ ಬದಿ ಹಾಗೂ ತೋಟದ ಮನೆಗಳ ಬಳಿ ನಿಲ್ಲಿಸಿದ್ದ ಟ್ರ್ಯಾಕ್ಟರ್‌ ಟ್ರೇಲರ್‌ಗಳ ಡಿಸ್ಕ್‌ ಸಮೇತ ಚಕ್ರಗಳನ್ನು ಕದಿಯುತ್ತಿದ್ದ ಆರೋಪದ ಮೇಲೆ ಏಳು ಮಂದಿಯನ್ನು ಶುಕ್ರವಾರ ಬಂಧಿಸಿರುವ ಖಡಕಲಾಟ ಠಾಣೆ ಪೊಲೀಸರು, ಅವರಿಂದ ₹ 8.61 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. ನಿಪ್ಪಾಣಿ ತಾಲ್ಲೂಕು ಗಳತಗಾದ ಮಾರುತಿ ಠೊಣ್ಣೆ, ಮಹಾದೇವ ಮಾಕಾಳೆ, ಬಾಬು ಡಾಲೆ, ಶಿವಾನಂದ ಗಜಬರ, ಖಾನಾಪುರ ತಾಲ್ಲೂಕು ಕಕ್ಕೇರಿಯ ಸಂಜು ಅಂಬಡಗಟ್ಟಿ ಶ್ರಾವಣ ಹುಲಮನಿ ಹಾಗೂ ಘಷ್ಟೊಳಿ …

Read More »

ಕೊರೊನಾ ಚಿಕಿತ್ಸೆಗೆ 19 ದಿನಕ್ಕೆ 11 ಲಕ್ಷ ಬಿಲ್- 1 ರೂ.ಡಿಸ್ಕೌಂಟ್

ಚಿಕ್ಕಮಗಳೂರು: ಕೊರೊನಾ ಹೆಸರಲ್ಲಿ ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿದ್ದು, ಚಿಕಿತ್ಸೆ ದಾಖಲಾದ ವ್ಯಕ್ತಿಗೆ ಕೇವಲ 19 ದಿನಕ್ಕೆ 11 ಲಕ್ಷ ರೂ.ಬಿಲ್ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿಯ ಪಿಳ್ಳೇನಹಳ್ಳಿ ಗ್ರಾಮದ 70 ವರ್ಷದ ನಂಜುಡಪ್ಪ ಅವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಆಗಸ್ಟ್ 24ರಂದು ನಗರದ ಆಶ್ರಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೊನಾ ಚಿಕಿತ್ಸೆಗೆಂದು ದಾಖಲಾದ ವ್ಯಕ್ತಿಗೆ ಖಾಸಗಿ ಆಸ್ಪತ್ರೆ 19 ದಿನಕ್ಕೆ …

Read More »

ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಬಳಿಕ ಸಿಎಂ ಯಡಿಯೂರಪ್ಪ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ನವದೆಹಲಿಯಲ್ಲಿ ವಾಸ್ತವ್ಯ ಹೂಡಿರುವ ಯಡಿಯೂರಪ್ಪನವರು, ಇಂದು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಈ ನಡುವೆ ನಿನ್ನೆ ಪ್ರಧಾನಿ ಮೋದಿಯವರನ್ನು ಸಂಸತ್‍ನಲ್ಲಿ ಭೇಟಿ ಮಾಡಿದ್ದ ಯಡಿಯೂರಪ್ಪ ಭಾವುಕರಾಗಿ ಕಣ್ಣಿರಿಟ್ಟಿದ್ದಾರೆ ಎಂಬ ಸುದ್ದಿ ಲಭ್ಯವಾಗಿದೆ. ಸಿಎಂ ಭೇಟಿ ವೇಳೆ ಪ್ರಧಾನಿ ಮೋದಿಯವರು ಬಿಎಸ್‍ವೈ ಆರೋಗ್ಯದ ಬಗ್ಗೆ ಅತೀವ ಕಾಳಜಿ ತೋರಿದ್ದು, …

Read More »

ತೆರಿಗೆ ಹೆಚ್ಚಿಸಿ ಬೆಂಗಳೂರಿಗರಿಗೆ B.B.M.P. ಶಾಕ್

ಬೆಂಗಳೂರು: ಕೊರೊನಾ ಮಧ್ಯೆ ಬೆಂಗಳೂರು ಜನರಿಗೆ ತೆರಿಗೆ ಶಾಕ್ ಕಾದಿದೆ. ಬಿಬಿಎಂಪಿ ಆದಾಯ ಹೆಚ್ಚಿಸಲು ಮುಂದಾಗಿರುವ ಪಾಲಿಕೆ ಜನಸಾಮಾನ್ಯರಿಗೆ ಹೊರೆಮಾಡಲಿದೆ. ಆಸ್ತಿ ತೆರಿಗೆ, ಪ್ಲಾನ್ ಅಪ್ರೂವಲ್, ಖಾತಾ ಹಂಚಿಕೆ ದರ ಏರಿಕೆ ಜೊತೆಗೆ ಭೂ ಸಾರಿಗೆ ಸೆಸ್ ಜಾರಿಗೆ ತರಲು ಬಿಬಿಎಂಪಿ ತೀರ್ಮಾನ ಮಾಡಿದೆ. ಆಸ್ತಿ ತೆರಿಗೆ ಶೇ.15 ರಿಂದ 25ರಷ್ಟು ಹೆಚ್ಚಳ, ಖಾತಾ ಚಾರ್ಜ್ ಶೇ.2 ರಿಂದ 5 ರಷ್ಟು ಏರಿಕೆ ಸಾಧ್ಯತೆ ಇದೆ. ಆಸ್ತಿ ನೋಂದಣಿ ಮಾಡುವಾಗ …

Read More »

ಮಳೆ ನೀರಲ್ಲಿ ಕೊಚ್ಚಿ ಹೋದ ಯುವಕ……

ಬೆಂಗಳೂರು: ರಾಜ್ಯದ ಹಲವೆಡೆ ಇಂದು ವರುಣ ಅಬ್ಬರಿಸಿದ್ದು, ಬೀದರ್ ಕಲಬುರಗಿ, ರಾಯಚೂರು, ಯಾದಗಿರಿ, ಕೊಡಗು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯಲ್ಲಿ ಮಳೆ ನೀರಿನ ರಭಸಕ್ಕೆ ಯುವಕ ಕೊಚ್ಚಿಹೋಗಿದ್ದು, ಮೃತಪಟ್ಟಿದ್ದಾನೆ.ಕಲಬುರಗಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದ್ದಿದ್ದು, ಅಫಜಲಪುರ್, ಆಳಂದ, ಚಿಂಚೋಳಿಯ ಹಲವು ಗ್ರಾಮಗಳು ಜಲಾವೃತವಾಗಿವೆ. ಅಲ್ಲದೆ ಜಿಲ್ಲೆ ಆಳಂದ ತಾಲೂಕಿನ ಬೊಮ್ಮನಹಳ್ಳಿ ಬಳಿ ನೀರಿನಲ್ಲಿ ಕೊಚ್ಚಿ ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿದ್ದು, ಮೃತ ಯುವಕ ಸಿದ್ದರಾಜು ಅಫಜಲಪುರ ಜೆಸ್ಕಾಂನಲ್ಲಿ ಎಇಇ …

Read More »