Breaking News

ರಾಜ್ಯ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ (27-09-2020-ಭಾನುವಾರ)

ನಿತ್ಯ ನೀತಿ: ಹಿಂ ಸೆ ಮತ್ತು ದ್ವೇಷದಿಂದ ಏನನ್ನೂ ಸಾಧಿಸಲಾಗುವುದಿಲ್ಲ. ಅಹಿಂಸೆ ಮತ್ತು ಪ್ರೀತಿಯಿಂದಲೋಕವನ್ನೇ ಜಯಿಸಬಹುದು. -ಡಾ.ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ # ಪಂಚಾಂಗ :ಭಾನುವಾರ, 27.09.2020 ಸೂರ್ಯ ಉದಯ ಬೆ.06.09 / ಸೂರ್ಯ ಅಸ್ತ ಸಂ.06.12 ಚಂದ್ರ ಉದಯ ಬೆ.03.37 / ಚಂದ್ರ ಅಸ್ತ ರಾ.03.11 ಶಾರ್ವರಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಅಧಿಕ ಆಶ್ವಯುಜ ಮಾಸ / ಶುಕ್ಲ ಪಕ್ಷ / ತಿಥಿ: ಏಕಾದಶಿ(ರಾ.07.47) ನಕ್ಷತ್ರ: …

Read More »

ಇನ್ನೂ 20 ವರ್ಷ ಕಾಂಗ್ರೆಸ್‍ನ್ನು ವಿಪಕ್ಷ ಸ್ಥಾನದಲ್ಲೇ ಕೂರಿಸುತ್ತೇನೆ : ಬಿಎಸ್ವೈ ಚಾಲೆಂಜ್

ಬೆಂಗಳೂರು,  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 145ರಿಂದ 150 ಸ್ಥಾನ ಗೆದ್ದು ಇನ್ನೂ 20 ವರ್ಷ ಕಾಂಗ್ರೆಸ್ ವಿರೋಧ ಪಕ್ಷದಲ್ಲೇ ಕೂರುವಂತೆ ಮಾಡುವುದು ನನ್ನ ಗುರಿ. ಅದನ್ನು ಮಾಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸವಾಲು ಹಾಕಿದರು. ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಅವರು, ಬಿಡಿಎ ವಸತಿ ಯೋಜನೆಯಲ್ಲಿ ನೀವು ಮಾಡಿರುವ ಆರೋಪ ಕುರಿತು ನೀವು ಸಿಬಿಐಗಾದರೂ ಹೋಗಿ, ಹೈಕೋರ್ಟ್‍ಗಾದರೂ ಹೋಗಿ, ಲೋಕಾಯುಕ್ತಕ್ಕಾದರೂ ಹೋಗಿ, …

Read More »

ಸಂಖ್ಯಾಬಲದ ಕೊರತೆಯಿಂದ ಬಿದ್ದುಹೋಯ್ತು ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯ

ಬೆಂಗಳೂರು,   ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಸಂಪುಟ ಮೇಲೆ ವಿಶ್ವಾಸವಿಲ್ಲ ಎಂದು ಕಾಂಗ್ರೆಸ್ ವಿಧಾನಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಸಂಖ್ಯಾಬಲದ ಕೊರತೆಯಿಂದ ಬಿದ್ದು ಹೋಗಿದೆ. ಅವಿಶ್ವಾಸ ನಿರ್ಣಯದ ಬಗ್ಗೆ ಎರಡನೇ ಪ್ರತಿಪಕ್ಷ ಜೆಡಿಎಸ್‍ ತಟಸ್ಥ ನಿಲುವು ಅನುಸರಿಸಿತ್ತು. ಅವಿಶ್ವಾಸವನ್ನು ವಿಭಜನೆಯ ಮತಕ್ಕೆ ಹಾಕುವುದಾದರೆ ಕೊರೊನಾ ಸೋಂಕಿಗೆ ಸಿಲುಕಿ ಚಿಕಿತ್ಸೆ ಪಡೆಯುತ್ತಿರುವ ಶಾಸಕರನ್ನು ಪಿಪಿಇ ಕಿಟ್‍ ಹಾಕಿಸಿ ವಿಧಾನಸಭೆಗೆ ಕರೆ ತರುವುದಾಗಿ ಬಿಜೆಪಿ ಹೇಳಿತ್ತು. ಈ ಕುರಿತಂತೆ ಬೆಳಗ್ಗೆ ನಡೆದ ಚರ್ಚೆಯಲ್ಲಿ …

Read More »

ಸಾಲಬಾಧೆ: ಅಂಜುಟಗಿಯಲ್ಲಿ ಯುವಕ ಆತ್ಮಹತ್ಯೆ

ವಿಜಯಪುರ: ಸಾಲಬಾಧೆ ಹಿನ್ನೆಲೆಯಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಡಿ ತಾಲೂಕಿನ ಅಂಜುಟಗಿ ಗ್ರಾಮದಲ್ಲಿ ನಡೆದಿದೆ. ಪುಂಡಲೀಕ ಹಂಜಗಿ(23) ನೇಣುಬಿಗಿದುಕೊಂಡ ಯುವಕ. ಅನಾರೋಗ್ಯ ಪೀಡಿತ ತಾಯಿಗೆ ಚಿಕಿತ್ಸೆ ಕೊಡಿಸಲು ಪುಂಡಲೀಕ ಸಾಲಮಾಡಿದ್ದ. ಸಾಲ ಮರುಪಾವತಿಸಲು ಸಾಧ್ಯವಾಗದ ಕಾರಣ ಮನನೊಂದು ನೇಣಿಗೆ ಶರಣಾಗಿದ್ದಾನೆ. ಈತ ಯುವ ರೈತನೂ ಆಗಿದ್ದ. ಆದರೆ ತಪ್ಪು ನಿರ್ಧಾರದಿಂದ ತಮ್ಮವರನ್ನು ಬಿಟ್ಟು ಹೊರಟಿದ್ದಾನೆ. ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More »

ಕುಡಿದ ಮತ್ತಿನಲ್ಲಿ ತುಂಬಿ ಹರಿಯುತ್ತಿದ್ದ ನದಿಗೆ ಹಾರಿದ ಕುಡುಕ.. ಮುಂದೇನಾಯ್ತು?

ಬೆಳಗಾವಿ: ತುಂಬಿ ಹರಿಯುತ್ತಿರುವ ನದಿಗೆ ಹಾರಿ ಕುಡುಕ ಹುಚ್ಚಾಟ ಮೆರೆದಿರುವ ಘಟನೆ ಮೂಡಲಗಿ ತಾಲೂಕಿನ ಢವಳೇಶ್ವರ ಬಳಿಯ ಘಟಪ್ರಭಾ ನದಿ ಬಳಿ ನಡೆದಿದೆ. ಢವಳೇಶ್ವರ ಗ್ರಾಮದ ನಿವಾಸಿ ಹಾಲಪ್ಪ ಕುಡಿದ ಮತ್ತಿನಲ್ಲಿ ಉಕ್ಕಿ ಹರಿಯುತ್ತಿರುವ ಘಟಪ್ರಭಾ ನದಿಗೆ ಹಾರಿ ಹುಚ್ಚಾಟ ಪ್ರದರ್ಶಿಸಿದ್ದಾನೆ. ನದಿಗೆ ಹಾರಿದ ಬಳಿಕ ಈಜಲು ಆಗದೆ ಸೇತುವೆ ಕೆಳಭಾಗದಲ್ಲಿ ತೆಲಿ ಹೋಗಿದ್ದಾನೆ. ಸೇತುವೆ ದಾಟಿ ಮತ್ತೆ ನದಿ ನೀರಿನಲ್ಲಿ ಮೇಲೆದಿದ್ದಾನೆ. ನೂರು ಮೀಟರ್ ನಷ್ಟು ಮುಂದೆ ಸಾಗಿ ಈಜಿ …

Read More »

ರಾಜ್ಯ ಸರ್ಕಾರದಿಂದ `ಶುಶ್ರೂಷಕಿಯರಿಗೆ’ ಶುಭಸುದ್ದಿ : ಮಾಸಿಕ 5 ಸಾವಿರ ರೂ. ಪ್ರೋತ್ಸಾಹ ಧನ

ಬೆಂಗಳೂರು : ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಆರೋಗ್ಯ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಆರೋಗ್ಯ ಮಾದರಿಯ ಕೇಂದ್ರಗಳಲ್ಲಿ ವೈಯಕ್ತಿಕ ಸುರಕ್ಷಾ ಸಾಧನೆ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿರುವ ಶುಶ್ರೂಷಕರಿಗೆ ಮಾಸಿಕ 5 ಸಾವಿರ ರೂ. ಕೋವಿಡ್ ರಿಸ್ಕ್ ಪ್ರೋತ್ಸಾಹ ಧನ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ಶುಶ್ರೂಷಕರಿಗೆ ಮುಂದಿನ ಆರು ತಿಂಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಪ್ರೋತ್ಸಾಹಧನ ನೀಡಬೇಕಿದೆ. ಪ್ರೋತ್ಸಹ ಧನವು …

Read More »

ಕರ್ನಾಟಕ ಬಂದ್: ಕೇಂದ್ರದ ಮಸೂದೆ ವಿರುದ್ಧ ನಾಳೆ ರೈತ ಸಂಘಟನೆಗಳ ಕಹಳೆ!

ಬೆಂಗಳೂರು: ರಾಜ್ಯದಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಮವಾರ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ಮುಂದಾಗಿದ್ದಾರೆ. ರೈತ ಸಂಘಟನೆಗಳಲ್ಲಿನ ಗೊಂದಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸುದ್ದಿಗೋಷ್ಠಿ ಎಲ್ಲಾ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ರೈತ ಸಂಘಟನೆಗಳು ಸೋಮವಾರ ಕರ್ನಾಟಕ …

Read More »

ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಬೀದರ್: ಕೊರೊನಾ ಸೋಂಕಿಗೆ ಬಲಿಯಾದ ಕ್ಷೇತ್ರದ ಶಾಸಕ ಬಿ. ನಾರಾಯಣರಾವ್ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ  ನೆರವೇರಿತು. ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದ ಸಸ್ತಾಪುರ ಬಂಗ್ಲಾ ಬಳಿಯ ಶಾಸಕರ ನಿವೇಶನ ಜಾಗದಲ್ಲಿ ಅಂತ್ಯಕ್ರಿಯೆ ನಡೆಯಿತು. ಸರ್ಕಾರಿ ಗೌರವ ಹಾಗೂ ಧಾರ್ಮಿಕ ವಿಧಿ ವಿಧಾನಗಳನುಸಾರ ಕೊರೊನಾ ನಿಯಮಗಳನ್ನನುಸರಿಸಿ ಅಗಲಿದ ಶಾಸಕರಿಗೆ ಅಂತಿಮ ನಮನ ಸಲ್ಲಿಸಲಾಯಿತು.   ಅಂತ್ಯಕ್ರಿಯೆ ವೇಳೆ ಪೊಲೀಸ್ ಪಡೆಯಿಂದ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ …

Read More »

ಡ್ರಗ್ಸ್ ಪ್ರಕರಣ – ಡ್ಯಾನ್ಸರ್ ಕಿಶೋರ್‌ಗೆ ಅ.9ರವರೆಗೆ ನ್ಯಾಯಾಂಗ ಬಂಧನ

ಮಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಬಂಧಿಸಿದಂತೆ ಬಂಧಿತರಾಗಿರುವ ಬಾಲಿವುಡ್ ನಟ, ಡ್ಯಾನ್ಸರ್ ಕಿಶೋರ್ ಅಮನ್ ಹಾಗೂ ಅಕೀಲ್ ನೌಶೀನ್‍ನನ್ನು ಅಕ್ಟೋಬರ್ 9 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರನ್ನು ಶುಕ್ರವಾರ ನಾರ್ಕೊಟಿಕ್ ಕ್ರೈಂ ಪೊಲೀಸರು ಮಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಿದ ಪೊಲೀಸರು, ಅ.9 ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.ಕಳೆದ ಆರು ದಿನಗಳಿಂದ ಆರೋಪಿಗಳು ನಾರ್ಕೊಟಿಕ್ ಪೊಲೀಸರ ವಶದಲ್ಲಿದ್ದರು. ಸೆಪ್ಟೆಂಬರ್ 19ರಂದು ಮಂಗಳೂರಿನಲ್ಲಿ ಕುಳಾಯಿ ನಿವಾಸಿ ಬಾಲಿವುಡ್ …

Read More »

ಜಿಲ್ಲಾಧಿಕಾರಿ ಕಾಳಜಿಗೆ ಮನಸೋತು ಮಗುವಿಗೆ ಡಿಸಿ ಹೆಸರಿಟ್ಟ ದಂಪತಿ

ಬಳ್ಳಾರಿ: ಜನ್ಮವಿತ್ತ ಮಗುವಿಗೆ ತಮ್ಮ ಜಿಲ್ಲೆಯ ಡಿಸಿ ಹೆಸರನ್ನೇ ನಾಮಕರಣ ಮಾಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ದಾವಣಗೆರೆಯಲ್ಲಿ ನೆಲೆಸಿರುವ ದಂಪತಿ ತಮ್ಮ ಮಗುವಿಗೆ ಡಿಸಿ ಎಸ್.ಎಸ್.ನಕುಲ್ ಅವರ ಹೆಸರನ್ನಿಟ್ಟಿದ್ದಾರೆ. ಮಹಿಳೆಯ ತವರು ಮನೆ ಬಳ್ಳಾರಿಯಾಗಿದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಹೆರಿಗೆಗೆಂದು ಬಳ್ಳಾರಿಗೆ ಬಂದಿದ್ದರು. ಈ ವೇಳೆ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆಂದು ತೆರಳಿದಾಗ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈ ವೇಳೆ ಹೆರಿಗೆಯನ್ನು ಯಶಸ್ವಿಯಾಗಿಯೇ ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯಲ್ಲಿ ಮಾಡಿಸಲಾಗಿತ್ತು. ಅದೃಷ್ಟವಶಾತ್ ತಾಯಿಗೆ …

Read More »