Breaking News

ರಾಜ್ಯ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚುವರಿ ಶೇಕಡ 3 ರಷ್ಟು ಉದ್ಯೋಗ ಕಲ್ಪಿಸುವುದು ಕಡ್ಡಾಯ

ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಹೆಚ್ಚುವರಿ ಶೇಕಡ 3 ರಷ್ಟು ಉದ್ಯೋಗ ಕಲ್ಪಿಸುವುದು ಕಡ್ಡಾಯವಾಗಿದೆ. ಹೊಸ ಉದ್ಯೋಗ ನೀತಿಗೆ ಸರ್ಕಾರ ಅಸ್ತು ಎಂದಿದ್ದು, ಎ, ಬಿ ವರ್ಗದಲ್ಲಿಯೂ ಕನ್ನಡಿಗರಿಗೆ ಮೀಸಲಾತಿ ನೀಡಲು ತೀರ್ಮಾನಿಸಲಾಗಿದೆ. ಕೈಗಾರಿಕೆಗಳಲ್ಲಿ ಬಂಡವಾಳ ಹೂಡಿಕೆ ವಿಸ್ತರಣೆಯನ್ನು ಆಧರಿಸಿ ಸ್ಥಳೀಯ ಕನ್ನಡಿಗರಿಗೆ ಹೆಚ್ಚುವರಿ ಉದ್ಯೋಗ ನೀಡುವುದನ್ನು ಕಡ್ಡಾಯಗೊಳಿಸುವ ಕರ್ನಾಟಕ ಉದ್ಯೋಗ ನೀತಿ 2022 -25 ಕ್ಕೆ ಅನುಮೋದನೆ ನೀಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ …

Read More »

ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ಪ್ರಯುಕ್ತ ಎಂಇಎಸ್‍ನಿಂದ ಪ್ರತಿಭಟನೆ..!

ಬೆಳಗಾವಿ ನಗರದಲ್ಲಿ ಬರುವ ಅಗಸ್ಟ್ 9ರಂದು ಕ್ರಾಂತಿ ದಿನಾಚರಣೆ ನಿಮಿತ್ಯವಾಗಿ ಮರಾಠಿ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿಯಲ್ಲೇ ಎಲ್ಲಾ ಸರಕಾರ ದಾಖಲೆಗಳನ್ನು ಪಡೆಯಬೇಕೆನ್ನುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಂಇಎಸ್ ಮುಖಂಡರಾದ ದೀಪಕ ದಳವಿ ಹೇಳಿದ್ದಾರೆ. ಹೌದು ಇಂದು ಶುಕ್ರವಾರ ಬೆಳಗಾವಿ ನಗರದಲ್ಲಿ ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಮರಾಠಿ ಭಾಷಿಕರು ಮರಾಠಿ ಭಾಷೆಯಲ್ಲಿಯೇ ಪಡೆಯಬೇಕಂಬ ಬೇಡಿಕೆಯನ್ನು ಇಟ್ಟುಕೊಂಡು ಬರುವ ಅಗಸ್ಟ್ 9ರಂದು …

Read More »

ಕಾಗವಾಡನಲ್ಲಿ ಹೆಚ್ಚಿನ ಕಳ್ಳತನ; ಪೊಲೀಸ್ ವೈಫಲ್ಯ ರಾಗಿದ್ಧಾರೆ.: ಶ್ರೀಮಂತ ಪಾಟೀಲ

ಕಳೆದ ಕೆಲ ತಿಂಗಳಗಳಿಂದ ಕಾಗವಾಡ ಮತಕ್ಷೇತ್ರದ ವ್ಯಾಪ್ತಿಯ ಗ್ರಾಮಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ.ಇದನ್ನುತಡೆಯಲುಕಾಗವಾಡ ಪೊಲೀಸರುವಿಫಲರಾಗಿದ್ದಾರೆ.ಇದರ ವಿರುದ್ಧ ಗೃಹ ಸಚಿವರಿಗೆ ನಾನು ದೂರು ಸಲ್ಲಿಸಿದ್ದೇನೆ ಎಂದುಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಸ್ಪಷ್ಟಪಡಿಸಿದ್ದರು. ಕಾಗವಾಡ ಮತಕ್ಷೇತ್ರ ವ್ಯಾಪ್ತಿಯಲ್ಲಿ ದಿನನಿತ್ಯ ಸರಣಿಗಳತನ, ಮನೆಗಳಲ್ಲಿ ದರೋಡೆ, ನದಿ ತೀರದ ಪಂಪ ಸೆಟಗಳ ಕೇಬಲ ಕಳ್ಳತನ ಬಹಳಷ್ಟು ಪ್ರಮಾಣದಲ್ಲಿಹೆಚ್ಚಾಗಿದ್ದಾವೆ. ಈ ಪ್ರಕರಣಗಳು ತನಿಖೆ ಮಾಡಿ ಕಳ್ಳರನ್ನು ಬಂಧಿಸಲುಕಾಗವಾಡ ಪೊಲೀಸರುವಿಫಲರಾಗಿದ್ಧಾರೆ. ಜುಗುಳ ಗ್ರಾಮದಲ್ಲಿ ಮನೆ ದರೋಡೆ ಮಾಡಿ 16 …

Read More »

ತಮ್ಮ 600 ಕೋಟಿ ರೂ. ಆಸ್ತಿಯನ್ನು ಸರ್ಕಾರದ ಹೆಸರಿಗೆ ಬರೆದ ವೈದ್ಯ; ಯಾರಿವರು?

ಅರವಿಂದ್ ಗೋಯಲ್ ಉತ್ತರ ಪ್ರದೇಶದ ಅತ್ಯಂತ ಯಶಸ್ವಿ ವೈದ್ಯರಲ್ಲಿ ಒಬ್ಬರು. ಅವರು ಕಳೆದ 50 ವರ್ಷಗಳಿಂದ ವೈದ್ಯರಾಗಿ ಕೆಲಸ ಮಾಡುತ್ತಿದ್ದು, ತಮ್ಮ ಕಠಿಣ ಪರಿಶ್ರಮದಿಂದ ನೂರಾರು ಕೋಟಿ ರೂ. ಹಣವನ್ನು ಸಂಪಾದಿಸಿದ್ದಾರೆ.ನವದೆಹಲಿ: ಅರವಿಂದ್ ಗೋಯಲ್ ಎಂಬ ವ್ಯಕ್ತಿ ತನ್ನ 600 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಉತ್ತರ ಪ್ರದೇಶ ಸರ್ಕಾರಕ್ಕೆ (Uttar Pradesh Government) ದಾನ ಮಾಡುವ ಮೂಲಕ ಭಾರೀ ಸುದ್ದಿಯಲ್ಲಿದ್ದಾರೆ. ಭಾರತದ ಬಡ ಜನರಿಗೆ ಸಹಾಯ ಮಾಡಲು ಅರವಿಂದ್ …

Read More »

ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಬಯಕೆ ಈಡೇರಿಸಿದ ಪೊಲೀಸರು!

ಬೆಂಗಳೂರು: ಗುಣಮುಖವಾಗದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಇಬ್ಬರು ಬಾಲಕರ ಬಹುದಿನದ ಬಯಕೆಯನ್ನು ಬೆಂಗಳೂರು ಆಗ್ನೇಯ ವಿಭಾಗದ ಪೊಲೀಸರು ಈಡೇರಿಸಿದ್ದಾರೆ. ಕೇರಳದ ಮೊಹಮದ್ ಸಲ್ಮಾನ್ ಮತ್ತು ಬೆಂಗಳೂರಿನ ಬಿ, ಮಿಥಿಲೇಶ್ ಮಾರಣಾಂತಿಕ ರೋಗದಿಂದ ಬಳಲುತ್ತಿದ್ದು ಇಬ್ಬರು ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.   ಈ ಇಬ್ಬರು ಬಾಲಕರು ಪೊಲೀಸ್ ಅದಿಕಾರಿಯಾಗಬೇಕೆಂದು ಮೇಕ್ ಎ ವಿಶ್ ಇಂಡಿಯಾ ಎಂಬ ಎನ್ ಜಿ ಒ ಕಾರ್ಯಕರ್ತರ ಬಳಿ ತಮ್ಮ ಆಸೆ ವ್ಯಕ್ತ ಪಡಿಸಿದ್ದರು. ಅದರಂತೆ …

Read More »

ಇ.ಡಿ. ತೆಕ್ಕೆಯಲ್ಲಿ ಅತ್ತೆ: ರಾಜಕೀಯಕ್ಕೆ ಅಳಿಯನ ಎಂಟ್ರಿ? ಸೋನಿಯಾ ಕುಟುಂಬದಿಂದ ಬಂತೊಂದು ಸುದ್ದಿ.

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಂಸದ ರಾಹುಲ್​ ಗಾಂಧಿ ಅವರಿಗೆ ಜಾರಿ ನಿರ್ದೇಶನಾಲಯ ಇದಾಗಲೇ ವಿಚಾರಣೆಗೆ ಒಳಪಡಿಸಿದೆ. ರಾಹುಲ್​ ಗಾಂಧಿ ಇದಾಗಲೇ ಕೆಲವು ಬಾರಿ ವಿಚಾರಣೆ ಎದುರಿಸುದ್ದರೆ, ಸೋನಿಯಾ ಅವರನ್ನು ನಿನ್ನೆ (ಗುರುವಾರ) ವಿಚಾರಣೆ ಮಾಡಲಾಗಿದೆ. ತಮ್ಮ ಅತ್ತೆಯನ್ನು ಇ.ಡಿ. ವಿಚಾರಣೆಗೆ ಒಳಪಡಿಸಿರುವುದಕ್ಕೆ ಕಿಡಿ ಕಾರಿರುವ ಪ್ರಿಯಾಂಕಾ ವಾದ್ರಾ ಅವರ ಪತಿ ರಾಬರ್ಟ್ ವಾದ್ರಾ ಅಗತ್ಯ ಉಂಟಾದರೆ …

Read More »

ಬೆಳಗಾವಿ: ಪ್ರೇಯಸಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಯುವಕ, ಕಾರಣ?

ಬೆಳಗಾವಿ: ಯುವಕನೋರ್ವ ಪ್ರೇಯಸಿಯ ಕೊಂದು ಬಳಿಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬಸವ ಕಾಲೋನಿಯಲ್ಲಿ ನಡೆದಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಮದ್ಲೂರು ಗ್ರಾಮದ ರೇಣುಕಾ ಎಂಬುವಳನ್ನು ಬೂದಿಗೊಪ್ಪ ಗ್ರಾಮದ ರಾಮಚಂದ್ರ ತೆಣಗಿ (29) ಎಂಬಾತ ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ರೇಣುಕಾ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಇತ್ತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ರಾಮಚಂದ್ರ ತೆಣಗಿ ರಾಜ್ಯಶಾಸ್ತ್ರದಲ್ಲಿ ಉನ್ನತ ಪದವಿ ವ್ಯಾಸಂಗ ಮಾಡುತ್ತಿದ್ದ. ಕೊಲೆಯಾದ ರೇಣುಕಾ …

Read More »

ದೇಹಲಿ ಭೇಟಿ ಬಳಿಕ ನಿಗಮ, ಮಂಡಳಿ ನೇಮಕ: ಸಿ.ಎಂ

ಮಂಡ್ಯ: ‘ದೆಹಲಿಗೆ ಭೇಟಿ ನೀಡಿದ ನಂತರ ನಿಗಮ, ಮಂಡಳಿ ನೇಮಕಾತಿ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಮಂತ್ರಿಮಂಡಲಕ್ಕೆ ಸೇರ್ಪಡೆ ವಿಚಾರವನ್ನೂ ಪಕ್ಷದ ವರಿಷ್ಠರ ಜೊತೆ ಚರ್ಚಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತಿಳಿಸಿದರು.   ಕೆ.ಆರ್‌.ಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲಿದ್ದು ನೇಮಕಾತಿ ಕುರಿತಂತೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ನಿಗಮ, ಮಂಡಳಿಗೆ ನೇಮಕಾತಿ ಕುರಿತಂತೆ ಇಲ್ಲಿಯವರೆಗೂ ಯಾವುದೇ ಚರ್ಚೆ ನಡೆಸಿಲ್ಲ’ ಎಂದರು. ಕೆ.ಎಸ್‌.ಈಶ್ವರಪ್ಪ ಅವರು …

Read More »

ಆರು ದಿನಗಳ ಪರಿಯಂತ ಮಳೆಯನ್ನ ಲೆಕ್ಕಿಸದೆ ಸೈಕಲ್ ಜಾತಾ

ಆರು ದಿನಗಳ ಪರಿಯಂತ ಮಳೆಯನ್ನ ಲೆಕ್ಕಿಸದೆ ಸೈಕಲ್ ಜಾತಾದಲ್ಲಿ ಪಾಲಗೋಂಡ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಸೈಕಲ್ ಸವಾರರಿಗೆ ಪಕ್ಷದ ಮುಖಂಡ ಮಹೇಂದ್ರ ತಮ್ಮಣ್ಣವರ ಇವರಿಂದ ಸತ್ಕಾರ ರಾಯಬಾಗ ತಾಲೂಕಿನಲ್ಲಿ ಇದೆ 11–7-2022 ರಿಂದ 16-7-2022 ರ ವರೆಗೆ ಕುಡಚಿ ಮತ ಕ್ಷೇತ್ರದ ಮುಖಂಡ ಮಹೇಂದ್ರ ತಮ್ಮಣ್ಣವರ ಕ್ಷೇತ್ರದ 32 ಹಳ್ಳಿಗಳಲ್ಲಿ ಸೈಕಲ್‌ ಜಾತಾ ಮಾಡುವ ಮೂಲಕ ಆಡಳಿತ ಪಕ್ಷದವಾದ ಬಿಜೆಪಿ ಸರಕಾರದ ಕಾರ್ಯ ವೈಪಲ್ಯ ಹಾಗೂ ಬೆಲೆ ಏರಿಕೆ ಖಂಡಿಸಿ …

Read More »

ಶಾಲೆಯಲ್ಲಿ ಬಿಸಿಯೂಟ ತಿಂದು 50 ಮಕ್ಕಳಿಗೆ ವಾಂತಿ, ಭೇದಿ, ಮಕ್ಕಳು ಅಸ್ವಸ್ಥ

ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಅನ್ನ ಹಾಗೂ ತರಕಾರಿ ಸಾಂಬಾರ್​ ಮಾಡಿದ್ರು. ಎಲ್ಲಾ ಮಕ್ಕಳು ಅದೇ ಊಟ ಮಾಡಿದ್ದಾರೆ. ಊಟ ತಿಂದ ಬಳಿಕ 50 ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗ (ಜು 21):  ಬಿಸಿಯೂಟ ಸೇವಿಸಿದ್ದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳುಅಸ್ವಸ್ಥಗೊಂಡಿದ್ದಾರೆ. ಚಿತ್ರದುರ್ಗದ ಇಸಾಮುದ್ರ ಗೊಲ್ಲರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ‌ ನಡೆದಿದೆ. ವಾಂತಿ, ಭೇದಿಯಿಂದ ಅಸ್ವಸ್ಥಗೊಂಡವರನ್ನ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಭರಮಸಾಗರ ಪ್ರಾಥಮಿಕ …

Read More »