Breaking News

ರಾಜಕೀಯ

ಮುಳಗುಂದದಲ್ಲಿ ಶ್ರೀ ಗ್ರಾಮದೇವತೆ ಟೋಪ ಜಾತ್ರಾ ಮಹೋತ್ಸವ

ಮುಳಗುಂದದಲ್ಲಿ ಶ್ರೀ ಗ್ರಾಮದೇವತೆ ಟೋಪ ಜಾತ್ರಾ ಮಹೋತ್ಸವ ಮಹಿಳೆ ಶಕ್ತಿಯ ದ್ಯೋತಕ, ಸಮೃದ್ಧಿಯ ಸಂಕೇತ ಭಾರತದ ಸಂಸ್ಕೃತಿ ಇಡೀ‌ ವಿಶ್ವಕ್ಕೆ ಮಾದರಿ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗದಗ: ಭಾರತ ಪುಣ್ಯ ಭೂಮಿ, ಈ ನಾಡಿನಲ್ಲಿ ಅದೆಷ್ಟೋ ಸಾಧು ಸಂತರು, ಪುಣ್ಯ ಪುರುಷರು, ಮಠಾಧೀಶರು ಬದುಕಿ ಈ ಭೂಮಿಯನ್ನು ಪಾವನವಾಗಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ‌ ಇತಿಹಾಸ ಪ್ರಸಿದ್ಧ ಮುಳಗುಂದದ …

Read More »

ಮರಾಠಾ ಲಘು ಪದಾತಿದಳದ – ೫ನೇ ಬ್ಯಾಚ್ ಅಗ್ನಿವೀರ ಸೈನಿಕರ ನಿರ್ಗಮನ ಪಥ ಸಂಚಲನ

ಮರಾಠಾ ಲಘು ಪದಾತಿದಳದ – ೫ನೇ ಬ್ಯಾಚ್ ಅಗ್ನಿವೀರ ಸೈನಿಕರ ನಿರ್ಗಮನ ಪಥ ಸಂಚಲನ ಬೆಳಗಾವಿಯ ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟ್‌ಲ್ ಸೆಂಟರ್‌ಲ್ಲಿ ಕಳೆದ ೩೧ ವಾರಗಳ ಕಾಲ ಸೈನಿಕ ತರಬೇತಿ ಪಡೆದ ೬೫೯ ಅಗ್ನಿವೀರ ಸೈನಿಕರ ತಂಡದ ನಿರ್ಗಮನ ಪಥ ಸಂಚಲನ ಮರಾಠಿ ಲಘು ಪದಾತಿದಳ ಮೈದಾನದಲ್ಲಿ ಜುರುಗಿತು. ಎಂಎಲ್‌ಆಯ್‌ಆರ್‌ಸಿ ಕಮಾಂಡೆಂಟ್ ಬ್ರಿಗೇಡಿಯರ್ ಜಾಯ್‌ದೀಪ ಮುಖರ್ಜಿ ಅವರು ಪರೇಡ್ ಗೌರವ ವಂದನೆ ಸ್ವೀಕರಿಸಿದರು. ಅಗಿವೀರ ಗಜಾನನ ರಾಠೋಡ್ ನೇತೃತ್ವದಲ್ಲಿ …

Read More »

ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಣೆ

ಸೌಭಾಗ್ಯಲಕ್ಷ್ಮೀ ಶುಗರ್ಸ್ ಕಾರ್ಖಾನೆ ಆವರಣದಲ್ಲಿ ವಿಶ್ವ ಪರಿಸರ ದಿನ ಆಚರಣೆ ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ್ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ವಿಶ್ವ ಪರಿಸರ ದಿನ ಆಚರಣೆ ಮಾಡಿದರು. ಕಾರ್ಖಾನೆ ಆವರಣದಲ್ಲಿ ಸಸಿ ನೆಡುವ ಮೂಲಕ ಆಚರಿಸಿದರು. ಈ ಸಂದರ್ಭದಲ್ಲಿ ಹಿರೇನಂದಿ ಊರಿನ ಹಿರಿಯರು, ಕಾರ್ಖಾನೆ ಸಿಬ್ಬಂದಿಗಳು ಹಾಗೂ ಯುವಕರು ಉಪಸ್ಥಿತರಿದ್ದರು.

Read More »

ಮಂಕಾಳ. ಎಸ್. ವೈದ್ಯ ಹುಟ್ಟುಹಬ್ಬ ಆಚರಣೆಯಿಲ್ಲ.!!

ಅಭಿಮಾನಿಗಳಲ್ಲಿ ಹಾಗೂ ಕಾರ್ಯಕರ್ತರಲ್ಲಿ ನನ್ನದೊಂದು ವಿನಂತಿ. !! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟ್ರೋಪಿಗೆದ್ದು ತವರಿಗೆ ಆಗಮಿಸಿದ ಸಂತೋಷದ ಕ್ಷಣದಲ್ಲಿ ತಮ್ಮ ನೆಚ್ಚಿನ ಆಟಗಾರರನ್ನ ಕಣ್ತುಂಬಿಕೊಳ್ಳುವ ಸಲುವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ವಿಧಾನಸೌಧದ ಮುಂಬಾಗದ ರಸ್ತೆಗಳಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಸಂದರ್ಭದಲ್ಲಿ ದುರದೃಷ್ಟವಶಾತ್ ಕಾಲ್ತುಳಿತ ಸಂಭವಿಸಿ 10 ಕ್ಕೂ ಹೆಚ್ಚು ಜನರು ಅಸುನೀಗಿದ್ದಾರೆ ಮತ್ತು 30 ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥ ಗೊಂಡು ಆಸ್ಪತ್ರೆಗೆ …

Read More »

ಭೂಕುಸಿತ ಭೀತಿ: ಜಿಲ್ಲೆಯ ಈ ನಾಲ್ಕು ಪ್ರದೇಶಗಳು ಅತಿ ಅಪಾಯಕಾರಿ: ಸಮಿಕ್ಷಾ ವರದಿಯಲ್ಲಿ ಬಹಿರಂಗ

ಕಳೆದ ವರ್ಷ ಮಳೆಗಾಲದಲ್ಲಿ ಶಿರೂರು ಕುಡ್ದ ಕುಸಿತ ದುರಂತದ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂಕುಸಿತದ ಭೀತಿ ಎದುರಾಗಿದೆ. ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಪ್ರದೇಶಗಳು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದ್ದು ಇಲ್ಲಿ ಜಿಎಸ್ ಐ ಸಮೀಕ್ಷೆ ನಡೆಸಿದ್ದು, ಆತಂಕಕಾರಿ ವರದಿ ಬಹಿರಂಗವಾಗಿದೆ. ನಾಲ್ಕು ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಭೂಕುಸಿತ ಸಂಭವಿಸಬಹುದು ಎಂದು ಎಚ್ಚರಿಕೆ ನೀಡಲಾಗಿದೆ. ಜಿಯಾಲಾಜಿಕಲ್ ಸರ್ವೆ ಆಫ್ ಇಂಡಿಯಾ ವರದಿಯಲ್ಲಿ ಕುಮಟಾ ತಾಲೂಕಿನ ಬರ್ಗಿಯ …

Read More »

ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ

ಆರ್‌ಸಿಬಿ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಅಭಿಮಾನಿಗಳು ಎಷ್ಟೊಂದು ಪ್ರಮಾಣದಲ್ಲಿ ಬಂದರು ಎಂದರೆ, ಭೀಕರ ಕಾಲ್ತುಳಿತವೇ ಸಂಭವಿಸಿದೆ.ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೆ ಏರಿದೆ. ಇನ್ನೂ ಇಬ್ಬರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಘಟನೆಯಲ್ಲಿ ಅಸ್ವಸ್ಥಗೊಂಡ ಇಬ್ಬರಿಗೂ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರ್‌ಸಿಬಿ ಆಟಗಾಗರನ್ನು ನೋಡಲು ಬಂದಿದ್ದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಧಾನಸೌಧದ ಮುಂದೆ ಜಮಾಯಿಸಿದ್ದಾರೆ. ಇನ್ನೂ ಇದೇ ವೇಳೆ ಅಭಿಮಾನಿಗಳೆಲ್ಲಾ ಚಿನ್ನಸ್ವಾಮಿ ಸ್ಟೇಡಿಯಂ ಏಕಾಏಕಿ ಬಂದಿದ್ದಾರೆ. ಇದೇ ಕಾರಣಕ್ಕೆ ನೂಕು ನುಗ್ಗಲು …

Read More »

KSCA ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುರಂತ ಸಂಭವಿಸಿದೆ: ಸಿಎಂ ಪರೋಕ್ಷ ಹೇಳಿಕೆ

ಬೆಂಗಳೂರು, ಜೂನ್​ 04: ಟಾಟಾ ಐಪಿಎಲ್​ ಚಾಂಪಿಯನ್ಸ್​ ಟ್ರೋಫಿ ಗೆದ್ದು, ಆರ್​ಸಿಬಿ (RCB) ತಂಡ ಬೆಂಗಳೂರಿಗೆ ಹಿಂದಿರುಗಿದೆ. ಈ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ವಿಧಾನಸೌಧದ ಮುಂದೆ ನಡೆದ ಕಾರ್ಯಕ್ರಮ ಯಶಸ್ವಿಯಾಗಿದೆ. ಆದರೆ, ಕೆಎಸ್​ಸಿಎ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ಆಯೋಜಿಸಿದ ಕಾರ್ಯಕ್ರಮದಿಂದ ಕಾಲ್ತುಳಿತ ಸಂಭವಿಸಿ ಜನ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಈ ಘಟನೆಯಲ್ಲಿ ಸರ್ಕಾರದ ತಪ್ಪಿಲ್ಲ ಎಂದು ಹೇಳಿದರು. ಆದರೆ, ಸಿಎಂ …

Read More »

ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ

ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ ಸಭೆಗೆ ಅಧಿಕಾರಿಗಳು ಗೈರು; ಡಿಎಂಕೆಗೆ ದೂರು ನೀಡಲು ನಗರಸೇವಕರ ಒತ್ತಾಯ ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆಗೆ ವರಿಷ್ಠಾಧಿಕಾರಿಗಳು ಗೈರಾದ ಹಿನ್ನೆಲೆ ನಗರಸೇವಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ, ಡಿಎಂಕೆಗೆ ದೂರು ನೀಡಲು ಅಧ್ಯಕ್ಷರನ್ನು ಒತ್ತಾಯಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಷ್ಮಾ ಕಾಮಕರ ಅಧ್ಯಕ್ಷತೆಯಲ್ಲಿ ಅರ್ಥ ಮತ್ತು …

Read More »

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ…

ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ… ಸುಳ್ಳು ಹಬ್ಬಿಸುತ್ತ ಕೆಟ್ಟ ವಾತಾವರಣ ನಿರ್ಮಿಸುವುದೇ ಅವರ ಕೆಲಸ; ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ, ಧರ್ಮದ ವಿಚಾರದಲ್ಲಾಗಲಿ ನಂಬಿಕೆಯಿಲ್ಲ. ಸುಳ್ಳುಗಳನ್ನೇ ಹಬ್ಬಿಸುತ್ತ ಹೋಗುತ್ತಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಸಿ.ಬಿ ಟ್ರಾಫಿ ಗೆದ್ದ ವಿಚಾರವಾಗಿ 17 ವರ್ಷಗಳ ನಂತರ ಚಾಂಪಿಯನ್ ಆಗಿದ್ದು, ಹೆಮ್ಮೆಯ ವಿಷಯ. ಅಭಿಮಾನಿಗಳ …

Read More »

ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ

ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಸುಧಾರಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ‌‌. ಈ ಮೂಲಕ ಸುರಕ್ಷಿತ ಮತ್ತು ದಕ್ಷ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖವಾದ ಎರಡು ಕಾಮಗಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಲಮಟ್ಟಿ ಸೇತುವೆ ಸಂಖ್ಯೆ 63ಡಿ …

Read More »