ಹಾಸನ: ವಿದ್ಯಾರ್ಥಿಗಳ ಹಿತ ಕಾಯಬೇಕಿದ್ದ ಮಹಿಳಾ ಪ್ರಾಂಶುಪಾಲರೊಬ್ಬರು ತಲೆ ತಗ್ಗಿಸುವಂತಹ ಕೆಲಸ ಮಾಡಿದ್ದು, ಗುರು-ಶಿಷ್ಯರ ಸಂಬಂಧಕ್ಕೆ ಮಸಿ ಬೆಳೆದಿದ್ದಾರೆ. ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯ ಉತ್ತರಗಳನ್ನು ವಿರೂಪಗೊಳಿಸಿದ ಆರೋಪ ಕೇಳಿಬಂದಿದ್ದು, ಈ ಘಟನೆ ಹಾಸನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದೆ. ಈ ಸಂಬಂಧ ಪ್ರಾಂಶುಪಾಲೆ ಶೋಭಾದೇವಮಾನೆ ವಿರುದ್ಧ ಹಾಸನ ಬಡಾವಣೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನೊಂದ ವಿದ್ಯಾರ್ಥಿ ಚನ್ನಯ್ಯ ನೀಡಿದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಾಲೇಜಿನ …
Read More »ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ: ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ
ಹಾಸನ: ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಇರುತ್ತವೆ. ಹಾಗಾಗಿ ಯಾರೂ ಆತ್ಮಹತ್ಯೆ ಕಡೆಗೆ ಮುಖ ಮಾಡಬಾರದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ನಂದಿನಿ ಹೇಳಿದರು. ನಗರದ ಎವಿಕೆ ಕಾಲೇಜಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಪೂರ್ತಿ ರೇಂಜರ್ ಘಟಕ, ಭಾರತ ಸೇವಾದಳ ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಮಹಿಳಾ ಜಾಗೃತಿ ಶಿಬಿರದಲ್ಲಿ ಮಹಿಳೆ ಮತ್ತು ಕಾನೂನಿನ ರಕ್ಷಣೆ ಎಂಬ ವಿಷಯ ಕುರಿತು ಮಾತನಾಡಿದರು. ಮನೆಯಲ್ಲಿ …
Read More »ಶೂಟಿಂಗ್ ವೇಳೆ ಸಂಭವಿಸಿದ ಅವಗಡ; ಅಪಾಯದಿಂದ ಪಾರಾದ ರಿಷಬ್ ಶೆಟ್ಟಿ
ಹಾಸನ : ಬೇಲೂರು ಬಳಿ ಚಿರಣ ನಡೆಸುತ್ತಿದ್ದ ಸಂದರ್ಭದಲ್ಲಿ ನಟ ರಿಷಬ್ ಶೆಟ್ಟಿ ಚಿತ್ರೀಕರಣದ ವೇಳೆ ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಹೀರೋ ಚಿತ್ರದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದ್ದು, ಪೆಟ್ರೋಲ್ ಬಾಂಬ್ ಗೆ ಬೆಂಕಿ ಹಿಡಿಯಿತು. ಅದರ ಬೆಂಕಿ ರಿಷಬ್ ಶೆಟ್ಟಿ ಅವರ ಬೆನ್ನಿಗೆ ಕೂಡ ತಗುಲಿತ್ತು ಎಂದು ವರದಿಗಳು ತಿಳಿಸಿದ್ದು, ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ. ಈ ಕುರಿತಾಗಿ ಹೇಳಿಕೆ ನೀಡಿರುವ ಚಿತ್ರತಂಡ ರಿಷಬ್ ಶೆಟ್ಟಿ …
Read More »ಮುಂದಿನ ಮಳೆಗಾಲದಲ್ಲಿ ವೇದಾವತಿ ಕಣಿವೆಯಿಂದ ವಾಣಿ ವಿಲಾಸ ಜಲಾಯಶಕ್ಕೆ ನೀರು : ಸಚಿವ ರಮೇಶ್ ಜಾರಕಿಹೊಳಿ
ಹಾಸನ : ಮುಂದಿನ ಮಳೆಗಾಲದಲ್ಲಿ ಚಿತ್ರದುರ್ಗ ಜಿಲ್ಲೆಯ ವಾಣಿ ವಿಲಾಸ ಜಲಾಶಯಕ್ಕೆ ವೇದಾವತಿ ಕಣಿವೆ ಮೂಲಕ ತಾತ್ಕಾಲಿಕವಾಗಿ ನೀರು ಹರಿಸಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಜಿಲ್ಲೆಯ ಬೇಲೂರು ತಾಲ್ಲೂಕಿನ ಎತ್ತಿನಹೊಳೆ ಯೋಜನಾ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಬಳಿಕ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಹಂತ-1ರ ಕಾಮಗಾರಿಗಳು ಮತ್ತು ಹಂತ-2ರ 33 ಕಿ.ಮೀ.ವರೆಗಿನ ಗುರುತ್ವಾ ಕಾಲುವೆ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು. ಪ್ರಾಯೋಗಿಕ ನೀರನ್ನು …
Read More »ಕುಖ್ಯಾತ ರೌಡಿ ಲಿಂಗರಾಜನ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : 16 ಆರೋಪಿಗಳು ಅಂದರ್
ಹಾಸನ,- ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹಿರೀಸಾವೆ ಪೊಲೀಸ್ ಠಾಣಾ ಸರಹದ್ದಿನ ಕಮವರಳ್ಳಿಯಲ್ಲಿ ವಾರದ ಹಿಂದೆ ನಡೆದಿದ್ದ ಬೆಂಗಳೂರಿನ ಕುಖ್ಯಾತರೌಡಿ ಶೀಟರ್ ಲಿಂಗರಾಜನ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, 16 ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಹನ @ ಡಬ್ಬಲ್ ಮೀಟರ್ ಮೋಹನ, ನಂಜಪ್ಪ @ ನಂಜ @ ಕರಿಯ, ನಾಗರಾಜ @ ನಾಗ, ಗ್ರೇಸ್ ವಾಲ್ಟರ್ @ ವಾಲ್ಟರ್, ನವೀನ್ ಕುಮಾರ, ಪ್ರದೀಪ @ ದಾಸರಹಳ್ಳಿ ಪ್ರದೀಪ, ಸುನೀಲ್‍ಕುಮಾರ @ ಸುನೀಲ್, …
Read More »ರೈತ ವಿರುದ್ದ ಕಾಯ್ದೆಯಾಗಿದ್ದರೆ ಜೆಡಿಎಸ್ ವಿರೋಧಿಸುತ್ತಿತ್ತು : ನಮ್ಮ ಪಕ್ಷ ರೈತರ ಪರವಿದೆ
ಹಾಸನ: ನಮ್ಮ ಜೆಡಿಎಸ್ ಪಕ್ಷವು ರೈತರ ವಿರುದ್ಧ ಇಲ್ಲ. ರೈತರ ಪರವಾಗಿದ್ದು, ಏನಾದರೂ ರೈತರ ವಿರುದ್ಧದ ಕಾಯಿದೆ ಇದ್ದರೇ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ. ಹಾಸನದಲ್ಲಿ ಸಂಸದರ ನಿವಾಸದಲ್ಲಿ ಮಾತನಾಡಿದ ಅವರು, “ಭೂಸುಧಾರಣಾ ಕಾಯ್ದೆಗೆ ಈಗಲೂ ನಮ್ಮದು ವಿರೋಧವಿದೆ. ರೈತರಿಗೆ ಕೆಲವು ವಿಷಯ ಮಾರ್ಪಾಡು ಮಾಡುತ್ತೇವೆ ಎಂದಾಗ ನಾವು ಬೆಂಬಲಿಸಿದ್ದೇವೆ. ಕೆಲ ವಿಷಯಗಳನ್ನ ಮಾರ್ಪಾಡು ಮಾಡಿದ ಬಳಿಕ ನಾವು …
Read More »,ಪಿಡಿಒಗಳಿಂದ ಬಿಜೆಪಿ ಹಣ ವಸೂಲಿಎಚ್.ಡಿ.ರೇವಣ್ಣ ಗಂಭೀರ ಆರೋಪ
ಹಾಸನ: ಕ್ಷೇತ್ರದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಪಿಡಿಓಗಳು 10 ಸಾವಿರ ಹಣ ನೀಡುವಂತೆ ದೊಡ್ಡಮಟ್ಟದ ಬಿಜೆಪಿ ನಾಯಕರು ಸೂಚಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಎಚ್.ಡಿ.ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣ ಅವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮ ಪಂಚಾಯತ್ ಚುನಾವಣೆಗೆ ವಂತಿಕೆ ನೀಡಬೇಕು ಎಂದು ಪಿಡಿಓ -ಗ್ರಾಮ ಪಂಚಾಯತ್ ಕಾರ್ಯದರ್ಶಿಗಳಿಗೆ ಹಾಗೂ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ …
Read More »ವೈದ್ಯರ ನಿರ್ಲಕ್ಷ್ಯ ಆರೋಪ – ಹುಟ್ಟುತ್ತಲೇ ಹೆಣ್ಣು ಮಗು ಸಾವು
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಗ್ರಾಮದ ಚಾಂದಿನಿ ಅವರು ಹೆರಿಗೆ ನೋವಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ, ತಾಯಿ ಇಲ್ಲದ ಚಾಂದಿನಿಯನ್ನು ಅವರ ಅಣ್ಣನೇ ಕಾಳಜಿ ವಹಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದರುಹೆರಿಗೆ ನೋವಿನ ಕಾರಣ ಹಾಸನ ಹಿಮ್ಸ್ …
Read More »ನಮಗೆ ನೀರು ಕೊಡದಿದ್ರೆ ಪೈಪ್‍ಲೈನ್ ಒಡೆದು ಹಾಕ್ತೀನಿ: ಶಿವಲಿಂಗೇಗೌಡ
ಹಾಸನ: ನಮಗೆ ನೀರು ಕೊಡದೆ ಪೈಪ್ ಲೈನ್ ತೆಗೆದುಕೊಂಡು ಹೋದರೆ ಅದನ್ನು ಒಡೆದು ಹಾಕಿಸ್ತೀನಿ. ಏನಾಗುತ್ತೋ ಆಗಲಿ ಎಂದು ಶಾಸಕ ಶಿವಲಿಂಗೇಗೌಡ ಕೆಡಿಪಿ ಸಭೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹಾಸನದ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಈ ವೇಳೆ ಮಾತನಾಡಿದ ಶಾಸಕ ಶಿವಲಿಂಗೇಗೌಡ ಕೃಷ್ಣಾ ಬೇಸಿನ್ ನಲ್ಲಿ ನಮಗೂ ಹಕ್ಕಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ಎರಡು ಹೋಬಳಿಗಳು ಕೃಷ್ಣಾ ಬೇಸಿನ್‍ಗೆ ಸೇರಿದೆ. ನಮಗೆ ನೀರು ಕೊಡ್ತೀವಿ …
Read More »ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ದರ್ಶನಕ್ಕೆ ಇಂದು ಕಡೆಯ ದಿನ
ಹಾಸನ: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ದರ್ಶನಕ್ಕೆ ಇಂದು ಕಡೆಯ ದಿನಾಗಿದ್ದು ಬಾಗಿಲು ಹಾಕಲು ಕ್ಷಣಗಣನೆ ಆರಂಭವಾಗಿದೆ. ಇಂದು ಮಧ್ಯಾಹ್ನ 12:30ರ ನಂತರ ದೇವಾಲಯದ ಬಾಗಿಲು ಹಾಕಲಾಗುತ್ತೆ. ಬಾಗಿಲು ಹಾಕುವಾಗ ಹಚ್ಚಿಸಿಟ್ಟ ದೀಪ ಒಂದು ವರ್ಷದ ನಂತರ ಬಾಗಿಲು ತೆರೆದಾಗಲೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂವು ವರ್ಷ ಕಳೆದರೂ ಬಾಡುವುದಿಲ್ಲ ಎಂಬ ನಂಬಿಕೆಯಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದರು. ಆದರೆ …
Read More »
Laxmi News 24×7