ನಿಪ್ಪಾಣಿ: ’ಚಿಕ್ಕೋಡಿ ಲೋಕಸಭಾ ಕ್ಷೇತ್ರದ ೬ ತಾಲ್ಲೂಕುಗಳಲ್ಲ್ಲಿ ಇಲ್ಲಿಯವರೆಗೆ ಒಟ್ಟು ೧೯ ಸೋಂಕಿತರು ಕಂಡುಬಂದಿದ್ದಾರೆ. ಕೇವಲ ರಾಯಬಾಗ ತಾಲ್ಲೂಕಿನಲ್ಲಿ ೧೮ ಜನರು ಮತ್ತು ಹುಕ್ಕೇರಿ ತಾಲ್ಲೂಕಿನಲ್ಲಿ ಒಬ್ಬರು ಒಳಗೊಂಡಿದ್ದಾರೆ. ಇತರೆ ತಾಲ್ಲೂಕುಗಳಲ್ಲಿ ಒಬ್ಬರೂ ಸೋಂಕಿತರು ಇಲ್ಲ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ೨೩೪ ಜನರು ವಿದೇಶದಿಂದ, ೧೫೮೭೯ ಜನರು ಪರರಾಜ್ಯದಿಂದ ಮತ್ತು ೧೦೭೧೮ ಜನರು ಹೊರಜಿಲ್ಲೆಗಳಿಂದ ಬಂದಿದ್ದು ಅವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ’ ಎಂದು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ. …
Read More »ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿ
ಸಂಕೇಶ್ವರ : ಕಳೆದ ಹಲವು ದಿನಗಳಿಂದ ಅಕ್ರಮವಾಗಿ ದೇಶಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಸಂಕೇಶ್ವರ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತ ವ್ಯಕ್ತಿಯಿಂದ ೧೪ ಲೀಟರ್ ಮದ್ಯ ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆ ವ್ಯಾಪ್ತಿಯ ಕರಜಗಾ ಗ್ರಾಮದಲ್ಲಿ ಲಾಕಡೌನ್ ಆರಂಭದಿಂದಲೂ ದೇಶಿ ಮದ್ಯ ಪೂರೈಸುತ್ತಿದ್ದ ಕರಜಗಾ ಗ್ರಾಮದ ಫಕ್ರುದ್ದೀನ ಸಯ್ಯದ ಸೊಲ್ಲಾಪೂರೆ ಬಂಧಿತ ಆರೋಪಿ. ಡಿವೈಎಸ್ಪಿ ಡಿ.ಟಿ. ಪ್ರಭು, ಸಿಪಿಐ ಗಣಪತಿ ಕಲ್ಯಾಣಶೆಟ್ಟಿ, ಪಿಎಸ್ಐ ಗಣಪತಿ ಕೊಗನೊಳ್ಳಿ ಮಾರ್ಗದರ್ಶನದಲ್ಲಿ ಪ್ರೊಬೆಷನರಿ ಪಿಎಸ್ಐ …
Read More »ರೈತರ ಸಂಕಷ್ಟಕ್ಕಿಡಾಗಲು ಅಧಿಕಾರಿಗಳೇ ಕಾರಣ: ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ
ಚಿಕ್ಕೋಡಿ : ತಾಲೂಕಿನ ರೈತರು ಯಾವ ತೋಟಗಾರಿಕೆ ಬೆಳೆ ಬೆಳೆಯುತ್ತಿದ್ದಾರೆಂಬ ಸಂಪೂರ್ಣ ಮಾಹಿತಿ ಸಂಗ್ರಹ ಮಾಡಿಲ್ಲ. ಒಂದು ವಾರದ ಹಿಂದೆ ಕೇಳಿದ ಮಾಹಿತಿ ಈವರೆಗೆ ತಯಾರಿಸಿಲ್ಲ. ಇದರಿಂದಾಗಿಯೇ ರೈತರು ಹಾಳಾಗುತ್ತಿದ್ದಾರೆಂದು ತೋಟಗಾರಿಕೆ ಇಲಾಖೆ ಅಧಿಕಾರಿ ಎಂ.ಎಸ್.ಹಿಂಡಿಹೊಳಿ ಅವರನ್ನು ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ತೀವೃ ತರಾಟೆಗೆ ತೆಗೆದುಕೊಂಡರು. ಪಟ್ಟಣದ ಲೋಕೊಪಯೋಗಿ ಇಲಾಖೆ ಸಭಾಭವನದಲ್ಲಿ ಶುಕ್ರವಾರ ನಡೆದ ಕೊರೊನಾ ಮುಂಜಾಗೃತ ಕ್ರಮಗಳ ಕುರಿತಾದ ತಾಲೂಕ ಮಟ್ಟದ ಅಧಿಕಾರಿಗಳ ಸಭೆಯಲ್ಲಿ …
Read More »ರಾಯಬಾಗ ,ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಮಾರಾಟ ಸ್ಥಳಗಳ ಮೇಲೆಅಬಕಾರಿ ಇಲಾಖೆ ದಾಳಿ….
ಚಿಕ್ಕೋಡಿ : ರಾಯಬಾಗ ಹಾಗೂ ಚಿಕ್ಕೋಡಿ ವಲಯಗಳ ವ್ಯಾಪ್ತಿಯಲ್ಲಿ ಕಳ್ಳಭಟ್ಟಿ ಮಾರಾಟ ಸ್ಥಳಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ದ್ವಿಚಕ್ರದ ವಾಹನ, ಟಾಟಾ ಇಂಡಿಗೋ ಕಾರ್,ಕಳ್ಳಭಟ್ಟಿ ಸರಾಯಿ ಸೇರಿ ಸುಮಾರು 4 ಲಕ್ಷ ಮೌಲ್ಯದ ಸಾಮಗ್ರಿಗಳನ್ನು ಗುರುವಾರ ವಶ ಪಡಿಸಿಕೊಂಡಿದ್ದಾರೆ. ಚಿಕ್ಕೋಡಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ವಿಜಯಕುಮಾರ್ ಹಿರೇಮಠರವರ ನೇತೃತ್ವದಲ್ಲಿ ಅಬಕಾರಿ ಉಪ ಆಯುಕ್ತ ಬಸವರಾಜ್ ಸಂದಿಗವಾಡ್, ಅಬಕಾರಿ ಇನ್ಸ್ಪೆಕ್ಟರ್ ಬಸವರಾಜ್ ಕರಾಮಣ್ಣವರ್ ಇವರು …
Read More »ಮದ್ಯ ಸಾಗಾಟ ಮಾಡುತ್ತಿದ್ದಕುಡಚಿ ಶಾಸಕ ಪಿ. ರಾಜೀವ್ನ ವಾಹನ ಚಾಲಕ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಮುಗಳಖೋಡ: ಲಾಕಡೌನ ಹಿನ್ನೆಲೆಯಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕುಡಚಿ ಶಾಸಕ ಪಿ. ರಾಜೀವ್ನ ವಾಹನ ಚಾಲಕ ಸೇರಿ ಐವರನ್ನು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆ ಪೊಲೀಸರು ಪ್ರತ್ಯೇಕ ದಾಳಿಯಲ್ಲಿ ಬಂಧಿಸಿದ್ದಾರೆ. ಶಾಸಕ ಕಾರ್ ಚಾಲಕ ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಸೇರಿದಂತೆ ಇತರೆ ಐವರು ಆರೋಪಿಗಳಿಂದ ಒಟ್ಟು ರೂ 15.635 ಮೌಲ್ಯದ ಮಧ್ಯ ಹಾಗೂ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಿಣೆಯ ಗ್ರಾಮದ ಬಳಿ ಬೋಲೆರೋ …
Read More »ಬಡವರಿಗೆ ಉಚಿತವಾಗಿ 67 ಟನ್ ಆಹಾರ ಸಾಮಗ್ರಿ ವಿತರಿಸಿದ ಉಮೇಶ್ ಕತ್ತಿ
ಬೆಳಗಾವಿ(ಚಿಕ್ಕೋಡಿ): ಲಾಕ್ಡೌನ್ ಹಿನ್ನೆಲೆ ದುಡಿಮೆ ಇಲ್ಲದೆ ಮನೆಯಲ್ಲಿ ಕಷ್ಟದಲ್ಲಿ ಇರುವ ಬಡವರಿಗೆ ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ ಸಹಾಯ ಹಸ್ತ ಚಾಚಿದ್ದಾರೆ. ಉಮೇಶ್ ಕತ್ತಿ ಅವರು ತಮ್ಮ ತಂದೆ ವಿಶ್ವನಾಶ್ ಕತ್ತಿ ಹಾಗೂ ತಾಯಿ ರಾಜೇಶ್ವರಿ ಅವರ ಸ್ಮರಣಾರ್ಥ ಹುಕ್ಕೇರಿ ತಾಲೂಕಿನ 5,500 ಬಡ ಕುಟುಂಬಗಳಿಗೆ ಉಚಿತವಾಗಿ ದಿನಸಿ ವಸ್ತುಗಳನ್ನ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದ ವಿಶ್ವರಾಜ ಭವನದಲ್ಲಿ ಸಾಂಕೇತಿಕವಾಗಿ ಬಡವರಿಗೆ ದಿನಸಿ ಸಾಮಗ್ರಿಗಳನ್ನ ವಿತರಿಸಲಾಯಿತು. ಹುಕ್ಕೇರಿ …
Read More »ಚಿಕ್ಕೋಡಿ:ಕೊರೊನಾ ಭೀತಿ- ರಸ್ತೆಯಲ್ಲಿ 100ರೂ. ನೋಟು ಬಿದ್ದರೂ ಎತ್ತಿಕೊಳ್ಳುತ್ತಿಲ್ಲ
ಚಿಕ್ಕೋಡಿ: ರಸ್ತೆಯಲ್ಲಿ ಒಂದು ರೂಪಾಯಿ ಬಿದ್ದಿದ್ದರೂ ಎತ್ಕೊಂಡು ಜೇಬಿಗೆ ಹಾಕ್ತಿದ್ರು. ಆದರೆ ಕೊರೊನಾ ಹುಟ್ಟಿಸಿರುವ ಭೀತಿಗೆ ರಸ್ತೆಯಲ್ಲಿ ನೂರು ರೂಪಾಯಿ ಬಿದ್ದಿದ್ದರೂ ಎತ್ತಿಕೊಳ್ಳದೆ ಪುರಸಭೆ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಮಾಡಿ ಕರೆಸಿ ನೂರು ರೂಪಾಯಿಯನ್ನು ಅವರ ವಶಕ್ಕೆ ನೀಡಿದ್ದಾರೆ. ಕೊರೊನಾ ಭೀತಿ ಹುಟ್ಟಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಯಾರೋ ಅಪರಿಚಿತರು ಸಾರ್ವಜನಿಕರಲ್ಲಿ ಭೀತಿ ಮೂಡಿಸಲು 100 ರೂ. ನೋಟನ್ನು ರಸ್ತೆಯಲ್ಲಿ ಎಸೆದಿದ್ದರು. ಇದನ್ನು ಕಂಡ ಸಂಕೇಶ್ವರ …
Read More »ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ.
ಬೆಳಗಾವಿ: ಸಂಕೇಶ್ವರ ಪಕ್ಕದ ಹರಗಾಪೂರ ಬಳಿ ಇಂದು ಬೆಳಿಗ್ಗೆ ಮೂರು ಕಾಡುಕೋಣ ಗಳು ಕಾಣಿಸಿಕೊಂಡಿದ್ದು, ಜನರು ಭಯದಿಂದ ಓಡಾಡಿದ್ದಾರೆ. ಸಂಕೇಶ್ವರ ಪಟ್ಟಣದ ಸಮೀಪದ ಹೊಲಗಳಲ್ಲಿ 3 ಕಾಡುಕೋಣ ಕಾಡಿಸಿಕೊಂಡಿವೆ. ಜಮೀನಿನಲ್ಲಿ ಕೆಲಸ ಮಾಡುವ ರೈತರ ಅವುಗಳನ್ನು ಕಂಡು ಭಯ ಬೀತರಾಗಿ ಬೆದರಿಸುವ ಕಾರ್ಯಕ್ಕೂ ಮುಂದಾಗಿದ್ದಾರೆ. ಜತೆ ನೀರಾವರಿ ಜಮೀನಿನಲ್ಲಿ ರೈತರ ಬೆಲೆ ಬಾಳುವ ಪೈಪ್ ಗಳನ್ನು ತುಳಿದು ಓಡಿವೆ. ಇದರಿಂದ ನೀರಾವರಿ ಜಮೀನಿನಲ್ಲಿ ನಾಶವಾಗಿರುವುದನ್ನು ಕಂಡು ಮರುಗಿದ್ದಾರೆ. ಹೊಲದಲ್ಲಿ ಇದ್ದಂತ …
Read More »30 ಟನ್ ಕಲ್ಲಂಗಡಿ, ಪೇರಳೆ ಖರೀದಿಸಿ ಜನರಿಗೆ ಉಚಿತವಾಗಿ ಹಂಚಿದ ಸತೀಶ್ ಜಾರಕಿಹೊಳಿ
ಚಿಕ್ಕೋಡಿ(ಬೆಳಗಾವಿ): ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರಿಂದ ಸರ್ಕಾರ ಹೇರಲಾದ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಳೆ ಬೆಳೆದ ರೈತರ ಮಾರಲಾಗದೆ ಸಂಕಷ್ಟಕೀಡಾಗಿದ್ದು, ಇದೀಗ ರೈತರ ಬೆನ್ನಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಜಿಲ್ಲೆಯ ಯಮಕನಮರಡಿ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ನಿಂತಿದ್ದಾರೆ. ರೈತರು ಬೆಳೆದ ತರಕಾರಿ, ಹಣ್ಣುಗಳನ್ನು ಖರೀದಿಸಿ ಸಾರ್ವಜನಿಕರಿಗೆ ಹಂಚಿದ್ದಾರೆ. ಯಮನಕಮರಡಿ ಕ್ಷೇತ್ರದ ಹೆಬ್ಬಾಳ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ರೈತ ಹಣುಮಂತ ಎಂಬವರು ಸುಮಾರು ಮೂರು ಎಕರೆ …
Read More »ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ
ಚಿಕ್ಕೋಡಿ -ಚಿಂಚಲಿ ಪಟ್ಟಣದಲ್ಲಿ ಕಟ್ಟಡವೊಂದರಲ್ಲಿ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಹಿನ್ನೆಲೆಯಲ್ಲಿ ಸುತ್ತಲಿನ ಜನರು ತಮ್ಮ ಮನೆಗಳನ್ನು ಖಾಲಿ ಮಾಡಿ ಹೋಗುತ್ತಿದ್ದಾರೆ. ಕೊರೊನಾ ಭಯಕ್ಕೆ ರಾತ್ರೋರಾತ್ರಿ ಮಾನೆಗಳನ್ನ ಖಾಲಿ ಮಾಡುತ್ತಿರುವ ಜನ ಹತ್ತಿರದ ತೋಟಗಳಲ್ಲಿ ಟೆಂಟ್ ಹಾಕಿಕೊಂಡು ಇರಲು ನಿರ್ಧರಿಸಿದ್ದಾರೆ. ಚಿಂಚಲಿ ಪಟ್ಟಣದ ಭಕ್ತಿ ನಿವಾಸದಲ್ಲಿ 44 ಜನರನ್ನು ಕ್ವಾರಂಟೈನ್ ಮಾಡಲಾಗಿದೆ. ಮಾಯಕ್ಕಾ ದೇವಸ್ಥಾನದ ಭಕ್ತಿನಿವಾಸದ ಸುತ್ತಲೂ ಇರುವ 40 ಕ್ಕೂ ಹೆಚ್ಚು ಕುಟುಂಬಗಳು ಮನೆ ಖಾಲಿ ಮಾಡಿವೆ. ಕುಡಚಿ …
Read More »