Breaking News

ಬೆಂಗಳೂರು

ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ

ಬೆಂಗಳೂರು : 4 ಸಾವಿರ ಸಿವಿಲ್ ಸರ್ವೆಂಟ್‌ಗಳು ಬಿಜೆಪಿಯ ಕಾರ್ಯಕರ್ತರು ಇದ್ದಾರೆ. ವಿಶ್ವವಿದ್ಯಾಯಲಗಳಲ್ಲಿ ಆರ್‌ಎಸ್‌ಎಸ್‌ನವರನ್ನು ಸಿಂಡಿಕೇಟ್‌ ಸದಸ್ಯದರನ್ನಾಗಿ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಇದೀಗ ರಾಮಮಂದಿರ ಬಗ್ಗೆ ಗಂಭೀರ ಆರೋಪಿಸಿದ್ದಾರೆ. ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾರೀ ಅವ್ಯವಹಾರ ಆಗಿದೆ. ರಾಮನ ಹೆಸರಲ್ಲಿ ಹಣ ದುರುಪಯೋಗ ಆಗಿದೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.

Read More »

ಸಿಎಸ್​ಕೆ ‘ಕನಸು ನನಸು’ ಮಾಡಿದ MSD; ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಕೆಕೆಆರ್

14ನೇ ಐಪಿಎಲ್ ಆವೃತ್ತಿಯಲ್ಲಿ ಧೋನಿ ಬಾಯ್ಸ್ ಗೆದ್ದು ಬೀಗಿದ್ದಾರೆ. ಸಿಎಸ್‌ಕೆ ಅಬ್ಬರದ ಆಟಕ್ಕೆ ಶಾರೂಖ್​​​ ಹುಡುಗರು ಮುಗ್ಗರಿಸಿದ್ದಾರೆ. ಅದ್ಬುತ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಇತಿಹಾಸದಲ್ಲಿ 4ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ನಾಲ್ಕನೇ ಬಾರಿ ಐಪಿಎಲ್ ಟ್ರೋಫಿಗೆ ಮುತ್ತಿಟ್ಟ ಚೆನ್ನೈ ಮೂರನೇ ಬಾರಿ ಟ್ರೋಪಿ ಗೆಲ್ಲುವ ಕೆಕೆಆರ್ ಕನಸು ಭಗ್ನ ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಸಿಎಸ್‌ಕೆ ತಂಡ ಐಪಿಎಲ್ 2021ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. …

Read More »

ಹಾನಗಲ್‌ನಲ್ಲಿ ಕಾಂಗ್ರೆಸ್‌ಗೆ ಜಯ: ಸಲೀಂ ಆಹಮದ್‌ ವಿಶ್ವಾಸ

ಬೆಂಗಳೂರು: ಹಾನಗಲ್‌ ನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾನಗಲ್‌ ಉಪಚುನಾವಣೆ ಉಸ್ತುವಾರಿ ವಹಿಸಿಕೊಂಡು ಕಳೆದ ಒಂದು ವಾರದಿಂದ ಸ್ಥಳೀಯವಾಗಿ ಸಭೆ, ಸಂಘಟನೆ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಪರ ಅಲೆ ಇದೆ ಎಂದು ತಿಳಿಸಿದರು. ಬಿಜೆಪಿ ಸರ್ಕಾರದಿಂದ ಜನ ಭ್ರಮನಿರಸನರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ …

Read More »

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್

ಬೆಂಗಳೂರು: ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಮತ್ತು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ನಡುವಿನ ಡಿ.ಕೆ ಶಿವಕುಮಾರ್ ಬಗೆಗಿನ ಸಂಭಾಷಣೆ ಕೋಲಾಹಲವನ್ನೇ ಎಬ್ಬಿಸಿದೆ. ಈಗ ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ಎಂಬ ಸಂಭಾಷಣೆ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಡ್ಯಾಮೇಜ್ ಮಾಡಿದ್ದಾರೆ. ಸದ್ಯ ಈ ಡ್ಯಾಮೇಜ್ ಕಂಟ್ರೋಲ್​ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹರಸಾಹಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಮುಂದೆ ಸಾಲು ಸಾಲು ಚುನಾವಣೆಗಳು ಎದುರಾಗಲಿವೆ. ಇದೇ ಹೊತ್ತಲ್ಲೇ ಕೆಪಿಸಿಸಿ ಸಾರಥಿ ಬಗ್ಗೆಯೇ …

Read More »

‘ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿ ಹಾಸಿಗೆ ಹಿಡಿದಿದೆ’ ದಿನೇಶ್​ ಗುಂಡೂರಾವ್​ ಆಕ್ರೋಶ

ಬೆಂಗಳೂರು: ಆರೋಗ್ಯ ಸಿಬ್ಬಂದಿಯ ವೇದನೆ ಕೇಳದೆ ರಾಜ್ಯದ ಆರೋಗ್ಯ ಇಲಾಖೆ ಅನಾರೋಗ್ಯ ಪೀಡಿತವಾಗಿ ಹಾಸಿಗೆ ಹಿಡಿದಿದೆ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ವೇತನ ಸಮಸ್ಯೆ ಕುರಿತಂತೆ ಟ್ವೀಟ್​ ಮಾಡಿ ಅಸಮಾಧಾನ ವ್ಯಕ್ತಪಡಿಸಿದ ಅವರು ‘ಇಲಾಖೆಯ ಸಿಬ್ಬಂದಿಗೆ ಕಳೆದ 3 ತಿಂಗಳಿನಿಂದ ವೇತನ ಬಿಡುಗಡೆಯಾಗಿಲ್ಲ. ಆರೋಗ್ಯ ಸಿಬ್ಬಂದಿ ಕೊರೋನಾ ಫ್ರಂಟ್‌ಲೈನ್ ವರ್ಕರ್‌ಗಳಾಗಿ ಕಾರ್ಯನಿರ್ವಹಿಸಿದ್ದಾರೆ.ಆದರೂ ಕೊರೊನಾ ಭತ್ಯೆ ಸಿಕ್ಕಿಲ್ಲ. ತಮ್ಮ ಇಲಾಖೆಯ ಸಿಬ್ಬಂದಿಗಳ …

Read More »

ಡಿಕೆಎಸ್ ಕಮೀಷನ್ ಗಿರಾಕಿ’ ಹೇಳಿಕೆ: ‘ಇದು ನಿಶ್ಚಿತವಾಗಿಯೂ ಷಡ್ಯಂತ್ರ’ ಎಂದ ಸೋಮಶೇಖರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸ್ವಪಕ್ಷಿಯರ ಭ್ರಷ್ಟಾಚಾರ ಆರೋಪಕ್ಕೆ ಸಚಿವ ಎಸ್​​ಟಿ ಸೋಮಶೇಖರ್​ ಪ್ರತಿಕ್ರಿಯಿಸಿ.. ಇದು ನಿಶ್ಚಿತವಾಗಿಯೂ ಒಂದು ಷಡ್ಯಂತ್ರ. ಮೊದಲಿನಿಂದಲೂ ನಾನು ಈ ಬಗ್ಗೆ ಹೇಳುತ್ತಿದ್ದೇನೆ ಎಂದರು. ಕಾಂಗ್ರೆಸ್​​ನಲ್ಲಿ ಮೊದಲಿನಿಂದಲೂ ಡಿ.ಕೆ.ಶಿವಕುಮಾರ್ ವರ್ಸಸ್ ಸಿದ್ದರಾಮಯ್ಯ ನಡೆಯುತ್ತಿದೆ. ಅವರ ವಿರುದ್ಧ ಇವರು, ಇವರ ವಿರುದ್ಧ ಅವರು ಷಡ್ಯಂತರ ನಡೆಸುತ್ತಿದ್ದಾರೆ. ಇದು ಈಗ ಮುಂದುವರಿದಿದೆ. ನನಗೆ ಪರ್ಸೆಂಟೆಜ್ ವ್ಯವಹಾರದ ಬಗ್ಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿ ಬರೀ ಶಾಸಕನಾಗಿದ್ದೆ ಅಷ್ಟೇ …

Read More »

ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ: ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ- ಇಬ್ಬರು ಕಾಂಗ್ರೆಸ್ ನಾಯಕರ ಸ್ಫೊಟಕ ಮಾತು ವೈರಲ್.

ಬೆಂಗಳೂರು, ಅಧ್ಯಕ್ಷ ಡಿ ಕೆ ಶಿವಕುಮಾರ್  ಅವರ ಬಗ್ಗೆ ಇಬ್ಬರು ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಡಿಕೆ ಶಿವಕುಮಾರ್ ರದ್ದು ದೊಡ್ಡ ಸ್ಕ್ಯಾಮ್, ಕಲೆಕ್ಷನ್,ಗಿರಾಕಿ, ಡಿಕೆಶಿ ಹುಡುಗರ ಬಳಿ 50ರಿಂದ 100 ಕೋಟಿ ರೂಪಾಯಿ ಇದೆ. ಕೆದಕುತ್ತಾ ಹೋದರೆ ಇವರದ್ದೂ ಹೊರಬರುತ್ತದೆ ಎಂದು ಕಾಂಗ್ರೆಸ್ ನ ಇಬ್ಬರು ಪ್ರಮುಖ ನಾಯಕರು ವೇದಿಕೆಯಲ್ಲಿ ಮಾತನಾಡಿಕೊಂಡಿರುವ ಆಡಿಯೋ ವೈರಲ್ ಆಗಿದೆ. ನಿನ್ನೆ ಬೆಂಗಳೂರಿನಲ್ಲಿ ಮಾಜಿ ಸಂಸದ ವಿಎಸ್ ಉಗ್ರಪ್ಪ …

Read More »

ಮೂರು ಕೈಗಾರಿಕಾ ಟೌನ್​ಶಿಪ್​ಗಳಿಂದ ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ.

ಬೆಂಗಳೂರು: ಬೆಂಗಳೂರು-ಮುಂಬೈ, ಬೆಂಗಳೂರು-ಚೆನ್ನೈ ಕಾರಿಡಾರ್‌ಗಳಲ್ಲಿ ಕೈಗಾರಿಕಾ ಟೌನ್‌ಶಿಪ್ ಸ್ಥಾಪನೆಗೆ ಕರ್ನಾಟಕ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಈ ಕೈಗಾರಿಕಾ ಕಾರಿಡಾರ್‌ಗಳು ಈಮುನ್ನ ಬಜೆಟ್‌ನಲ್ಲಿ ಘೋಷಿಸಲ್ಪಟ್ಟಿದ್ದವು. ತಲಾ ಕನಿಷ್ಠ 500 ಎಕರೆ ಜಾಗದಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಕೈಗಾರಿಕಾ ಟೌನ್ ಶಿಪ್ ನಿರ್ಮಾಣಗೊಳ್ಳಲಿವೆ. ಅಂದಾಜು 10 ಸಾವಿರ ಕೋಟಿ ಖಾಸಗಿ ಬಂಡವಾಳ ಆಕರ್ಷಿಸಲು ಉದ್ದೇಶಿಸಲಾಗಿದೆ. ಟೌನ್​ಶಿಪ್​ಗಳ ನಿರ್ಮಾಣದಿಂದ ಐದು ಲಕ್ಷ ಉದ್ಯೋಗಾಕಾಶ ಸೃಷ್ಟಿಯಾಗುವ ನಿರೀಕ್ಷೆಯಿದೆ. ಕೈಗಾರಿಕಾ ಪ್ರದೇಶದಲ್ಲಿ ರೆಸಿಡೆನ್ಷಿಯಲ್ ಟೌನ್​ಶಿಪ್ ನಿರ್ಮಾಣ; ಸಚಿವ …

Read More »

ಮ್ಯಾನೇಜ್ಮೆಂಟ್ ಕೋಟಾ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ : ಸಚಿವ ಕೋಟ ಶ್ರೀನಿವಾಸ ಪೂಜಾರಿ

ಬೆಂಗಳೂರು: ಮ್ಯಾನೇಜ್ಮೆಂಟ್ ಕೋಟಾ ಅಡಿ 13 ಸಾವಿರ ಜನ ವಿದ್ಯಾರ್ಥಿಗಳು ಇದ್ದಾರೆ. ಮಾನವೀಯ ಆಧಾರದ ಮೇಲೆ ಅವರಿಗೂ ವಿದ್ಯಾರ್ಥಿ ವೇತನದ ಹಣ ಬಿಡುಗಡೆ ಮಾಡಲು ಸೂಚನೆ ನೀಡಿದ್ದೇನೆ. ಇದಕ್ಕಾಗಿ 8-9 ಕೋಟಿ ಹಣ ವೆಚ್ಚವಾಗಲಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ವಿದ್ಯಾರ್ಥಿ ವೇತನ ಬಂದಿಲ್ಲ ಅಂತ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಹಿನ್ನೆಲೆ ಇಂದು (ಅ.12) ಸಮಾಜ ಕಲ್ಯಾಣ ಇಲಾಖೆ, ಹಾಗೂ ಹಿಂದುಳಿದ ವರ್ಗಗಳ …

Read More »

ರವಿಚಂದ್ರನ್ ನನ್ನ ಪಾಲಿಗೆ ಲಕ್ಕಿ..; ಮಿಸ್ ನಂದಿನಿ ಮುಹೂರ್ತದಲ್ಲಿ ಪ್ರಿಯಾಂಕಾ

ಬೆಂಗಳೂರು: ‘ರವಿಚಂದ್ರನ್ ಯಾವತ್ತಿದ್ದರೂ ನನಗೆ ಲಕ್ಕಿ. ನನ್ನ ಸಿನಿಮಾದ ಯಾವುದಾದರೂ ಕಾರ್ಯಕ್ರಮಕ್ಕೆ ಅವರನ್ನು ಕರೆಸಬೇಕೆಂಬ ಆಸೆ ತುಂಬ ದಿನಗಳಿಂದ ಇತ್ತು. ಇದೀಗ ಆ ಕನಸು ನನಸಾಗಿದೆ …’ ಹೀಗೆ ಖುಷಿಯಾಗಿ ಹೇಳಿಕೊಂಡರು ಪ್ರಿಯಾಂಕಾ ಉಪೇಂದ್ರ. ಅವರು ‘ಮಿಸ್ ನಂದಿನಿ’ ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಚಾರ ಇತ್ತೀಚೆಗಷ್ಟೇ ಅಧಿಕೃತವಾಗಿತ್ತು. ಇದೀಗ ಸದ್ದಿಲ್ಲದೆ ಮುಹೂರ್ತ ಮುಗಿಸಿ, ಶೂಟಿಂಗ್ ಸಹ ಶುರುಮಾಡಿದೆ ತಂಡ. ಈ ಮುಹೂರ್ತ ಕಾರ್ಯಕ್ರಮಕ್ಕೆ ರವಿಚಂದ್ರನ್ ಆಗಮಿಸಿ ಕ್ಲಾಪ್ ಮಾಡಿ ಶುಭಾಶಯ …

Read More »