ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿರುವಂತ ಪಿ.ರವಿಕುಮಾರ್ ( CS P Ravikumar ) ಅವರು, ಇದೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗುತ್ತಿದ್ದಾರೆ. ಇದೀಗ ಅವರ ಸ್ಥಾನಕ್ಕೆ ಹೊಸ ಸಿಎಸ್ ಆಯ್ಕೆ ಮಾಡುವ ಅಧಿಕಾರವನ್ನು ಸಚಿವ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿಯವರಿಗೇ ನೀಡಿದೆ. ಹೀಗಾಗಿ ಈಗ ಸಿಎಸ್ ಹುದ್ದೆಗಾಗಿ ಫೈಟ್ ನಡೆಯುತ್ತಿದ್ದು, 9 ಮಂದಿ ರೇಸ್ ನಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆ ನಡೆದಂತ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ, …
Read More »ಈ ಸಂಖ್ಯೆಗೆ ಕರೆ ಮಾಡಿದ್ರೆ 72 ಗಂಟೆಯೊಳಗೆ ಮನೆ ಬಾಗಿಲಿಗೆ ಬರಲಿದೆ ಪಿಂಚಣಿ!
ಬೆಂಗಳೂರು : ಪಿಂಚಣಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಪಿಂಚಣಿ ಮಂಜೂರಾತಿಗೆ ‘ಹಲೋ ಕಂದಾಯ ಸಚಿವರೇ’ ಎಂಬ ಸಹಾಯವಾಣಿ ಆರಂಭಿಸಿದ್ದು, ಅರ್ಜಿ ಸಲ್ಲಿಸಿದ 72 ಗಂಟೆ ಒಳಗಾಗಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ತಲುಪಿಸುವ ಯೋಜನೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಇಂದು ಕಂದಾಯ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆ ಹಲೋ ಕಂದಾಯ ಸಚಿವರೇ ಹೆಸರಿನ ಸಹಾಯವಾಣಿ ಸೇವೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಈ ಸಂಬಂಧ ಮಧ್ಯಾಹ್ನ ವಿಧಾನಸೌಧದ …
Read More »ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 2023ರ ವಿಧಾನಸಭೆ ಚುನಾವಣೆಯ ಮಿಷನ್ 123 ಯುದ್ಧ ಆರಂಭ:H.D.K.
ಬೆಂಗಳೂರು: ಜನತಾ ಜಲಧಾರೆ ಕಾರ್ಯಕ್ರಮದ ಮೂಲಕ 2023ರ ವಿಧಾನಸಭೆ ಚುನಾವಣೆಯ ಮಿಷನ್ 123 ಯುದ್ಧ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ಧಾರೆ. ನೆಲಮಂಗಲ ಸಮೀಪದಲ್ಲಿ ನಾಳೆ ಹಮ್ಮಿಕೊಂಡಿರುವ ಜಲಧಾರೆ ಕಾರ್ಯಕ್ರಮದ ಪೂರ್ವ ಸಿದ್ದತೆ ವೀಕ್ಷಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು’ಜಲಧಾರೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿವಿಧ ವಿಚಾರಗಳ ಚರ್ಚೆ ಜೊತೆಗೆ ಹಲವು ನೀರಾವರಿ ವಿಚಾರಗಳಿಗೆ ಸಂಬಂಧಿಸಿದ ಕೈಪಿಡಿಯನ್ನು ಬಿಡುಗಡೆ ಮಾಡುತ್ತೇವೆ.ನಾವು ಸ್ವತಂತ್ರವಾಗಿ ಅಧಿಕಾರಕ್ಕೆ ತಮ್ಮ ಪಕ್ಷ ಬಂದರೆ ಕಳೆದ …
Read More »ಗಾಳಿಗೆ ನೆಲಕ್ಕುರುಳಿದ ಕೆಂಗೇರಿ ಬಳಿಯ ಜನಪ್ರಿಯ ದೊಡ್ಡಾಲದ ಮರ
ಬೆಂಗಳೂರು, ಮೇ 12: ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಮತ್ತು ಗಾಳಿ ಬೀಸುತ್ತಿದ್ದು, ನಗರದ ಜನಪ್ರಿಯ ಸಸ್ಯಶಾಸ್ತ್ರೀಯ ಅದ್ಭುತ – ಕೆಂಗೇರಿ ಬಳಿಯ ಮೈಸೂರು ರಸ್ತೆಯ ಕೇತೋಹಳ್ಳಿಯಲ್ಲಿರುವ ದೊಡ್ಡ ಆಲದ ಮರವು ನೆಲಸಮವಾಗಿದೆ. ಮೂರು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಮರದ ಒಂದು ಭಾಗ ಭಾನುವಾರ ಸಂಜೆ ಜೋರಾದ ಗಾಳಿಗೆ ಬುಡಮೇಲಾಗಿದ್ದು, ಬುಧವಾರದಂದು ಮತ್ತೊಂದು ಪ್ರಮುಖ ಭಾಗ ವಾಲಿಕೊಂಡಿರುವುದು ಕಂಡು ಬಂದಿದ್ದು, ಎಚ್ಚರಿಕೆ ಗಂಟೆ ಬಾರಿಸಿದೆ. ಇದು ಟೆಕ್ …
Read More »ರಮ್ಯಾ ಜತೆ ರಕ್ಷಿತ್ ಶೆಟ್ಟಿ ಸಿನಿಮಾ ಮಾಡೋದು ಪಕ್ಕಾ.. ಹೇಗಿತ್ತು ಸಿಂಪಲ್ ಸ್ಟಾರ್ ರಿಯಾಕ್ಷನ್..?
ಸ್ಯಾಂಡಲ್ವುಡ್ ಪದ್ಮಾವತಿ ರಮ್ಯಾ ಕಂಬ್ಯಾಕ್ಗಾಗಿ ಅದೇಷ್ಟೋ ಹೃದಯಗಳು ಕಾದು ಕುಂತಿವೆ. ಪೊಲಿಟಿಕಲ್ ಸಹವಾಸ ಸಾಕು, ಪ್ಲೀಸ್ ಸಿನಿಮಾ ಮಾಡಿ ಅಂತ ಅವರ ಫ್ಯಾನ್ಸ್ ರಿಕ್ವೆಸ್ಟ್ ಮೇಲೆ ರಿಕ್ವೆಸ್ಟ್ ಮಾಡ್ತಾ ಕನಸು ಕಾಣ್ತಾ ಇದ್ದಾರೆ. ಈಗ, ರಮ್ಯಾ ಫ್ಯಾನ್ಸ್ಗೆ ನಿಮ್ಮ ನ್ಯೂಸ್ಫಸ್ಟ್ ಎಕ್ಸ್ಕ್ಲೂಸಿವ್ ಸಮಾಚಾರವೊಂದು ತಗೊಂಡು ಬಂದಿದೆ. ಸ್ಯಾಂಡವುಡ್ ಪದ್ಮಾವತಿ, ಮೋಹಕತಾರೆ ರಮ್ಯಾ ತುಂಬಾ ಜನಕ್ಕೆ ಡ್ರೀಮ್ ಗರ್ಲ್. ಅವರೊಂದು ಕನಸು. ರಾಜಕೀಯಕ್ಕೆ ಹೋದ್ಮೇಲೆ ಅವರನ್ನ ತುಂಬಾ ಮಿಸ್ ಮಾಡಿಕೊಂಡಿರೋ ಅಭಿಮಾನಿಗಳು, …
Read More »ಸುಗ್ರೀವಾಜ್ಞೆ ಮೂಲಕ `ಮತಾಂತರ ನಿಷೇಧ ಕಾಯ್ದೆ’ ಜಾರಿ : ಸಿಎಂ
ಬೆಂಗಳೂರು : ರಾಜ್ಯದಲ್ಲಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai)) ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡುತ್ತೇವೆ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡುತ್ತೇವೆ. ವಿಧಾನಸಭೆಯಲ್ಲಿ ಮತಾಂತರ ನಿಷೇಧ ಕಾಯ್ದೆ ಅಂಗೀಕಾರ ಆಗಿತ್ತು. ವಿಧಾನಪರಿಷತ್ ನಲ್ಲಿ ವಿದೇಯಕ ಅಂಗೀಕಾರ …
Read More »ಡಿಕೆಶಿಗೆ ‘ಡಿಚ್ಚಿಕೊಟ್ಟ’ ಮಾಜಿ ಸಂಸದೆ ರಮ್ಯಾ
ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥ ನಾರಾಯಣ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಭೇಟಿ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ, ಈ ನಡುವೆ ಹಗರಣಗಳ ಬಗ್ಗೆ ಯಾರೂ ಧ್ವನಿ ಎತ್ತಬಾರದು ಎಂಬ ಕಾರಣಕ್ಕೆ ಅಶ್ವತ್ಥ ನಾರಾಯಣ ಅವರು ಎಂಬಿ ಪಾಟೀಲ್ ಅವರನ್ನು ಭೇಟಿಯಾಗಿದ್ದಾರೆ ಅಂಥ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದರು. ಈ ನಡುವೆ ಈ ಬಗ್ಗೆ ನಟಿ, ಮಾಜಿ ಸಂಸದೆ ರಮ್ಯಾ ಅವರು ಟ್ವಿಟ್‌ನಲ್ಲಿ …
Read More »850 ರೂಪಾಯಿ ಬೆಲೆಯ ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ.
ಒಂದು ನೀರಿನ ಬಾಟಲ್ ಬೆಲೆ ಎಷ್ಟಿರಬಹುದು ಹೇಳಿ ಅಬ್ಬಬ್ಬಾ ಅಂದ್ರೆ 50-100 ರೂಪಾಯಿ. ಯಾರಾದ್ರೂ 850 ರೂಪಾಯಿ ಒಂದು ನೀರಿನ ಬಾಟಲ್ ಬೆಲೆ ಅಂದ್ರೆ ಸಾಕು. ಅದು ನೀರಲ್ಲ ಅಮೃತ ಅಂತ ಹೇಳೋರೆ ಹೆಚ್ಚು. ಅಷ್ಟು ಕಾಸ್ಟ್ಲಿ ನೀರನ್ನ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಕುಡಿಯೋದಂತೆ. ಹೀಗಂತ ಹೇಳಿದ್ದು ಗೋವಾ ಕೃಷಿ ಸಚಿವ ರವಿ ನಾಯ್ಕ್. ಇತ್ತೀಚೆಗೆ ಅಮಿತ್ ಶಾ ಗೋವಾಗೆ ಭೇಟಿ ಕೊಟ್ಟ ವೇಳೆ ಅವರಿಗೆ ಇದೇ …
Read More »ಫ್ರೆಶರ್ಸ್‌ಗಳಿಗೆ ಭರ್ಜರಿ ಆಫರ್, 30 ಸಾವಿರಕ್ಕೂ ಅಧಿಕ ನೇಮಕಾತಿ
ಬೆಂಗಳೂರು, ಮೇ 11: ಕೊರೊನಾ ಸಾಂಕ್ರಾಮಿಕದಿಂದಾಗಿ ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದ ನೇಮಕಾತಿ ಪ್ರಕ್ರಿಯೆ ಇದೀಗ ಚುರುಕುಗೊಂಡಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಫ್ರೆಶರ್ಸ್ ಸೇರಿದಂತೆ ಉನ್ನತ ಹುದ್ದೆಗಳಿಗೂ ನೇಮಕಾತಿ ನಡೆಯಲಿದೆ. ಐಟಿ ದಿಗ್ಗಜ ಆಕ್ಸೆಂಚರ್ ಸಂಸ್ಥೆ ಕೂಡಾ ನೇಮಕಾತಿ ಹೆಚ್ಚಿಸಿದೆ. ದೇಶದೆಲ್ಲೆಡೆ ಹೊಸ ಪದವೀಧರರಿಗೆ ಈ ವರ್ಷ ಸುಮಾರು 30 ಸಾವಿರಕ್ಕೂ ಅಧಿಕ ನೇಮಕಾತಿಯನ್ನು ಘೋಷಿಸಿದೆ. ಆಗಸ್ಟ್ 31,2021ಕ್ಕೆ ವರದಿಯಾದಂತೆ ಐಟಿ ದಿಗ್ಗಜ ಸಂಸ್ಥೆಯಲ್ಲಿ ಸುಮಾರು 2,50,000 ಹೊಸ …
Read More »ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ 3ರಂದು ಚುನಾವಣೆ
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ಏಳು ಸದಸ್ಯರ ಅವಧಿ ಜೂನ್ 14ಕ್ಕೆ ಮುಕ್ತಾಯವಾಗಲಿದ್ದು, ಈ ಸ್ಥಾನಗಳ ಭರ್ತಿಗೆ ಜೂನ್ 3ರಂದು ಚುನಾವಣೆ ನಡೆಯಲಿದೆ. ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ. ಬಿಜೆಪಿಯ ಲಕ್ಷ್ಮಣ ಸವದಿ, ಲಹರ್ ಸಿಂಗ್ ಸಿರೋಯಾ, ಕಾಂಗ್ರೆಸ್‌ನ ಆರ್.ಬಿ. ತಿಮ್ಮಾಪೂರ, ಅಲ್ಲಂ ವೀರಭದ್ರಪ್ಪ, ವೀಣಾ ಅಚ್ಚಯ್ಯ, ಜೆಡಿಎಸ್‌ನ ಕೆ.ವಿ. ನಾರಾಯಣ ಸ್ವಾಮಿ ಮತ್ತು ಎಚ್.ಎಂ. ರಮೇಶ್ ಗೌಡ …
Read More »