Home / ಜಿಲ್ಲೆ / ಬೆಂಗಳೂರು / ಆಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

ಆಸಿಡ್ ದಾಳಿ ಪ್ರಕರಣ: ಮೂತ್ರ ವಿಸರ್ಜನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ನಾಗೇಶ್ ಮೇಲೆ ಪೊಲೀಸರಿಂದ ಗುಂಡಿನ ದಾಳಿ

Spread the love

ಬೆಂಗಳೂರಿನ ಕೆಂಗೇರಿ ಫ್ಲೈಓವರ್​ ಬಳಿ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಗೇಶ್​ನನ್ನು ಹಿಡಿಯಲು ಯತ್ನಿಸಿದ ಪಿಸಿ ಮಹದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.​ ಈ ವೇಳೆ ಆತನ ಮೇಲೆ ಗುಂಡು ಹಾರಿಸಲಾಗಿದೆ.

ಬೆಂಗಳೂರು: ತಮಿಳುನಾಡಲ್ಲಿ ತಲೆಮರೆಸಿಕೊಂಡಿದ್ದಆರೋಪಿಆಯಸಿಡ್ ನಾಗನನ್ನು ಪೊಲೀಸರು ಬಂಧಿಸಿ ಕರೆತರುತ್ತಿದ್ದ ವೇಳೆ ವಾಹನ ನಿಲ್ಲಿಸುವಂತೆ ಕೇಳಿದ್ದಾನೆ. ಮೂತ್ರ ವಿಸರ್ಜನೆಗೆ ವಾಹನ ನಿಲ್ಲಿಸುವಂತೆ ಕೇಳಿದ್ದ ನಾಗೇಶ್​, ನೈಸ್ ​ರಸ್ತೆ ಬಳಿ ವಾಹನ ನಿಲ್ಲಿಸದೆ ಬೆಂಗಳೂರಿನ ಕೆಂಗೇರಿ ಫ್ಲೈಓವರ್​ ಬಳಿ ಪೊಲೀಸರು ವಾಹನ ನಿಲ್ಲಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದ ನಾಗೇಶ್​ನನ್ನು ಹಿಡಿಯಲು ಯತ್ನಿಸಿದ ಪಿಸಿ ಮಹದೇವಯ್ಯ ಮೇಲೆ ಕಲ್ಲಿನಿಂದ ಹಲ್ಲೆಗೆ ಯತ್ನಿಸಿದ್ದಾನೆ.​ ಗಾಳಿಯಲ್ಲಿ ಗುಂಡುಹಾರಿಸಿ ತಪ್ಪಿಸಿಕೊಳ್ಳದಂತೆ ಪಿಐ ಎಚ್ಚರಿಕೆ ನೀಡಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆ ಇನ್ಸ್​ಪೆಕ್ಟರ್ ಪ್ರಶಾಂತ್ ಎಚ್ಚರಿಕೆ ನೀಡಿದ್ರು ತಪ್ಪಿಸಿಕೊಳ್ಳಲೆತ್ನಿಸಿದ್ದಾನೆ. ಆವಾಗ ನಾಗೇಶ್ ಬಲಗಾಲಿಗೆ ಇನ್ಸ್​ಪೆಕ್ಟರ್​ ಪ್ರಶಾಂತ್ ಗುಂಡು ಹಾರಿಸಿದ್ದಾರೆ.​ ಗಾಯಾಳು ನಾಗನಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಾಗೇಶ್​ಗೆ ಹೆಚ್ಚಿನ ಚಿಕಿತ್ಸೆಗಾಗಿ ಕೆಂಗೇರಿಯ BGS​ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಡಾ.ಸಂಜೀವ್ ಪಾಟೀಲ್ ಭೇಟಿ ನೀಡಿದ್ದಾರೆ.

ಯುವತಿ ಮೇಲೆ ನಡೆದಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್​ ಕೊನೆಗೂ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ. 16 ದಿನಗಳ ಬಳಿಕ ಪೊಲೀಸರಿಗೆ ಪತ್ತೆಯಾಗಿದ್ದೇಗೆ. ನಿರಂತರ ತಲಾಶ್​ನಲ್ಲಿದ್ದ ಪೊಲೀಸರಿಗೆ ಸಿಕ್ಕ ಬ್ರೇಕ್ ಥ್ರೂ ಏನು ಎನ್ನುವ ಮಾಹಿತಿ ಟಿವಿ 9 ತೆರದಿಡಲಿದೆ ಆಸಿಡ್ ನಾಗನ ಇನ್ಸೈಡ್ ಸ್ಟೋರಿ. ನಾಗ ಆಶ್ರಮದಲ್ಲಿರೋ ಮಾಹಿತಿ ಮೊದಲು ಸಿಕ್ಕಿದ್ದು ಯಾರಿಗೆ..? ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್​ಗೆ ಸಂದೇಶ ತಲುಪಿದೆ. ಆ ಸಂದೇಶದ ಜೊತೆಗೆ ಖಾವಿ ತೊಟ್ಟು ಧ್ಯಾನಕ್ಕೆ ಕುಳಿತಿದ್ದ ನಾಗೇಶ್​ನ ಅದೊಂದು ಫೋಟೊ ಕೂಡ ಇತ್ತು. ಮೊದಲಿಗೆ ಬಂದ ಫೋಟೊ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಆ ಬಳಿಕ ನಾಗನ ಬಂಧನಕ್ಕೆ ಪ್ಲ್ಯಾನ್ ಮಾಡಲಾಗಿದೆ. ಕೃತ್ಯ ಎಸಗಿ ಊರು ಬಿಟ್ಟ ನಾಗ ಆಶ್ರಮ ಸೇರಿದ್ದ. ಏಪ್ರಿಲ್ 28 ರಂದು ಯುವತಿ ಮೇಲೆ ಆಸಿಡ್ ದಾಳಿ ಮಾಡಿದ್ದ ನಾಗೇಶ, ನಂತರ ಸೈಲೆಂಟ್​ ಆಗಿ ಆಶ್ರಮಕ್ಕೆ ಸೇರಿದ್ದ. ಪ್ರೀ ಪ್ಲ್ಯಾನ್ ಕೃತ್ಯ ಬಳಿಕ ಆಶ್ರಮದಲ್ಲಿ ಆಶ್ರಯ ಪಡೆದಿದ್ದ. ಆಶ್ರಮದಲ್ಲಿ ಯಾವುದೇ ವೈಯಕ್ತಿಕ ಮಾಹಿತಿ ನೀಡದೇ ನಾಗೇಶ ಉಳಿದುಕೊಂಡಿದ್ದ.

ನಾಗೇಶನ ಹುಡುಕಾಟದಲ್ಲಿ ಪೊಲೀಸರ ಹಲವು ಆಯಾಮದ ತನಿಖೆ ಮಾಡಿದ್ದು, ಟೆಕ್ನಿಕಲ್ ಆಗಿ ನಿಪುಣನಾಗಿದ್ದ ನಾಗೇಶನಿಂದ ಯಾವ ಕ್ಲ್ಯೂ ಸಿಕ್ಕಿರಲಿಲ್ಲ. ಕುಟುಂಬಸ್ಥರು, ಸಂಬಂಧಿಕರು, ಸ್ನೇಹತರಿಗೆ ಗ್ರಿಲ್ ನಡೆಸಿದ್ದ ಪೊಲೀಸರು, ಜೊತೆಗೆ ವಿಶೇಷ ತಂಡಗಳಿಂದ ಹೊರ ರಾಜ್ಯಗಳಾದ ಆಂಧ್ರ, ತೆಲಂಗಾಣ, ಕೇರಳು, ತಮಿಳುನಾಡು ಜೊತೆಗೆ ದೆಹಲಿಯಲ್ಲೂ ಪೊಲೀಸರು ತಡಕಾಡಿದ್ದಾರೆ. ನಾಗೇಶ ಬಗೆಗಿನ ಯಾವುದೇ ದಾಖಲಾತಿ ಹಾಗೂ ಮಾಹಿತಿಗಾಗಿ ಹುಡುಕಾಟ ಮಾಡಲಾಗಿದೆ. ಧಾರ್ಮಿಕ ಸ್ಥಳಗಳಲ್ಲೂ ಹುಡುಕಾಟ ನಡೆದಿದ್ದು, ಆತ ಉಳಿದುಕೊಂಡಿದ್ದ ಆಶ್ರಮಕ್ಕೂ ಪೊಲೀಸರು ತೆರಳಿದ್ದು, ಆಶ್ರಮದ ದಾಖಲೆ ಪರಿಶೀಲನೆ ವೇಳೆ ನಾಗೇಶ್ ಹೆಸರು ಪತ್ತೆಯಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ