ಬೆಂಗಳೂರು: ಲಾಕ್ಡೌನ್ ಆದೇಶ ಉಲ್ಲಂಘಿಸುವ ಸಾರ್ವಜನಿಕರ ಮೇಲೆ ಲಾಠಿ ಚಾರ್ಜ್ ಮಾಡದಂತೆ ಕಮಿಷನರ್ ಭಾಸ್ಕರ್ ರಾವ್, ನಗರ ಪೊಲೀಸರಿಗೆ ಖಡಕ್ ಆದೇಶ ನೀಡಿದ್ದಾರೆ. ಪೊಲೀಸರು ಸಾರ್ವಜನಿಕರೊಂದಿಗೆ ಸಂಯಮದಿಂದ ವರ್ತಿಸಬೇಕು. ವೃದ್ದರು, ಮಹಿಳೆಯರಿಗೆ ಗೌರವ ನೀಡಿ. ಕಡ್ಡಾಯವಾಗಿ ಸಮವಸ್ತ್ರ ಧರಿಸಿಬೇಕು. ಅವಶ್ಯಕತೆ ಇದ್ದರೆ ಕೇವಲ ಕೆಎಸ್ಆರ್ಪಿ ಮತ್ತು ಸಿಎಆರ್ ಪೊಲೀಸರು ಮಾತ್ರ ಬಳಸಬಹುದು. ಆದ್ರೆ ಸಿವಿಲ್ ಪೊಲೀಸರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಲಾಠಿ ಬಳಸಬೇಡಿ. ಮೈಕ್ಗಳನ್ನ ಬಳಸಿ ಅನೌನ್ಸ್ಮೆಂಟ್ ಮಾಡುವ ಮೂಲಕ …
Read More »ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ.: ಸಿದ್ಧರಾಮಯ್
ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ವಿಳಂಬವಾಗಿಯಾದರೂ, ದೇಶದ ಬಡವರು, ರೈತರು ಮತ್ತು ಕೂಲಿಕಾರ್ಮಿಕರಿಗೆ ನೆರವಾಗಲು ಕೇಂದ್ರ ಸರ್ಕಾರ ಪ್ರಕಟಿಸಿರುವ ಯೋಜನೆಗಳನ್ನು ಸ್ವಾಗತಿಸುತ್ತೇನೆ. ಈ ಪ್ಯಾಕೇಜ್ ‘Too little, Too Late’ ಎನ್ನುವ ಹಾಗಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಮಾದ್ಯಮ ಪ್ರಕಟಣೆ ಬಿಡುಗಡೆಗೊಳಿಸಿ ಹೇಳಿದ್ದಾರೆ.: ದೇಶದಲ್ಲಿ ಮೊದಲ ಕೊರೊನಾ ವೈರಸ್ ಪ್ರಕರಣ ಪತ್ತೆಯಾದುದ್ದು ಜನವರಿ ಕೊನೆ ವಾರದಲ್ಲಿ. ಕೊರೊನಾದಿಂದ ಗಂಭೀರ ಸ್ಥಿತಿ ನಿರ್ಮಾಣವಾಗಲಿದೆ, ಸರಕಾರ ನಿರ್ಲಕ್ಷ್ಯ ಮಾಡುತ್ತಿದೆ …
Read More »ಜನರೊಂದಿಗೆ ಪೊಲೀಸರುಸೌಜನ್ಯದಿಂದ ವರ್ತಿಸಬೇಕು: ವಾಟಾಳ್ ನಾಗರಾಜ
ಬೆಂಗಳೂರು: ಜನರೊಂದಿಗೆ ಪೊಲೀಸರು ಸೌಜನ್ಯದಿಂದ ವರ್ತಿಸಬೇಕು. ಲಾಠಿ ಚಾರ್ಜ್ ಮಾಡಬಾರದು ಅಂತಾ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮನವಿ ಮಾಡಿದ್ದಾರೆ. ಜನರ ಮೇಲೆ ಲಾಠಿ ಚಾರ್ಜ್ ವಿಚಾರವಾಗಿ ಮಾತನಾಡಿದ ಅವರು, ಜನರಿಗೆ ಆಹಾರ ಧಾನ್ಯ, ದಿನಸಿ ಸುಲಭವಾಗಿ ಸಿಗುವಂತೆ ವ್ಯವಸ್ಥೆಯನ್ನು ಮಾಡಬೇಕು. ಬೀದಿ ಬದಿ ವ್ಯಾಪರ ಮಾಡುವವರಿಗೆ, ಅಟೋ ರಿಕ್ಷಾ ಎಲ್ಲ ಕಾರ್ಮಿಕ ವರ್ಗಕ್ಕೆ ಸರ್ಕಾರ ಹಣ ಸಂದಾಯ ಮಾಡಬೇಕು. ಗಾರ್ಮೆಂಟ್ಸ್ ಕೆಲಸಗಾರರಿಗೆ ಕನಿಷ್ಟ ಎರಡು ತಿಂಗಳು ಹಣ ಸಂದಾಯ …
Read More »ಕೊರೋನಾದಿಂದ ರಾಜ್ಯದಲ್ಲಿ ಎರಡನೇ ಸಾವು?; ಶಂಕಿತೆಯ ವರದಿ ಬಂದ ನಂತರ ದೃಢ
ಆಂಧ್ರಪ್ರದೇಶ ಮೂಲದ 75 ವರ್ಷದ ಮಹಿಳೆ ಮಾರ್ಚ್ 23ರಂದು ಮೆಕ್ಕಾದಿಂದ ವಾಪಸ್ಸಾಗಿ ಗೌರಿ ಬಿದನೂರಿನಲ್ಲಿರುವ ಮಗನ ಮನೆಯಲ್ಲಿ ಕ್ವಾರಟೈನ್ ನಲ್ಲಿದ್ದರು. ಆದರೆ, ಮಾರ್ಚ್ 24 ರಂದು ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು ಬೆಂಗಳೂರು (ಮಾರ್ಚ್ 25); ರಾಜ್ಯದಲ್ಲಿ ಕೊರೋನಾ ಸೋಂಕಿನಿಂದಾಗಿ ಮತ್ತೋರ್ವ ಮಹಿಲೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.ಆದರೆ, ಆಕೆಯ ಸಾವಿನ ಕುರಿತ ಸಂಪೂರ್ಣ ವರದಿ ಕೈಸೇರುವ ತನಕ ಇದು ಕೊರೋನಾ ಸೋಂಕಿನಿಂದಲೇ ಉಂಟಾದ ಮರಣ ಎಂದು ದೃಢಪಡಿಸಲು ಸಾಧ್ಯವಿಲ್ಲ ಎಂದು ಆರೋಗ್ಯ …
Read More »ರಾಜ್ಯದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರೂ ಇಬ್ಬರು ಸಚಿವರು ಅಧಿಕಾರ ಹಂಚಿಕೆ ವಿಚಾರವಾಗಿ ಅಸಮಾಧಾನ
ಬೆಂಗಳೂರು: ಇಡೀ ದೇಶ ಕೊರೋನಾ ವೈರಸ್ ಭೀತಿ ಎದುರಿಸುತ್ತಿದ್ದು, ಏಪ್ರಿಲ್ 14ರವರೆಗೆ ಇಡೀ ದೇಶವನ್ನು ಲಾಕ್ಡೌನ್ ಮಾಡಲಾಗಿದೆ. ಇತ್ತ ಕೊರೋನಾ ಪರಿಸ್ಥಿತಿ ನಿಯಂತ್ರಣ ವಿಚಾರವಾಗಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯ ಹೆಚ್ಚುವರಿ ಜವಾಬ್ದಾರಿ ನೀಡಿರುವುದಿರಿಂದ ಆರೋಗ್ಯ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನಗೊಂಡಿದ್ದಾರೆ. ಇದೇ ವಿಚಾರವಾಗಿ ಶ್ರೀರಾಮುಲು ಸಿಎಂ ಮೇಲೆ ಗರಂ ಕೂಡ ಆಗಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರಿಗೆ ಕೊರೋನಾ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಲ್ಲಿ …
Read More »ಮನೆಯಲ್ಲೇ ಸರಳವಾಗಿ ಹಬ್ಬ ಆಚರಿಸಿ; ಯುಗಾದಿ ಶುಭಾಶಯ ಕೋರಿದ ಸಿಎಂ ಬಿಎಸ್ವೈ
ಬೆಂಗಳೂರು: ಎಲ್ಲೆಡೆ ಯುಗಾದಿ ಸಂಭ್ರಮ. ಆದರೆ, ಈ ಬಾರಿ ಯುಗಾದಿ ಹಬ್ಬಕ್ಕೆ ಕೊರೋನಾ ವೈರಸ್ ಕರಿನೆರಳು ಬಿದ್ದಿದೆ. ಭೀಕರ ವೈರಸ್ನ ಭೀತಿ ಹೆಚ್ಚುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಕೇಂದ್ರ ಸರ್ಕಾರ 21 ದಿನ ಲಾಕ್ಡೌನ್ ಆದೇಶ ಹೊರಡಿಸಿದೆ. ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯದ ಜನತೆಗೆ ಯುಗಾಧಿ ಶುಭಾಶಯ ತಿಳಿಸಿದ್ದಾರೆ. ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯ. ಹೊಸ ಸಂವತ್ಸರ ಸರ್ವರಿಗೆ ಶುಭವನ್ನು ತರಲಿ. ಕೊರೋನಾ ಸೋಂಕು …
Read More »ನೆಲಮಂಗಲದಲ್ಲಿ ಕರ್ಫ್ಯೂ ಉಲ್ಲಂಘಿಸಿದವ ಪೊಲೀಸ್ ವಶ……….
ಬೆಂಗಳೂರು/ನೆಲಮಂಗಲ: ಮನೆಯಿಂದ ಹೊರಗೆಬರಬೇಡಿ ಅಂದರೂ ಜನರು ಕೇಳುತ್ತಿಲ್ಲ. ನೆಲಮಂಗಲದಲ್ಲಿಯೂ ಇಂತದ್ದೇ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ ಹೌದು. ನವಯುಗ ಟೋಲ್ ಬಳಿ ಜನರನ್ನು ಸೇರಿಸಿಕೊಂಡು ಹೀರೋ ಆಗಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ವ್ಯಕ್ತಿ ಟೋಲ್ ಬಳಿ ವಾಹನಗಳನ್ನ ಬಿಡದಿದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ಅಲ್ಲದೆ ಜನರನ್ನು ಗುಂಪು ಕಟ್ಟಿಕೊಂಡು ಪೊಲೀಸರೊಂದಿಗೆ ವಾಗ್ವದಕ್ಕಿಳಿದಿದ್ದ. ಈ ವೇಳೆ ಪೊಲೀಸರು ಎಷ್ಟೇ ಮನವೊಲಿಸಿದ್ರೂ ಕೇಳಲಿಲ್ಲ. …
Read More »ಬಡವರ ಬಂಧು ಸಾಲ ಮನ್ನಾ, ನರೇಗಾ ಕೂಲಿಕಾರ್ಮಿಕರಿಗೆ ಮುಂಗಡ ಹಣ- ಸಿಎಂ ಘೋಷಣೆ
ಬೆಂಗಳೂರು: ಕೊರೊನಾ ವೈರಸ್‍ನಿಂದಾಗಿ ಬಡವರಿಗೆ ಹೊರೆ ಆಗದೇ ಇರಲು ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಪ್ರಕಟಿಸಿದೆ. ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ಕಾಣಿಸಿಕೊಂಡಿದೆ. ಹೀಗಾಗಿ 2 ತಿಂಗಳ ಪಡಿತರ ಮುಂಚಿತವಾಗಿ ಕೊಡುತ್ತಿದ್ದೇವೆ. 13.20 ಕೋಟಿ ರೂ ಬಡವರ ಬಂಧು ಸಾಲ ಮನ್ನಾ ಮಾಡಲಾಗುವುದು. ಸಾಮಾಜಿಕ ಭದ್ರತಾ ಪಿಂಚಣಿ ಮುಂಗಡವಾಗಿ ಕೊಡುತ್ತೇವೆ. ನರೇಗಾ ಕೂಲಿಕಾರರಿಗೆ ಎರಡು ತಿಂಗಳ ಮುಂಗಡ ಹಣ ನೀಡಲಾಗುವುದು ಎಂದು ಭರವಸೆ …
Read More »ಇಂದು ರಾತ್ರಿ 8 ಗಂಟೆಗೆ ಮತ್ತೆ ದೇಶದ ಜನತೆಯನ್ನು ಉದ್ದೇಶಿಸಿ ಮೋದಿ ಭಾಷಣ..!
ಬೆಂಗಳೂರು,ಮಾ.24-ದೇಶದ ಜನತೆಯನ್ನು ಉದ್ದೇಶಿಸಿ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿದ್ದಾರೆ. ದೇಶದಲ್ಲಿ ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಎಲ್ಲರೂ ಇದಕ್ಕೆ ಸಹಕರಿಸುವಂತೆ ಪ್ರಧಾನಿಯವರು ಈಗಾಗಲೇ ಮನವಿ ಮಾಡಿದ್ದಾರೆ. ಕೊರೊನಾ ತೀವ್ರತೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರಿಗೆ ಇನ್ನಷ್ಟು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಇಂದು ರಾತ್ರಿ ಎರಡನೇ ಬಾರಿಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಕ್ರಿಯೆಗಿಂತ ನಿಷ್ಕ್ರಿಯೆಯೇ ಹೆಚ್ಚು ಮಹತ್ವದ್ದಾಗಿರುವ ಹಿನ್ನೆಲೆಯಲ್ಲಿ …
Read More »ಮನೆಯಲ್ಲೇ ಇದ್ದು ಹಬ್ಬ ಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ: ಶ್ರೀರಾಮುಲು ಮನವಿ
ಬೆಂಗಳೂರು, ಮಾ.24- ಮನೆಯಲ್ಲೇ ಇದ್ದು ಹಬ್ಬ ಮಾಡಿ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಮನವಿ ಮಾಡಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಂಬರದ ಆಚರಣೆಗಾಗಿ ಕಾನೂನು ಉಲ್ಲಂಘನೆ ಮಾಡಬೇಡಿ. ಇದರಿಂದ ಕೊರೊನಾ ಹರಡುವ ಸಂಭವ ಹೆಚ್ಚಾಗಿದೆ ಎಂದು ಹೇಳಿದರು. ರಾಜ್ಯಸರ್ಕಾರ, ಆರೋಗ್ಯ ಇಲಾಖೆ, ಪೊಲೀಸರು ಹಗಲು-ರಾತ್ರಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ. ಒಟ್ಟು ಸೋಂಕಿನ ಪ್ರಮಾಣ ರಾಜ್ಯದಲ್ಲಿ 37 ಆಗಿದೆ …
Read More »