Breaking News

ಬೆಂಗಳೂರು

ಶಿಕ್ಷಕರನ್ನು ನೇಮಿಸದಿದ್ದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡಿ: BJP ಶಾಸಕ ರಾಜುಗೌಡ ಆಗ್ರಹ

ಬೆಂಗಳೂರು, ಸೆ. 15: ‘ಕಲ್ಯಾಣ ಕರ್ನಾಟಕ(ಹೈ.ಕ) ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ನೇಮಕ ಮಾಡಬೇಕು. ಇಲ್ಲವಾದರೆ ಪರೀಕ್ಷೆ ಇಲ್ಲದೆ ಮಕ್ಕಳನ್ನು ಪಾಸ್ ಮಾಡುವ ವ್ಯವಸ್ಥೆಯನ್ನಾದರೂ ತರಬೇಕು’ ಎಂದು ಸರಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯ ನರಸಿಂಹ ನಾಯಕ್(ರಾಜುಗೌಡ) ಆಗ್ರಹಿಸಿದ ಪ್ರಸಂಗ ನಡೆಯಿತು.   ಗುರುವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಕರ ಕೊರತೆ ವಿಷಯ ಪ್ರಸ್ತಾಪಿಸಿದ ಅವರು, ‘ರಾಜ್ಯದ ಇತರೆ ಕಡೆಗಳಲ್ಲಿ 16 ಮಕ್ಕಳಿಗೆ ಒಬ್ಬರು ಶಿಕ್ಷಕರಿದ್ದರೆ, ಹೈಕ …

Read More »

ದೇಶದ ಆಂತರಿಕ ಭದ್ರತೆಗೆ ಧಕ್ಕೆ ತರುವ ಕೃತ್ಯ: ಐವರು ಆರೋಪಿಗಳ ಬಂಧನ

ಬೆಂಗಳೂರು: ಅಂತರರಾಷ್ಟ್ರೀಯ ಮೊಬೈಲ್‌ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಕೇರಳದ ಐವರು ಆರೋಪಿಗಳನ್ನು ನಗರದ ಸಿಸಿಬಿ ಹಾಗೂ ಆರ್ಥಿಕ ಅಪರಾಧ ದಳದ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಬುಧವಾರ ಬಂಧಿಸಿದ್ದಾರೆ.   ಕೇರಳದ ದಿನೇಶ್‌ ಪಾವೂರ್‌, ಕೆ.ಪಿ.ವಿಪಿನ್‌, ಸುಭಾಷ್‌, ಬೆಜಿನ್‌ ಜೋಸೆಫ್‌, ಷಮದ್‌ ಷಹಜನ್‌ ಬಂಧಿತರು. ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆಯ ಮಾಹಿತಿ ಆಧರಿಸಿ ನಗರದ ಕೋರಮಂಗಲ, ಮೈಕೋ ಲೇಔಟ್‌ ಹಾಗೂ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ …

Read More »

ಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕು: ಯತ್ನಾಳ

ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ʻಕೇಂದ್ರೀಯ ಸಂಸದೀಯ ಸದಸ್ಯ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಬೇಕುʼ ಎಂದು ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಆಗ್ರಹಿಸಿದ್ದಾರೆ.   ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ‘ಮಾಜಿ ಸಿಎಂ ಬಿಎಸ್​ ವೈ ವಿರುದ್ಧ ಎಫ್‌ಐಆರ್​ ಗೆ ಕೋರ್ಟ್ ಆದೇಶ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಲ್ ಕೆ ಆಡ್ವಾಣಿ, ವಾಜಪೇಯಿಗಿಂತ ಡೊಡ್ಡವ್ರಾ ಅವರು? ಎಲ್ ಕೆ …

Read More »

ಇದೇ ಅಧಿವೇಶನದಲ್ಲೇ ದಾಖಲೆ ಬಹಿರಂಗ : ‘ಒತ್ತುವರಿ ಬಾಂಬ್’ ಸಿಡಿಸಿದ ಸಚಿವ ಅಶೋಕ್

ಬೆಂಗಳೂರು,ಸೆ.15-ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಬಾಹಿರವಾಗಿ ಯಾರ್ಯಾರು ಕೆರೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬುದರ ಬಗ್ಗೆ ಇದೇ ಅಧಿವೇಶನದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಕಂದಾಯ ಸಚಿವ ಆರ್.ಅಶೋಕ್ ಬಾಂಬ್ ಸಿಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಪ್ಪು ಮಾಡಿದ್ದಾರೆಯೇ , ಇಲ್ಲ ನಾನು ತಪ್ಪು ಮಾಡಿದ್ದೇನೆಯೇ ಅಥವಾ ನಮ್ಮ ಸಂಪುಟ ಸಹೋದ್ಯೋಗಿಗಳು ಮಾಡಿದ್ದಾರೆಯೇ ಎಂಬುದರ ಕುರಿತು ಯಾರ್ಯಾರು ಕೆರೆಗಳನ್ನು ನುಂಗಿ ನೀರು ಕುಡಿದಿದ್ದಾರೋ ಅವರೆಲ್ಲರ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.   ಸುದ್ದಿಗಾರರೊಂದಿಗೆ …

Read More »

ವಿಮಾ ಕಂಪನಿಗಳನ್ನೂ ಹೈರಾಣಗೊಳಿಸಿದೆ. ಮಳೆ

ಬೆಂಗಳೂರು, ಸೆ. 15: ನಗರದಲ್ಲಿ ಕೆಲ ದಿನಗಳ ಹಿಂದೆ ಸುರಿದ ಮಹಾಮಳೆ ಮತ್ತು ಪ್ರವಾಹ ಕೆಲ ಪ್ರದೇಶಗಳಲ್ಲಿ ಜನಜೀವನವನ್ನು ಅಲುಗಾಡಿಸಿದೆ. ದೊಡ್ಡ ದೊಡ್ಡ ಲೇಔಟ್‌ಗಳಲ್ಲಿ ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದ ಶ್ರೀಮಂತರೂ ನಲುಗಿ ಹೋಗಿದ್ದರು. ಎತ್ತರದ ಕಟ್ಟಡದಿಂದ ನಿಂತು ನೋಡಿದರೆ ಇಡೀ ಪ್ರದೇಶವೇ ಕೆರೆ ಎಂಬಂತೆ ಭಾಸವಾಗುತ್ತಿತ್ತು ಆವತ್ತಿನ ದಿನಗಳ ದೃಶ್ಯ.   ವಿಲ್ಲಾಗಳ ಒಳಗೆ ನೀರು ನುಗ್ಗಿದ್ದು, ಐಷಾರಾಮಿ ಕಾರುಗಳು ನೀರಿನಲ್ಲಿ ಮುಳುಗಿಹೋಗಿದ್ದು, ಇವೆಲ್ಲವೂ ರಾಷ್ಟ್ರಾದ್ಯಂತ ಗಮನ ಸೆಳೆಯಿತು. ಐಟಿ …

Read More »

ಬಿಎಸ್‌ವೈ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

ಬೆಂಗಳೂರು: ‘ಬಿಡಿಎ ವಸತಿ ಯೋಜನೆ ಅನುಷ್ಠಾನದಲ್ಲಿ ಲಂಚ ಪಡೆದಿದ್ದಾರೆ’ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.   ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ಸಲ್ಲಿಸಿರುವ ಖಾಸಗಿ ದೂರನ್ನು, ‘ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ಬಿ.ಜಯಂತ ಕುಮಾರ್‌ ಬುಧವಾರ ವಿಚಾರಣೆ ನಡೆಸಿ, ‘ಆರೋಪಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು’ ಎಂದು ಆದೇಶಿಸಿ ವಿಚಾರಣೆ ಮುಂದೂಡಿದರು. ಪ್ರಕರಣವೇನು?: ಬಿಡಿಎ ಗುತ್ತಿಗೆದಾರ ಸೇರಿದಂತೆ …

Read More »

ಬಲವಂತದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಪ್ರತಿಭಟನೆ

ಹಿಂದಿ ದಿವಸ್ (Hindi Divas) ವಿರೋಧಿಸಿ ಇಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ (JDS State President CM Ibrahim) ಅವರ ನೇತೃತ್ವದಲ್ಲಿ ಪ್ರತಿಭಟನೆ (Protest) ನಡೆಯಲಿದೆ. ಬಲವಂತದ ಹಿಂದಿ ದಿವಸ್ ಆಚರಣೆ ವಿರೋಧಿಸಿ ಇಂದು ಜೆಡಿಎಸ್ ಪ್ರತಿಭಟನೆ (JDS Protest) ಮಾಡಲಿದ್ದು, ರಾಜ್ಯ ಜೆಡಿಎಸ್ ಕಚೇರಿಯ ಆವರಣದಲ್ಲಿ ಹಿಂದಿ ದಿವಸ್ ಆಚರಣೆ ವಿರೋಧಿಸಿ ಪ್ರತಿಭಟನೆ ಮಾಡಲಿದೆ. ಜೆಪಿ ಭವನದ ಮುಂಭಾಗದಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ (State And …

Read More »

ಮತ್ತೆ ಮುನ್ನೆಲೆಗೆ ಬಂದ ಸಿದ್ದು ದುಬಾರಿ ವಾಚ್ ವಿವಾದ

ಬೆಂಗಳೂರು,ಸೆ.13- ಪಿಎಸ್‍ಐ ನೇಮಕಾತಿ ಅಕ್ರಮ ಹಾಗೂ 40% ಕಮೀಷನ್ ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ ಮತ್ತೆ ಹೊಬ್ಲೆಟ್ ವಾಚ್ ವಿವಾದವನ್ನು ಮುಂದಿಡಲು ತೀರ್ಮಾನಿಸಿದೆ. ಪ್ರವಾಹ ಭ್ರಷ್ಟಾಚಾರ ಇನ್ನಿತರೆ ವಿಷಗಳನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹಣಿಯಲು ಯತ್ನಿಸುತ್ತಿರುವ ವಿಪಕ್ಷ ಕಾಂಗ್ರೆಸ್‍ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದುಬಾರಿ ಹೊಬ್ಲೊಟ್ ಪ್ರಕರಣವನ್ನು ಲೋಕಾಯುಕ್ತ ತನಿಖೆಗೆ ವಹಿಸುವಂತೆ ಪಟ್ಟುಹಿಡಿದು ಒತ್ತಾಯಿಸಲಿದೆ.   2016ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ರಾಜಕೀಯ …

Read More »

ನಲಪಾಡ್‌ ಅಕಾಡೆಮಿಯ ತೆರವು ಕಾರ್ಯ ಸ್ಥಗಿತ : ಜೆಸಿಬಿ ಗೇಟ್‌ ಟಚ್‌ ಮಾಡುತ್ತಿದ್ದಂತೆ ಹೈಡ್ರಾಮ

ಬೆಂಗಳೂರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಎರಡನೇ ದಿನವೂ ಬೃಹತ್‌ ಕಟ್ಟಡಗಳನ್ನು ತೆರವು ಕಾರ್ಯ ನಡೆಸಲಾಗುತ್ತಿದೆ. ಈ ಬೆನ್ನಲ್ಲೇ ಇದೀಗ ನಲಪಾಡ್‌ ಅಕಾಡೆಮಿಯ ತೆರವು ಕಾರ್ಯಕ್ಕಾಗಿ ಜೆಸಿಬಿ ಗೇಟ್‌ ಟಚ್‌ ಮಾಡುತ್ತಿದ್ದಂತೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು, ಭಾರೀ ಹೈಡ್ರಾಮಕ್ಕೆ ಕಾರಣವಾಗಿದೆ   ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವ ಪ್ರದೇಶಗಳನ್ನು ಗುರುತಿಸಿ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಈ ಬೆನ್ನಲ್ಲೇ ಇದೀಗ …

Read More »

ಈ ಬಾರಿ ದಸರಾಗೆ ಶಾಲಾ-ಕಾಲೇಜುಗಳಿಗಿಲ್ಲ ರಜೆ

ಬೆಂಗಳೂರು: ನಾಡಹಬ್ಬ ದಸರಾಗೆ ಈಬಾರಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲದಿರುವುದು ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರ ಬೇಸರಕ್ಕೆ ಕಾರಣವಾಗಿದೆ. ಸೆ.26ರಿಂದ ಅಕ್ಟೋಬರ್ 5ರವರೆಗೆ ನಾಡಹಬ್ಬ ದಸರಾ, ನವರಾತ್ರಿ ಉತ್ಸವದ ಸಂಭ್ರಮ. ಆದರೆ ಶಾಲಾ-ಕಾಲೇಜುಗಳಿಗೆ ಮಾತ್ರ ಈ ಬಾರಿ ರಜೆಯನ್ನು ದಸರಾ ಬದಲಾಗಿ ದಸರಾ ಹಬ್ಬ ಮುಗಿದ ಬಳಿಕ ನೀಡಲಾಗಿರುವ ಶಿಕ್ಷಣ ಇಲಾಖೆ ಕ್ರಮಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.   ಸಾರ್ವಜನಿಕ ಶಿಕ್ಷಣ ಇಲಾಖೆ ಈಗಾಗಲೇ ಹೊರಡಿಸಿರುವ ಪ್ರಸಕ್ತ ಸಾಲಿನ ಶೈಕ್ಷಣಿಕ ಕ್ಯಾಲೇಂಡರ್ ನಲ್ಲಿ ಪ್ರಾಥಮಿಕ …

Read More »