ಕಲಬುರಗಿ, (ಡಿಸೆಂಬರ್ 24): ಬಿವೈ ವಿಜಯೇಂದ್ರ (BY Vijayendra) ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಬೆನ್ನಲ್ಲೇ ಇದೀಗ ಕರ್ನಾಟಕ ಬಿಜೆಪಿ(Karnataka BJP) ಪದಾಧಿಕಾರಿಗಳ ನೇಮಕಾತಿ ಸಹ ಆಗಿದೆ. ವಿವಿಧ ಮೋರ್ಚ, ರಾಜ್ಯ ಉಪಾಧ್ಯಕ್ಷ, ರಾಜ್ಯ ಕಾರ್ಯದರ್ಶಿಗಳನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮೇಲುಗೈ ಸಾಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಂದು ಬಣ ಅಸಮಾಧಾನಗೊಂಡಿದೆ. ಅದರಲ್ಲೂ ಮೊದಲಿಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದ್ದು, 2024ರ ವರೆಗೆ ತಡೆಯಿರಿ. …
Read More »ಸಿದ್ದರಾಮಯ್ಯನವರ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಪೇಜಾವರ ಶ್ರೀಗಳು
ಬೆಳಗಾವಿ, ಡಿ.23 : ಹಿಜಾಬ್ ವಾಪಾಸ್ ಪಡೆಯುತ್ತೇವೆ ಎಂಬ ಸಿಎಂ ಸಿದ್ದರಾಮಯ್ಯ( Siddaramaiah )ನವರ ಹೇಳಿಕೆ ವಿಚಾರ ‘ಒಬ್ಬರಿಗೆ ಒಂದು ಕಾನೂನು, ಇನ್ನೊಬ್ಬರಿಗೆ ಒಂದು ಕಾನೂನು ಮಾಡುವುದರಿಂದಸಮಾಜದಲ್ಲಿದೊಡ್ಡ ಕ್ಷೋಭೆ(ಅಲ್ಲೋಲ-ಕಲ್ಲೋಲ) ಉಂಟಾಗುತ್ತದೆ ಎಂದು ವಿಶ್ವ ಪ್ರಸನ್ನ ತೀರ್ಥ ಪೇಜಾವರ ಶ್ರೀಗಳು( Vishwa Prasanna Theertha Swamij ) ಹೇಳಿದರು. ಬೆಳಗಾವಿಯಲ್ಲಿ ಮಾತನಾಡಿದ ಅವರು ‘ಕಾನೂನು ಮಾಡಲಿ ಅದು ಸಮಾಜದಲ್ಲಿ ಒಂದು ಪಂಗಡವನ್ನ ಗುರಿಯಾಗಿರಿಸಿಕೊಂಡು ಮಾಡುವುದು ಸರಿಯಲ್ಲ ಎಂದು ಹೇಳಿದರು. ಯಾವುದೇ ಒಂದು ಪಂಗಡದ ಸಿಎಂ ಅವರಲ್ಲ ಕರ್ನಾಟಕದ ಎಲ್ಲರ …
Read More »ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಪಲ್ಟಿ
ಬೆಳಗಾವಿ, ಡಿ.23: ಜಿಲ್ಲೆಯ ರಾಯಬಾಗ (Raybag) ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್(tractor) ಪಲ್ಟಿಯಾಗಿ, ಟ್ರ್ಯಾಕ್ಟರ್ ಕೆಳಗಡೆ ಸಿಲುಕಿ ಪರದಾಡುತ್ತಿದ್ದ ಚಾಲಕ(Driver)ನನ್ನು ರಕ್ಷಣೆ ಮಾಡಲಾಗಿದೆ. 4 ಜೆಸಿಬಿ, 1 ಹಿಟಾಚಿ ಸಹಾಯದಿಂದ ಚಾಲಕನನ್ನು ರಕ್ಷಿಸಲಾಗಿದ್ದು, ಕೂಡಲೇ ಸ್ಥಳೀಯರು ಟ್ರ್ಯಾಕ್ಟರ್ ಚಾಲಕನನ್ನು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಕುರಿತು ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »ನೂತನ ಪದಾಧಿಕಾರಿಗಳ ನೇಮಕ: ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ
ರಾಜ್ಯ ಬಿಜೆಪಿ ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. ರಾಜ್ಯ ಉಪಾಧ್ಯಕ್ಷರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ರಾಜ್ಯ ಕಾರ್ಯದರ್ಶಿಗಳು, ಖಜಾಂಚಿ ಮತ್ತು 7 ಮೋರ್ಛಾಗಳ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 6 ಆಪ್ತರಿಗೆ ಸ್ಥಾನ ನೀಡಲಾಗಿದೆ. ಹೀಗಾಗಿ ಇದಕ್ಕೆ ಅಪಸ್ವರಗಳು ವ್ಯಕ್ತವಾಗಿದ್ದು, ಈ ಬಗ್ಗೆ ಸದಾನಂದಗೌಡ ಹೈಕಮಾಂಡ್ಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಬೆಂಗಳೂರು, (ಡಿಸೆಂಬರ್ 24): ಬಿವೈ ವಿಜಯೇಂದ್ರ (BY Vijayendra) ಅವರು ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ರಾಜ್ಯ …
Read More »ಮಂಡ್ಯದಿಂದಲೇ ಸ್ಪರ್ಧಿಸುವೆ.ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಸುಮಲತಾ ಶಾಕ್
ಬೆಂಗಳೂರು: 2019ರ ಲೋಕಸಭೆ ಚುನಾವಣೆ ವೇಳೆ ಹೈವೋಲ್ಟೆಜ್ ಕದನವಾಗಿದ್ದ ಮಂಡ್ಯ ಲೋಕಸಭೆ ಕ್ಷೇತ್ರ ಇದೀಗ 2024ರ ಚುನಾವಣೆ ಮುನ್ನವೇ ರಂಗೇರುವ ಸಾಧ್ಯತೆ ಇದೆ. ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಮಂಡ್ಯ ಕ್ಷೇತ್ರ ತಲೆನೋವಾಗುವ ಮುನ್ಸೂಚನೆ ಸಿಕ್ಕಿದೆ. ಇದಕ್ಕೆ ಕಾರಣ ಹಾಲಿ ಸಂಸದೆ ಸುಮಲತಾ ನೀಡಿರುವ ಹೇಳಿಕೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ನೀಡಿದರೆ ಮಂಡ್ಯದಿಂದ ಸ್ಪರ್ಧೆ ಮಾಡುವೆ. ಇಲ್ಲದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಸುಮಲತಾ ತಿಳಿಸಿದ್ದಾರೆ. ನನ್ನ ಸ್ಪರ್ಧೆ ಸಂಬಂಧ …
Read More »ಬಿಜೆಪಿಯಲ್ಲಿ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ: ಡಿವಿಸ್ ಅಸಮಾಧಾನ
ಬೆಂಗಳೂರು: ರಾಜ್ಯ ಬಿಜೆಪಿ (BJP) ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ (DV Sadananda Gowda) ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಅಸಮಾಧಾನಗೊಂಡ ನಾಯಕರ ಪಟ್ಟಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ವಿಪಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ (BY Vijayendra) ಹಾಗೂ ಆರ್. ಅಶೋಕ್ (R. Ashok) ಆಯ್ಕೆಯಾದಗಿನಿಂದ ಬಿಜೆಪಿ ಹಿರಿಯ ನಾಯಕರು ಒಬ್ಬರಾದ ಮೇಲೊಬ್ಬರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದೀಗ …
Read More »ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ.:ಅನಂತ್ ಕುಮಾರ್ ಹೆಗಡೆ
ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಸಿದ್ದರಾಮಯ್ಯನವರ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದು ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್ನವರು ಬದುಕಬೇಕು ಎಂದರೇ ಮುಸ್ಲಿಂರ ಹಿಜಾಬನ್ನು ಹಿಡಿದುಕೊಂಡೇ ಓಟು ತಗೋಬೇಕು ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಕಿಡಿಕಾರಿದ್ದಾರೆ. ಉತ್ತರ ಕನ್ನಡ, ಡಿ.24: ಸಿದ್ದರಾಮಯ್ಯ(Siddaramaiah)ನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ ಎಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ …
Read More »ಕಳ್ಳರ ಕೈಯಲ್ಲಿ ಕೀಲಿ ಕೈʼ.ಬಿಎಸ್‌ವೈ-ವಿಜಯೇಂದ್ರ ವಿರುದ್ಧ ಯತ್ನಾಳ ಮತ್ತೆ ವಾಗ್ದಾಳಿ
ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಹಾಗು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಿರುದ್ಧ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ಮುಂದುವರೆಸಿದ್ದಾರೆ. ಲೋಕಸಭೆ ಚುನಾವಣೆ ಬಳಿಕ ರಾಜ್ಯಾಧ್ಯಕ್ಷನ ಸ್ಥಾನ ಬದಲಾಗಬಹುದು ಎನ್ನುವ ಸುಳಿವು ನೀಡಿದ್ದಾರೆ. ವಿಜಯೇಂದ್ರನ ಆಪ್ತರನ್ನು ಪದಾಧಿಕಾರಿಗಳನ್ನಾಗಿ ಮಾಡಿರುವ ವಿಚಾರಕ್ಕೆ ಮಾಧ್ಯಮಗಳಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ಕೇಂದ್ರದವರನ್ನ ಅಂಜಿಸಿದ್ದಾರೆ. ನನ್ನ ಮಗನ ಉದ್ಧಾರ ಮಾಡದೇ ಇದ್ದರೆ ಲೋಕಸಭೆಯಲ್ಲಿ ಕೆಲಸ ಮಾಡಲ್ಲ ಎಂದು …
Read More »ರಾಜಕಾರಣದಿಂದ (Politics) ನಿವೃತ್ತಿ ಸೂಚನೆ ನೀಡಿದ ಯತ್ನಾಳ್
ವಿಜಯಪುರ: ರಾಜಕಾರಣದಿಂದ (Politics) ನಿವೃತ್ತಿಯಾಗುವ ಸೂಚನೆಯನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರು ನೀಡಿದ್ದಾರೆ. ರಾಜ್ಯ ಬಿಜೆಪಿಯಲ್ಲಿ (BJP) ಬಿಎಸ್‌ವೈ (BSY) ಕುಟುಂಬದ ಪ್ರಭಾವದ ಬಗ್ಗೆ ಅಸಮಾಧಾನ ಹೊರ ಹಾಕಿರುವ ಯತ್ನಾಳ್, ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣ ಅಸಾಧ್ಯವಾಗಿದೆ. ಅಪ್ಪಾಜಿ ಎನ್ನಬೇಕು, ಹಣ ಬಲ ಬೇಕು, ಮೇಲಿನವರ ಇಷ್ಟಾರ್ಥ ಸಿದ್ದಿಗಳನ್ನು ಈಡೇರಿಸಬೇಕು. ಇಂತವೆಲ್ಲ ಮಾಡಲಾಗದಿದ್ದರೆ ರಾಜಕಾರಣ ಮಾಡಲಾಗಲ್ಲ ಎಂದು ಹೇಳಿದ್ದಾರೆ. ಇದರೊಂದಿಗೆ 2028 ರ ವಿಧಾನಸಭೆ (Assemby …
Read More »ಸಿದ್ದರಾಮಯ್ಯ ಸರ್ಕಾರ ಯುವ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ: ಬಿ.ವೈ ವಿಜಯೇಂದ್ರ ಆರೋಪ
ಶೈಕ್ಷಣಿಕ ಸಂಸ್ಥೆಗಳಲ್ಲಿ ಧಾರ್ಮಿಕ ವಸ್ತ್ರಕ್ಕೆ ಅನುಮತಿ ನೀಡುವ ಮೂಲಕ ಸಿದ್ದರಾಮಯ್ಯ ಅವರ ಸರ್ಕಾರವು, ಯುವ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಕಲಿಕೆಯ ವಾತಾವರಣಕ್ಕೆ ಇದು ಹಿನ್ನಡೆಯಾಗಲಿದೆ ಎಂದು ಅವರು ಬರೆದುಕೊಂಡಿದ್ದಾರೆ. ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗೆ ಹಾಜರಾಗುವುದನ್ನು ನಿಷೇಧಿಸಿದ್ದನ್ನು ವಾಪಸ್ ಪಡೆಯಲು ಸೂಚಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ …
Read More »