ಬೆಳಗಾವಿ : ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಕೃಷ್ಣಾ ನದಿ ಪ್ರವಾಹ ಹೆಚ್ಚಳವಾಗಿದೆ. ಈಗಾಗಲೇ ಜಿಲ್ಲೆಯ 35 ಕ್ಕೂ ಅಧಿಕ ಸೇತುವೆಗಳು ಜಲಾವೃತಗೊಂಡಿದ್ದು ಕೃಷ್ಣಾ ನದಿ ಪಾತ್ರದ ಸುಮಾರು 60 ಕ್ಕೂ ಅಧಿಕ ಗ್ರಾಮಗಳಿಗೆ ನೀರು ಆವರಿಸಿದೆ. ನದಿ ಪಾತ್ರದ ಮನೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಕೃಷ್ಣಾ ನದಿ ನೀರಿನ ಮಟ್ಟದಲ್ಲಿ ಏರಿಕೆ ಖಂಡಿದ್ದು ಜನರಲ್ಲಿ ಆತಂಕ ಮನೆಮಾಡಿದೆ. ಸಧ್ಯ ಮಳೆ ಆರ್ಭಟ ಕಡಿಮೆಯಾದರು ಪ್ರವಾಹದಲ್ಲಿ ಕಡಿಮೆಯಾಗುವ ಲಕ್ಷಣ …
Read More »ಪತಿ ಕೊಲೆ: ಪತ್ನಿ, ಪ್ರಿಯಕರಗೆ ಜೀವಾವಧಿ ಶಿಕ್ಷೆ
ಮೂಡಲಗಿ: ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ವಡೇರಹಟ್ಟಿ ಗ್ರಾಮದಲ್ಲಿ 2023ರಲ್ಲಿ ನಡೆದ ಕೊಲೆ ಪ್ರಕರಣ ಸಂಬಂಧ ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹3 ಲಕ್ಷ ದಂಡ ವಿಧಿಸಿ, 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಮಂಗಳವಾರ ತೀರ್ಪು ನೀಡಿದೆ. ಘಟನೆ ಹಿನ್ನೆಲೆ: ಗ್ರಾಮದ ಶಂಕರ ಜಗಮುತ್ತಿ ಅವರ ಪತ್ನಿ ಸಿದ್ದವ್ವ, ಭೈರನಟ್ಟಿಯ ಶ್ರೀಧರ ತಳವಾರ ಎಂಬಾತನನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸಂಚು ರೂಪಿಸಿ …
Read More »ಬಿಡುವು ನೀಡಿದ ಮಳೆ: ಗರಿಗೆದರಿದ ಕೃಷಿ ಚಟುವಟಿಕೆ
ಶಿರಾಳಕೊಪ್ಪ: ಎರಡು ವಾರಗಳಿಂದ ಸತತವಾಗಿ ಸುರಿಸುತ್ತಿದ್ದ ಮಳೆ ಸ್ವಲ್ಪ ಬಿಡುವು ಕೊಟ್ಟ ಹಿನ್ನೆಲೆಯಲ್ಲಿ ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಭತ್ತದ ಸಸಿ ನೆಡುವುದು, ಅಡಿಕೆ ಅಡಿಕೆ ಆರಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಹೊಲಗಳಲ್ಲಿ ರೈತ ಮಹಿಳೆಯರು ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಜೋಳದ ಬೆಳೆಗಳು ಜೌಗಿನಿಂದ ಕೆಂಪಾಗುತ್ತಿದ್ದು, ಇಳುವರಿ ಕುಂಠಿತವಾಗುವ ಭೀತಿ ಎದುರಾಗಿದೆ. ಕಳೆದ ವರ್ಷ ಭೀಕರ ಬರಗಾಲದಿಂದ ರೈತರು ತೋಟ ಉಳಿಸಿಕೊಳ್ಳಲು ಕಷ್ಟಪಟ್ಟಿದ್ದರು. ಈ ಬಾರಿ ತಾಳಗುಂದದ ಪ್ರಣವೇಶ್ವರ ಕೆರೆ, ಬಳ್ಳಿಗಾವಿಯ …
Read More »ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ
ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಗೋಕಾಕ- ಪ್ರವಾಹ ಪೀಡಿತ ಪ್ರದೇಶಗಳಿಗೆ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಅವರು ಮಂಗಳವಾರದಂದು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದರು. ಅರಭಾವಿ ಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ, ಬಳೋಬಾಳ, ಹುಣಶ್ಯಾಳ ಪಿಜಿ, ವಡೇರಹಟ್ಟಿ ಮತ್ತು ಮುಸಗುಪ್ಪಿ ಗ್ರಾಮಗಳಿಗೆ ಭೇಟಿ ನೀಡಿದರು. ಅಲ್ಲಿರುವ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿದ ಅವರು, ಮಳೆಯ ಪ್ರಮಾಣ ಸದ್ಯಕ್ಕೆ ಇಳಿಕೆಯಾಗುತ್ತಿದೆ. ಪ್ರವಾಹದಿಂದ ನದಿ ತೀರದ ಪ್ರದೇಶಗಳಲ್ಲಿ …
Read More »ಒಲಂಪಿಕ್ಸ್‌ನಲ್ಲಿ’ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದರೆ ಸಿದ್ದರಾಮಯ್ಯಗೇ ಚಿನ್ನದ ಪದಕ : ಬಿಜೆಪಿ ಲೇವಡಿ
ಬೆಂಗಳೂರು : ಮುಡಾ ಸೇರಿದಂತೆ ವಿವಿಧ ಭ್ರಷ್ಟಾಚಾರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿರುವ ಪ್ರತಿಪಕ್ಷ ಬಿಜೆಪಿ, ಇದೀಗ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲೂ ವಾಗ್ದಾಳಿ ಮುಂದುವರಿಸಿದೆ. ಹೌದು ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯ ಕುರಿತು ವ್ಯಂಗ್ಯವಾಡಿದ್ದು, ಒಲಂಪಿಕ್ಸ್ ಜತೆ ಹೋಲಿಸಿ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ದೊರೆಯಬಹುದು ಎಂದು ಲೇವಡಿ ಮಾಡಿದೆ. ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ …
Read More »ಮದ್ಯಪ್ರಿಯರಿಗೆ ಶಾಕ್; ಮತ್ತೆ ಬಿಯರ್ ಬೆಲೆ ಏರಿಕೆ, ಬಾಟಲ್ಗೆ ಎಷ್ಟು ಹೆಚ್ಚಾಯ್ತು?
ಬೆಂಗಳೂರು, ಜುಲೈ 30: ಮದ್ಯಪಾನ ಆರೋಗ್ಯ ಹಾನಿಕಾರ ಅಂದ್ರೂ ಮದ್ಯ ಕುಡಿಯುವರ ಸಂಖ್ಯೆ ಕಡಿಮೆಯಾಗಿಲ್ಲ. ಒಂದು ತಿಂಗಳ ಹಿಂದೆಯಷ್ಟೆ ಬಿಯರ್ ಬೆಲೆ ಏರಿಕೆಯಾಗಿತ್ತು. ಇದೀಗ ಮತ್ತೆ ಬಿಯರ್ ಬೆಲೆ ಏರಿಕೆಯಾಗಿದೆ. ಬಿಯರ್ ಕುಡಿಯುವವರಿಗೆ ಉತ್ಪಾದನಾ ಕಂಪನಿಗಳು ಮತ್ತೊಮ್ಮೆ ಶಾಕ್ ನೀಡಿವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಎದುರಾಗುತ್ತಿದೆ. ಕಳೆದ ಒಂದು ತಿಂಗಳ ಹಿಂದಷ್ಟೇ ಬಿಯರ್ ಕಂಪನಿಗಳು ಬಿಯರ್ ಬೆಲೆಯನ್ನು ಏರಿಕೆ ಮಾಡಿದ್ದು, …
Read More »ಕರ್ನಾಟಕದಲ್ಲಿ ‘ಜಲ ಕಂಟಕ’ : ವರ್ಷದ ಆರಂಭದಲ್ಲೇ ಕೋಡಿ ಶ್ರೀಗಳು ನುಡಿದಿದ್ದ ಭವಿಷ್ಯ ನಿಜವಾಯ್ತಾ?
ಬೆಳಗಾವಿ : ರಾಜ್ಯದಲ್ಲಿ ಭೀಕರ ಮಳೆ ಯಾಗುತ್ತಿದ್ದು ಅಪಾರ ಪ್ರಮಾಣದ ಮಳೆಯಿಂದ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ.ಇದೀಗ ಕರ್ನಾಟಕದಲ್ಲಿ ಸೃಷ್ಟಿಯಾಗಿರುವ ಜಲ ಕಂಟಕದ ಬಗ್ಗೆ ಕೋಡಿಮಠದ ಡಾ. ಶ್ರೀ ಶಿವಾನಂದ ಶಿವಯೋಗಿರಾಜೇಂದ್ರ ಸ್ವಾಮೀಜಿ ಅವರು ವರ್ಷದ ಆರಂಭದಲ್ಲೇ ನುಡಿದಿದ್ದ ಭವಿಷ್ಯ ನಿಜವಾಗಿದೆ. ಹೌದು ರಾಜ್ಯದಲ್ಲಿ ಯಾವಾಗ ಮುಂಗಾರು ಮಳೆ ಆರಂಭವಾಯಿತೊ ಅಂದಿನಿಂದ ಇವತ್ತಿನವರೆಗೂ ರಾಜ್ಯದ ಅನೇಕ ಕಡೆಗಳಲ್ಲಿ ಭಾರಿ ಪ್ರಮಾಣದ ಮಳೆಯಿಂದ ಅನೇಕ ಜನರ …
Read More »ಕಾಂಗ್ರೆಸ್ ಹಗರಣ, ಭ್ರಷ್ಟಾಚಾರಗಳ ವಿರುದ್ಧ ಚಕ್ರವ್ಯೂಹ ರಚನೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ
ನವದೆಹಲಿ: ಇಡೀ ದೇಶ ಚಕ್ರವ್ಯೂಹದಲ್ಲಿ ಸಿಲುಕಿದೆ. ದೇಶವನ್ನು ಪ್ರಧಾನಿ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಅಜಿತ್ ದೋವೆಲ್, ಅಂಬಾನಿ, ಅದಾನಿ ಈ ಆರು ಜನರ ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ ಎಂಬ ರಾಹುಲ್ ಗಾಂಧಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಚಕ್ರವ್ಯೂಹ ರಚಿಸಲಾಗುತ್ತಿದೆ. ಆದರೆ ಅದು ಕಾಂಗ್ರೆಸ್ ನವರ ಹಗರಣ, ಭ್ರಷ್ಟಾಚಾರಗಳ ವಿರುದ್ಧ ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಹಗರಣಗಳು …
Read More »ಸಕಾರಾತ್ಮಕ ಸುದ್ದಿಗೆ ಆದ್ಯತೆ ನೀಡಿ: ಶಾಸಕ ನಿಖಿಲ್ ಕತ್ತಿ
ಹುಕ್ಕೇರಿ: ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಜನಪ್ರತಿನಿಧಿಗಳನ್ನು ಸರಿಯಾದ ಮಾರ್ಗದಲ್ಲಿ ನಡೆಯುವಂತೆ ಮಾಡುವ ಚಾಕಚಕ್ಯತೆ ಹೊಂದಿರಬೇಕು. ಜಗತ್ತಿನಲ್ಲಿ ನಡೆಯುವ ದಿನನಿತ್ಯದ ಆಗು ಹೋಗುಗಳನ್ನು ಗಮನಿಸಿ ಸಕಾರಾತ್ಮಕ ಹಾಗೂ ಸ್ಥಳೀಯ ಸುದ್ದಿಗಳನ್ನು ನಿಖರವಾಗಿ, ನಿಷ್ಪಕ್ಷವಾಗಿ ಬರೆದು ಜನಮನ್ನಣೆ ಪಡೆಯಬೇಕು ಎಂದು ಶಾಸಕ ನಿಖಿಲ್ ಕತ್ತಿ ಹೇಳಿದರು. ತಾಲ್ಲೂಕು ಪಂಚಾಯ್ತಿ ಸಭಾ ಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ದಿಲೀಪ ಕುರಂದವಾಡೆ …
Read More »ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಪೂರ್ವಭಾವಿ ಸಭೆ
ಬೆಳಗಾವಿ: ‘ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಈಗ 100 ವರ್ಷ ತುಂಬಿದೆ. ಸರ್ಕಾರಿ ಮಾರ್ಗಸೂಚಿಯಂತೆ, ಅರ್ಥಪೂರ್ಣವಾಗಿ ಅಧಿವೇಶನದ ಶತಮಾನೋತ್ಸವ ಆಚರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ‘ಶತಮಾನೋತ್ಸವ ಆಚರಣೆಗೆ ಸರ್ಕಾರ ಬಜೆಟ್‌ನಲ್ಲಿ ₹2 ಕೋಟಿ ಅನುದಾನ ಮೀಸಲಿಟ್ಟಿದೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುವುದು’ ಎಂದರು. ‘ಕಾಂಗ್ರೆಸ್ ಅಧಿವೇಶನದಲ್ಲಿ ಅಂಗೀಕರಿಸಿದ್ದ ಗೊತ್ತುವಳಿಗಳ …
Read More »
Laxmi News 24×7