ಭೀಕರ ಅಪಘಾತ…ಹಿಂಬದಿಯಿಂದ ಗುದ್ದಿದ ಬಸ್…ಲಾರಿ ಪಲ್ಟಿ!!! ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ದುರ್ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ವೇಗದಲ್ಲಿದ್ದ ಖಾಸಗಿ ಬಸ್ಸೊಂದು ಹಿಂಬದಿಯಿಂದ ಟ್ರಕ್ಕಿಗೆ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿ, ಟ್ರಕ್ ಪಲ್ಟಿಯಾಗಿದೆ. ಘಟನೆಯಲ್ಲಿ ಟ್ರಕ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಕ್ರಾಸ್ ಬಳಿ ಎಸ್ ಎಸ್ ಟ್ರಾವೇಲ್ಸ್ ಬಸ್ ಹಾಗೂ ಟ್ರಕ್ ನಡುವೆ …
Read More »ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್ ವಾಪಸ್…!!!! ಕೇವಲ ಮನವಿಗೆ ಸೀಮಿತವಾದ ಪ್ರತಿಭಟನೆ.
ಕಿತ್ತೂರು: ಬಜೆಟನಲ್ಲಿ ಕಿತ್ತೂರು ಪ್ರಾಧಿಕಾರಕ್ಕೆ ಅನುದಾನವನ್ನು ನೀಡದ ಹಿನ್ನೆಲೆ ನಾಳೆ ಕರೆ ನೀಡಿದ್ದ ಕಿತ್ತೂರು ಬಂದ್’ನ್ನು ವಾಪಸ್ಸು ಪಡೆಯಲಾಗಿದೆ. ಇಂದು ಕೇವಲ ಪ್ರತಿಭಟನಾ ರ್ಯಾಲಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೆಲವು ಪ್ರಾಧಿಕಾರಗಳಿಗೆ ಅನುದಾನ ನೀಡಿದ ಸರ್ಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರವನ್ನೇ ಕಡೆಗಣಿಸಿದೆ. ಈ ತಾರತಮ್ಯ ಖಂಡಿಸಿ ಮಾರ್ಚ್ 18ರಂದು ಚನ್ನಮ್ಮನ ಕಿತ್ತೂರು ಪಟ್ಟಣವನ್ನು ಸಂಪೂರ್ಣ ಬಂದ್ ಮಾಡಲು, ಕಿತ್ತೂರು ರಾಜಗುರು …
Read More »ಪೊಲೀಸರು ಸ್ಥಳ ಮಹಜರಿಗೂ ಮೊದಲೇ ಕಾರನ್ನು ಬೆಳಗಾವಿ ಹೊರ ವಲಯದಲ್ಲಿರುವ ಶೋರೂಮ್ಗೆ ಶಿಫ್ಟ್ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಬೆಳಗಾವಿ, ಸಚಿವೆ ಲಕ್ಷ್ಮೀ ಹೆಬ್ಬಾಕ್ಳರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ಇಂದು (ಜನವರಿ 14) ಸಂಕ್ರಾಂತಿ ಹಬ್ಬದ ದಿನವೇ ಬೆಳಗಾವಿಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ಬಳಿ ನಾಯಿಗಳು ಅಡ್ಡಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಹೆಬ್ಬಾಳ್ಕರ್ ಗಾಯಗಳಾಗಿವೆ. ಇನ್ನು ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸರ್ಕಾರಿ ಕಾರು ಚಾಲಕನ ವಿರುದ್ಧ ದೂರು ದಾಖಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಗನ್ಮ್ಯಾನ್ ಈರಪ್ಪ ಹುಣಶಿಕಟ್ಟಿ ದೂರಿನ ಮೇರೆಗೆ …
Read More »ಜನಾಕರ್ಷಿಸಿದ ಚನ್ನಮ್ಮನ ಕಿತ್ತೂರು ದೋಣಿ ವಿಹಾರ
ಕಿತ್ತೂರು: ಕಿತ್ತೂರು ಉತ್ಸವದ ಅಂಗವಾಗಿ ಜಿಲ್ಲಾಡಳಿತ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಷ್ಟ್ರೀಯ ಸಾಹಸ ಅಕಾಡೆಮಿ ಆಶ್ರಯದಲ್ಲಿ ತುಂಬುಗೆರೆಯಲ್ಲಿ ಬುಧವಾರ ನಡೆದ ದೋಣಿ ವಿಹಾರ ಜನಾಕರ್ಷಿಸಿತು. ಸುಡು ಬಿಸಿಲಿನ ನಡುವೆ ಕೆರೆಯತ್ತ ಬಂದ ಜನ ತುಂಬುಕೆರೆಯ ದೋಣಿ ವಿಹಾರದಲ್ಲಿ ಕೆಲಹೊತ್ತು ನಲಿದರು. ದಶಕಗಳಿಂದ ನೀರು ಕಾಣದ ಐತಿಹಾಸಿಕ ಕೆರೆ ಈ ವರ್ಷ ಸುರಿದ ಭಾರಿ ಮಳೆಯಿಂದ ಮೈ ತುಂಬಿ ಹರಿಯುತ್ತಿರುವುದನ್ನು ಕಂಡು ಸಂಭ್ರಮಿಸಿದರು. ಬ್ರಿಟಿಷರ ವಿರುದ್ಧ …
Read More »ಕಿತ್ತೂರು ವಿಜಯೋತ್ಸವ: ಕಲಾವಿದರಿಗೆ ಮನಸೋತ ಜನಸಾಗರ
ಚನ್ನಮ್ಮನ ಕಿತ್ತೂರು: ಕಿತ್ತೂರ ನಾಡು ಹತ್ತೂರು ಕಲಾವಿದರನ್ನು ಬುಧವಾರ ಚುಂಬಕಶಕ್ತಿಯಂತೆ ಸೆಳೆಯಿತು. ಜನಪದರು, ಸಂಗೀತಗಾರರು, ನೃತ್ಯಪಟುಗಳು ಸೇರಿ ಕಲಾವಿದರ ದಂಡೇ ಕ್ರಾಂತಿಯ ನೆಲದತ್ತ ಹರಿದುಬಂದಿತ್ತು. ಬೆಳಿಗ್ಗೆ ಆರಂಭಗೊಂಡ ಜಾನಪದ ಕಲಾವಾಹಿನಿ ಮೆರವಣಿಗೆ ಮಧ್ಯಾಹ್ನದವರೆಗೂ ಸಾಗಿತು. ಮೂರ್ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ಈ ಮೆರವಣಿಗೆ ಮೇಲೂ ಕಾರ್ಮೋಡ ಕವಿದಿತ್ತು. ಆದರೆ, ವರುಣ ಬಿಡುವು ಕೊಟ್ಟಿದ್ದರಿಂದ ಮೆರವಣಿಗೆ ರಂಗೇರಿತು. ಉತ್ಸವದ ಹಿನ್ನೆಲೆಯಲ್ಲಿ ಬೈಲಹೊಂಗಲ ಮತ್ತು ಕಿತ್ತೂರು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗಾಗಿ ಶಾಲಾ …
Read More »ಗೋಡೆಗಳಲ್ಲಿ ಅರಳಿದ ಕಲಾಕೃತಿ
ಕಿತ್ತೂರು: ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಹಾಗೂ ಸೋಮವಾರ ಪೇಟೆಯ ಹೃದಯ ಭಾಗದಲ್ಲಿರುವ ರಾಣಿ ಚನ್ನಮ್ಮನ ಪುತ್ಥಳಿಗೆ ಹೊಸಕಳೆ ಬಂದಿದ್ದು, ಹೆದ್ದಾರಿ ಕೆಳ ಸೇತುವೆಯ ಪಕ್ಕದ ಗೋಡೆಗಳಲ್ಲಿ ರಾಣಿ ಚನ್ನಮ್ಮ ಹಾಗೂ ಇತಿಹಾಸ ಬಿಂಬಿಸುವ ಕೆಲವು ಸನ್ನಿವೇಶ, ಚಿತ್ರಗಳು ಜೀವ ಪಡೆದಿದ್ದು, ಕಿತ್ತೂರು ಕಳೆಗಟ್ಟಿದೆ. ಇಲ್ಲಿನ ಕೋಟೆ ಆವರಣದಲ್ಲಿ ಅ. 23ರಿಂದ 25 ರ ವರೆಗೆ ನಡೆಯಲಿರುವ ಚನ್ನಮ್ಮನ ಕಿತ್ತೂರು ಉತ್ಸವದ ಅಂಗವಾಗಿ ಕಲಾಕೃತಿಗಳು ಜೀವತಳೆದಿವೆ. ಅಶ್ವಾರೂಢ ಚನ್ನಮ್ಮನ ಪ್ರತಿಮೆಗೆ …
Read More »ವೈಭವಯುತ ‘ಕಿತ್ತೂರು ಉತ್ಸವ’ಕ್ಕೆ ಭರದ ಸಿದ್ಧತೆ: ಶಾಸಕ ಬಾಬಾಸಾಹೇಬ ಪಾಟೀಲ
ಬೆಳಗಾವಿ: ‘ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಉತ್ಸವವನ್ನು ಸಂಭ್ರಮದಿಂದ ಆಚರಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. 23ರಂದು ಸಂಜೆ 7ಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು. ‘ದ್ವಿಶತಮಾನೋತ್ಸವದ ಕಾರಣಕ್ಕಾಗಿ ಈ ಬಾರಿ ಕಿತ್ತೂರು ಉತ್ಸವಕ್ಕೆ ರಾಜ್ಯ ಸರ್ಕಾರ ₹ 5 ಕೋಟಿ ಅನುದಾನ ಘೋಷಿಸಿದೆ. ಒಂದೆರಡು ದಿನಗಲ್ಲಿ ಸಂಪೂರ್ಣ ಅನುದಾನ ಬಿಡುಗಡೆಯಾಗಲಿದೆ’ ಎಂದು ಅವರು ನಗರದಲ್ಲಿ ಶನಿವಾರ …
Read More »ನಿಯಂತ್ರಣಕ್ಕೆ ಬಾರದ ಅಕ್ರಮ ಚಟುವಟಿಕೆ
ಚನ್ನಮ್ಮನ ಕಿತ್ತೂರು: ‘ಜೂಜಾಟ, ಮಟ್ಕಾ, ಪಡ್ಡೆ ಹುಡುಗರ ಕಿಡಿಗೇಡಿತನ ಹಾಗೂ ಮನೆ ಕಳ್ಳತನ ನಿಯಂತ್ರಿಸುವಲ್ಲಿ ಯಶಸ್ಸು ಕಾಣದ ಕಿತ್ತೂರು ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಮಡುಗಟ್ಟಿದೆ’ ಎಂಬ ಆರೋಪಗಳು ಕೇಳಿಬರುತ್ತಿವೆ. ‘ಎತ್ತರದ ಪ್ರದೇಶ, ಹೊರವಲಯದ ಹೊಲದಲ್ಲಿರುವ ಮನೆಗಳು ಇಸ್ಪೀಟ್ ಅಡ್ಡೆಗಳಾಗಿ ಪರಿವರ್ತನೆಯಾದ ವಿಷಯ ಗುಟ್ಟಾಗೇನು ಉಳಿದಿಲ್ಲ. ಹಾಡುಹಗಲೇ ಮನೆ ಕಳ್ಳತನಗಳಾಗಿವೆ. ಕೆಲವು ಪ್ರಕರಣಗಳು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ದಾಖಲಾದ ಚಿತ್ರಗಳು ಸ್ಪಷ್ಟವಾಗಿದ್ದರೂ ಅದರಲ್ಲಿರುವ ಕಳ್ಳರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ …
Read More »ಬಿಜೆಪಿ ಸದಸ್ಯ ಅಪಹರಣ; ಮೂವರ ಮೇಲೆ ಪ್ರಕರಣ
ಚನ್ನಮ್ಮನ ಕಿತ್ತೂರು: ಇಲ್ಲಿಯ ಪಟ್ಟಣ ಪಂಚಾಯಿತಿ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ತಡರಾತ್ರಿ ಬಿಜೆಪಿ ಸದಸ್ಯ ನಾಗರಾಜ ಬಸವರಾಜ ಅಸುಂಡಿ (36) ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಚನ್ನಮ್ಮನ ಕಿತ್ತೂರು ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಾಲ್ಲೂಕಿನ ಮೇಟ್ಯಾಲ ಗ್ರಾಮದ ಅಶೋಕ ಚನ್ನಬಸಪ್ಪ ಮಾಳಗಿ, ಚನ್ನಾಪುರದ ಬಸವರಾಜ ಶೇಖಪ್ಪ ಸಂಗೊಳ್ಳಿ ಮತ್ತು ಕಿತ್ತೂರಿನ ಸೋಮವಾರ ಪೇಟೆಯ ಸುರೇಶ ಈರಪ್ಪ ಕಡೇಮನಿ ಆರೋಪಿಗಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಾಗರಾಜ ತಂದೆ ಬಸವರಾಜ ಈ …
Read More »ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರ ಮಾಡುವುದು ಬೇಡ:
ಚನ್ನಮ್ಮನ ಕಿತ್ತೂರು : ಪಟ್ಟಣದ ಸೋಮವಾರ ಪೇಟೆಯಲ್ಲಿರುವ ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆಯನ್ನು ಸ್ಥಳಾಂತರ ಮಾಡುವುದು ಬೇಡ ಎಂದು ಮಂಜುನಾಥ ಅಮರಪ್ಪನವರ ಹೇಳಿದರು. ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಇವರು. ಎಂ ಎಸ್ ಆಯ್ ಎಲ್ ಮದ್ಯದ ಮಳಿಗೆ ಮುಂದೆ ಅಷ್ಟೇ ಮಹಿಳೆಯರು, ವೃದ್ಧರು ಹಾಗೂ ಮಕ್ಕಳು ಓಡಾಡುವುದಿಲ್ಲ. ಪಟ್ಟಣದ ಕೋಟೆಯ ಮುಂದೆ ಇರುವ ಮದ್ಯದ ಅಂಗಡಿ ಸೇರಿದಂತೆ ಎಲ್ಲ ಮದ್ಯದ ಅಂಗಡಿಗಳ ಮುಂದೆ ಸಾರ್ವಜನಿಕರು ಓಡಾಡುತ್ತಾರೆ. …
Read More »