Breaking News

ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿದ ಪ್ರಕರಣ – ಪ್ರತ್ಯೇಕ ಕಾನೂನು ರೂಪಿಸುವಂತೆ ಬ್ರಾಹ್ಮಣ ಮಹಾಸಭಾ ಆಗ್ರಹ

Spread the love

ಬೆಂಗಳೂರು: ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣವನ್ನ‌ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಬೆಂಗಳೂರಿನ ಖಾಸಗಿ ಕಾಲೇಜಿನ ಪರೀಕ್ಷಾ ಸಿಬ್ಬಂದಿ ವರ್ತನೆಗೆ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ  ಖಂಡಿಸಿದೆ.

ಪದೇ ಇದೇ ಜನಿವಾರ ತೆಗೆಸಿ, ಧಾರ್ಮಿಕ ಭಾವನೆಗಳ‌ ಮೇಲೆ ದಾಳಿ ನಡೆಸಲಾಗ್ತಿದೆ. ಸರ್ಕಾರ ಈ ವಿಚಾರವಾಗಿ ಪ್ರತ್ಯೇಕ ಕಾನೂನು ಜಾರಿ ಮಾಡಬೇಕೆಂದು ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ಸರ್ಕಾರಕ್ಕೆ ಒತ್ತಾಯ ಮಾಡಿದೆ. ಇನ್ನೆರೆಡು ದಿನದಲ್ಲಿ ಖುದ್ದು ಸಿಎಂ ರನ್ನ ಭೇಟಿ ಮಾಡಲಿದ್ದಾರೆ.

ಕಳೆದ ವರ್ಷವೂ ಶಿವಮೊಗ್ಗ , ಬೆಂಗಳೂರು ಸೇರಿ ಕೆಲ ಜಿಲ್ಲೆಗಳಲ್ಲಿ ಜನಿವಾರ ತೆಗಿಸಲಾಗಿತ್ತು. ಸರ್ಕಾರ, ಕೆಇಎ ಕಟ್ಟುನಿಟ್ಟಿನ ನಿಯಮಗಳನ್ನ ಜಾರಿಗೆ ತಂದ ಬಳಿಕವೂ ಮತ್ತೆ ಖಾಸಗಿ ಕಾಲೇಜು ಎಡವಟ್ಟು ಮಾಡಿಕೊಂಡಿದೆ. ಜನಿವಾರ ತೆಗಸಿದ ಪ್ರಕರಣಗಳು ಇನ್ಮುಂದೆ ನಡೆಯಬಾರದು ಅಂತ ಶಾಸಕ ಸಿಕೆ ರಾಮಮೂರ್ತಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬ್ರಾಹ್ಮಣ ಸಮುದಾಯದ ಕೆಲ ಸಂಘಟನೆಗಳು ನಗರ ಜಿಲ್ಲಾಧಿಕಾರಿಗೆ ಘಟನೆಯನ್ನ ಖಂಡಿಸಿ ದೂರು ನೀಡಿದೆ.‌ ಈಗಾಗಲೇ ಸಂಘ ಸಿಎಂ ಗೆ ಪತ್ರ ಬರೆದಿದೆ. ಪ್ರತ್ಯೇಕ ಕಾನೂನು ಜಾರಿಗೆ ಸಂಘ ಒತ್ತಾಯ ಮಾಡ್ತಿದ್ದು, ಸರ್ಕಾರ ಹೇಗೆ ಸ್ಪಂದಿಸುತ್ತೆ ಕಾದು ನೋಡಬೇಕಿದೆ.


Spread the love

About Laxminews 24x7

Check Also

ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ: ಸಂಸದ ಬೊಮ್ಮಾಯಿ

Spread the loveಸವಣೂರು: ಇನ್ನೆರಡು ವರ್ಷದಲ್ಲಿ ರಾಜ್ಯದಲ್ಲಿ ರೈತಪರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಈ ವ್ಯವಸ್ಥೆ ಬದಲಾವಣೆಯಾಗಿ ರೈತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ