Breaking News

ಕೊನೆಯ ಬಾರಿ ಮಗನ ಮುಖ ನೋಡಲಾಗದೆ, ಸುರೇಶ್​​ ಅಂಗಡಿ ತಾಯಿಯ ಆಕ್ರಂದನ

Spread the love

ಬೆಳಗಾವಿ: ಕೇಂದ್ರ ಸಚಿವ ಸುರೇಶ್​ ಅಂಗಡಿ ನಿನ್ನೆ ಕೊರೊನಾದಿಂದ ನಿಧನರಾಗಿದ್ದು, ಮೃತರ ಕುಟುಂಬಕ್ಕೆ ದೊಡ್ಡ ಆಘಾತವಾಗಿದೆ. ಸುರೇಶ್​ ಸಂಗಡಿ ತಾಯಿ ಸೋಮವ್ವ ಅವರ ಆಕ್ರಂದನ ಮುಗಿಲು ಮುಟ್ಟಿದ್ದು ಕೊನೆಯ ಬಾರಿ ಮಗನ ಮುಖ ನೋಡಲು ಅವಕಾಶ ಸಿಗದೆ ತೀವ್ರ ದುಃಖ ಅನುಭವಿಸುತ್ತಿದ್ದಾರೆ.

ಸೋಮವ್ವ ಮಗನ ಸಾವಿನ ಸುದ್ದಿ ಕೇಳಿ ನಿನ್ನೆಯೇ ಕೆ.ಕೆ ಕೊಪ್ಪದಿಂದ ಬೆಳಗಾವಿ ನಿವಾಸಕ್ಕೆ ಆಗಮಿಸಿದ್ದಾರೆ. ಆದ್ರೆ ಏಮ್ಸ್​ ಆಸ್ಪತ್ರೆಯಲ್ಲಿರುವ ಅಂಗಡಿ ಅವರ ಪಾರ್ಥಿವ ಶರೀರವನ್ನು ಬೆಳಗಾವಿಗೆ ತರುವುದು ಅನುಮಾನವಾಗಿದೆ. ಕೊರೊನಾ ಗೈಡ್​​ಲೈನ್ಸ್​ನಂತೆ ಅವರ ಅಂತ್ಯಕ್ರಿಯೆಯನ್ನು ದೆಹಲಿಯಲ್ಲೇ ನಡೆಸಲು ನಿರ್ಧರಿಸಲಾಗಿದೆ. ಹೀಗಾಗಿ ಕುಟುಂಬಸ್ಥರು ಇಂದು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಆದ್ರೆ ಸೋಮವ್ವ ಅವರಿಗೆ ವಯಸ್ಸಾಗಿರುವುದರಿಂದ ದೆಹಲಿಗೆ ಕರೆದುಕೊಂಡು ಹೋಗುತ್ತಿಲ್ಲ.

ಮಗನ ಅಕಾಲಿಕ ನಿಧನದ ನೋವು ಒಂದೆಡೆಯಾದ್ರೆ,ಕೊನೆಯದಾಗಿ ಮಗನ ಮುಖ ನೋಡುವ ಅವಕಾಶ ಸಿಗದ್ದಕ್ಕೆ ಸೋಮವ್ವ ಅತೀವವಾಗಿ ದುಃಖಿಸುತ್ತಿದ್ದಾರೆ.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ