Breaking News

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : `ಬಸ್ ಪಾಸ್ ದರ ಏರಿಕೆ ಇಲ್ಲ : ಡಿಸಿಎಂ ಲಕ್ಷ್ಮಣ್ ಸವದಿ

Spread the love

ಬೆಂಗಳೂರು : ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬಸ್ ಪಾಸ್‍ಗಳ ದರವನ್ನು ಹೆಚ್ಚಿಸುವುದಿಲ್ಲ ಮತ್ತು ಈ ಹಿಂದೆ ಇದ್ದ ಮಾನದಂಡಗಳನ್ನು ಬದಲಿಸುವ ಯಾವುದೇ ಉದ್ದೇಶವಿಲ್ಲ, ಆದ್ದರಿಂದ ಈ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಅನಗತ್ಯ ಆತಂಕಕ್ಕೆ ಒಳಗಾಗಬಾರದು ಎಂದು ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿಗಳ ಬಸ್ ಪಾಸ್‍ಗಳ ದರ ಹೆಚ್ಚಿಸಲಾಗುತ್ತದೆ ಎಂಬುದು ಕೇವಲ ವದಂತಿಯಷ್ಟೇ. ಆ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಕಳೆದ ಶೈಕ್ಷಣಿಕ ವರ್ಷದಲ್ಲಿ ಬಸ್ ಪಾಸ್‍ಗಳನ್ನು ಯಾವ ಪ್ರಮಾಣದ ದರದಲ್ಲಿ ವಿತರಿಸಲಾಗಿತ್ತೋ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿಯೂ ಸಹ ಅದೇ ರೀತಿಯಲ್ಲಿ ಅಳವಡಿಸಿಕೊಳ್ಳಲಾಗುವುದು , ಅಷ್ಟೇ ಅಲ್ಲ ಹಿಂದಿನ ಮಾನದಂಡಗಳನ್ನೇ ಮುಂದುವರೆಸಲಾಗುವುದು ಎಂದು ಸ್ಪಷ್ಟ ಪಡಿಸಿದ್ದಾರೆ.

*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??


Spread the love

About Laxminews 24x7

Check Also

ಇಂದು ನನ್ನ ಗಂಡನ ಹುಟ್ಟುಹಬ್ಬ, ಪ್ರಶ್ನೆ ಸ್ವಲ್ಪ ಚಿಕ್ಕದಾಗಿ ಕೇಳಿ: ಪ್ರಿಯಾಂಕಾ ಗಾಂಧಿ ಹಾಸ್ಯ

Spread the loveನವದೆಹಲಿ: ʻಇಂದು ನನ್ನ ಗಂಡನ ಹುಟ್ಟುಹಬ್ಬ, ನಿಮ್ಮ ಪ್ರಶ್ನೆಗಳನ್ನ ಸ್ಬಲ್ಪ ಚಿಕ್ಕದಾಗಿ ಕೇಳಿʼ ಎಂದು ಸಂಸದೆ ಪ್ರಿಯಾಂಕಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ