Breaking News

ಕಾಂಗ್ರೆಸ್, ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ – ಪೋಸ್ಟರ್ ವಾರ್

Spread the love

ರಾಮನಗರ: ಕಾಂಗ್ರೆಸ್  ಹಾಗೂ ಮೈತ್ರಿಪಕ್ಷಗಳ ನಡುವೆ ಬಿಡದಿ ಟೌನ್‌ಶಿಪ್ ಜಟಾಪಟಿ ಜೋರಾಗಿದ್ದು, ರೈತರ ಹೋರಾಟಕ್ಕೆ ಬೆಂಬಲ ನೀಡಿದ್ದ ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್ ಆರಂಭಿಸಿದೆ.

ಇಂದು ಬಿಡದಿಗೆ ಬಿಜೆಪಿ ನಿಯೋಗ ಭೇಟಿ ಹಿನ್ನೆಲೆ ಕಾಂಗ್ರೆಸ್ ಪೋಸ್ಟರ್‌ಗಳನ್ನ (Poster) ಅಂಟಿಸಿ ಬಿಜೆಪಿಯನ್ನ ಟೀಕಿಸಿದೆ. ಯೋಜನೆ ವಿರುದ್ಧ ಪಾದಯಾತ್ರೆಗೆ ಕರೆ ನೀಡಿರುವ ಜೆಡಿಎಸ್ ವಿರುದ್ಧವೂ ಪೋಸ್ಟರ್ ಹಾಕಿ ವ್ಯಂಗ್ಯಮಾಡಿದೆ. ರೈತರ ಭೂಮಿ ಕದ್ದ ಆರ್.ಅಶೋಕ್, ಬಿರಿಯಾನಿ ಅಡ್ಡೆಯ ಚಿಲ್ಲರೆ ನಾರಾಯಣಸ್ವಾಮಿ, ಆರ್‌ಟಿಜಿಎಸ್ ಕಳ್ಳ ವಿಜಯೇಂದ್ರಗೆ ಬಿಡದಿ ಟೌನ್ ಶಿಪ್‌ಗೆ ಸ್ವಾಗತ ಎಂದು ಪೋಸ್ಟರ್ ಅಂಟಿಸಲಾಗಿದೆ.

ಅಲ್ಲದೇ ಹೆಚ್‌ಡಿಕೆ, ನಿಖಿಲ್, ಅನಿತಾ ಕುಮಾರಸ್ವಾಮಿ ಫೋಟೋವನ್ನೂ ಹಾಕಿ ಬೇನಾಮಿ ಆಸ್ತಿ ಒಡೆಯ ಎಂದು ಕಾಂಗ್ರೆಸ್ ಕಾರ್ಯಕರ್ತರು ಬಿಡದಿಯ ಹಲವೆಡೆ ಪೋಸ್ಟರ್ ಅಂಟಿಸಿ ಮೈತ್ರಿ ಪಕ್ಷಕ್ಕೆ ಟಾಂಗ್ ನೀಡಿದ್ದಾರೆ.


Spread the love

About Laxminews 24x7

Check Also

ವಂದೇ ಮಾತರಂನ ಮೊದಲ 2 ಚರಣ ಮಾತ್ರ ಹಾಡಬೇಕು – ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ PIL

Spread the loveಬೆಂಗಳೂರು: ವಂದೇ ಮಾತರಂ  ಹಾಡಿನ ವಿವಾದ ರಾಜ್ಯ ಹೈಕೋರ್ಟ್  ಮೆಟ್ಟಿಲೇರಿದೆ. ಮೊದಲ 2 ಚರಣ ಮಾತ್ರ ಹಾಡಬೇಕು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ