Breaking News

ಅನುಮತಿ ಇಲ್ಲದೇ ರಾಜ್ಯಕ್ಕೆ ಪ್ರವೇಶಿಸಿದ್ ಸೋಂಕಿತ ಗರ್ಭಿಣಿ ಪತಿ, ಸಹೋದರ ಹಾಗೂ ಕಾರು ಚಾಲಕನ ಮೇಲೆ ಕೇಸ್: ಡಾ.ಎಸ್.ಬಿ. ಬೊಮ್ಮನಹಳ್ಳಿ

Spread the love

ಬೆಳಗಾವಿ- ಮುಂಬೈನಿಂದ ಬೆಳಗಾವಿಗೆ ಮರಳಿದ ಗರ್ಭಿಣಿಗೆ ಕೊರೊನಾ ಸೋಂಕು ತಗಲಿರುವದು ಇಂದು ಗುರುವಾರ ಬೆಳಗಿನ ಹೆಲ್ತ್ ಬುಲಿಟೀನ್ ನಲ್ಲಿ ದೃಡವಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 114ಕ್ಕೇರಿಕೆಯಾಗಿದೆಮೇ 3ರಂದು ಮುಂಬೈದಿಂದ ಮರಳಿದ್ದ 7 ತಿಂಗಳ ಗರ್ಭಿಣಿಗೆ ಕೊರೊನಾ ಸೊಂಕು ತಗುಲಿದೆ ಗರ್ಭಿಣಿ ಎಂಬ ಕಾರಣಕ್ಕೆ ಮಹಿಳೆಗೆ ಹೋಮ್ ಕ್ವಾರಂಟೈನ್‌ಗೆ ಅವಕಾಶ ನೀಡಿಲಾಗಿತ್ತು ಆರೋಗ್ಯ ಇಲಾಖೆ ಹೋಮ್ ಕ್ವಾರಂಟೈನ್ ಗೆ ಅವಕಾಶ ನೀಡಿತ್ತು ಎಂದು ತಿಳಿದು ಬಂದಿದೆ.

ಬೆಳಗಾವಿ ಸದಾಶಿವ ನಗರದ ನಿವಾಸದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿ ಇದ್ದ ಗರ್ಭಿಣಿ ಗಂಟಲು ದ್ರವವನ್ನು ಎರಡು ದಿನದ ಹಿದೆಯೇ ಪಡೆಯಲಾಗಿತ್ತು. ಕೊರೊನಾ ಸೋಂಕು ದೃಢ ಆಗುತ್ತಿದ್ದಂತೆ ಬಿಮ್ಸ್ ಆಸ್ಪತ್ರೆ ಕೋವಿಡ್ ವಾರ್ಡ್‌ಗೆ ಸೊಂಕಿತ ಗರ್ಭಿಣಿ ಯನ್ನು ಶಿಪ್ಟ ಮಾಡಲಾಗಿದೆ. P-974 – 27 ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢವಾಗಿದೆ

ತಬ್ಲಿಘಿ, ಅಜ್ಮೀರ್ ಬಳಿಕ ಕುಂದಾನಗರಿಗೆ ಮುಂಬೈನ ಧಾರಾವಿ ಸ್ಲಂ ಕಂಟಕ ಶುರುವಾಗಿದೆ. ಮುಂಬೈನ ಧಾರಾವಿ ಸ್ಲಂ ಪ್ರದೇಶದಿಂದ ಬೆಳಗಾವಿಗೆ ಬಂದಿದ್ದ ಗರ್ಭಿಣಿಗೆ ಸೊಂಕು ತಗಲಿದ್ದು ಈ ಮಹಿಳೆ ವಾಸವಾಗಿರುವ ಸದಾಶಿವ ನಗರ ಪ್ರದೇಶವನ್ನು ಶೀಲ್ ಡೌನ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಮುಂಬೈನ ಧಾರಾವಿ ಸ್ಲಂ ನಿಂದ ಬೆಳಗಾವಿ ಕೊರೊನಾ ಲಿಂಕ್ ಶುರುವಾಗಿದ್ದು ಪೊಲೀಸರ ಅನುಮತಿ ಇಲ್ಲದೇ ಗರ್ಭಿಣಿ ಕುಟುಂಬ ಬೆಳಗಾವಿ ಗಡಿ ಪ್ರವೇಶ ಮಾಡಿದ್ದರು ಎಂದು ತಿಳಿದು ಬಂದಿದೆ ಮುಂಬೈನಿಂದ ಮೇ 3 ರಂದು ರಾಜ್ಯಕ್ಕೆ ಪ್ರವೇಶಿಸಿದ್ದರು ಬೆಳಗಾವಿ ಮೂಲದ ಗರ್ಭಿಣಿಗೆ ಇಂದು ಸೋಂಕು ದೃಢವಾಗಿದ್ದರಿಂದ ಇಷ್ಟು ದಿನ ನಿರಾಳವಾಗಿದ್ದ ಬೆಳಗಾವಿ ನಗರದಲ್ಲಿ ಮತ್ತೆ ವೈರಸ್ ಆತಂಕ ಶುರುವಾಗಿದೆ.

 

P- 974 ಗರ್ಭಿಣಿ ರಾಜ್ಯ ಪ್ರವೇಶಕ್ಕೆ ಕುಟುಂಬಸ್ಥರ ಸಹಕಾರ ನೀಡಿದ ಆರೋಪದ ಹಿನ್ನಲೆಯಲ್ಲಿ ಸೋಂಕಿತ ಗರ್ಭಿಣಿ ಪತಿ, ಸಹೋದರ ಹಾಗೂ ಕಾರು ಚಾಲಕನ ಮೇಲೆ ಕೇಸ್ ದಾಖಲಿಸಲು ಬೆಳಗಾವಿ ಜಿಲ್ಲಾಡಳಿತದಿಂದ ಸಿದ್ಧತೆ ನಡೆದಿದೆ,ಎಂದು
ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾಹಿತಿ ನೀಡಿದ್ದಾರೆ


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ