Breaking News
Home / Uncategorized / ಅ ವೆವಸ್ತೆಯ ಆಗರ ವಾದ ಜಮಖಂಡಿ ನಗರದ ಮಹಾಲಿಂಗೇಶ್ವರ ಕಾಲೋನಿ ಯಲ್ಲಿಯ 31-ನೇ ವಾರ್ಡ.

ಅ ವೆವಸ್ತೆಯ ಆಗರ ವಾದ ಜಮಖಂಡಿ ನಗರದ ಮಹಾಲಿಂಗೇಶ್ವರ ಕಾಲೋನಿ ಯಲ್ಲಿಯ 31-ನೇ ವಾರ್ಡ.

Spread the love

 

 

ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಮಹಾಲಿಂಗೇಶ್ವರ ಕಾಲೋನಿಯ 31-ನೇ ವಾರ್ಡಿನ ಕಥೆ ಇದು.

 

ಈ ವಾರ್ಡಿನಲ್ಲಿ ವಾಸಿಸುತ್ತಿದ್ದ ಜನರ ಗೋಳು ಕೇಳುತ್ತಿಲ್ಲ ಜಮಖಂಡಿ ನಗರ ಸಭೆಯವರು ಇದೇ ವಾರ್ಡಿನಲ್ಲಿದ್ದ ಮೆಂಬರ ಕೂಡಾ.

 

ಸೊಳ್ಳೆಗಳು ಹಾಗೂ ಹಂದಿಗಳ ರೋಗಕ್ಕೆ ತುತ್ತಾಗಿ ಭಯ ಭೀತರಾದ ವಾರ್ಡಿನ ಜನ.

 

ಇಲ್ಲಿ ಚರಂಡಿ, ಲೈಟು,ರಸ್ತೆ,ಅದಾವುದು ಸರಿಯಾಗಿ ಇಲ್ಲದೆ ಇರುವ ವಾರ್ಡ ಇದು.ಇಲ್ಲಿಯ ಜನ ಇ ವಾರ್ಡಿನಲ್ಲಿದ್ದ ಮೆಂಬರರನ್ನು ಕೇಳಿದಾಗ ಅವರಿಂದ ಬಂದ ಉತ್ತರ ಏನು ಗೊತ್ತಾ ಈ ವಾರ್ಡಿಗೆ ಅನುದಾನ,ಗ್ರ್ಯಾಂಟು, ಪಂಡು, ಯಾವುದು ಬಂದಿಲ್ಲಾ ನಾನೆನ ಮಾಡಲಿ ಎನ್ನುವ ಉತ್ತರ.

 

 

 

ಇಲ್ಲಿ ಚರಂಡಿ,ಲೈಟು, ತಿರುಗಾಡೊಕೆ ರಸ್ತೆ ಕೂಡಾ ಸರಿಯಾಗಿ ಇಲ್ಲಾ ನಮ್ಮ ಮನೆಗಳ ಮುಂದೆ ಚರಂಡಿ ಇಲ್ಲದೆ ಇರೊದರಿಂದ ಹೊಲಸು ಕಚರಾ ಬಂದು ನಮ್ಮ ಮನೆಗಳ ಮುಂದೆ ನಲ್ಲತಾ ಇದೆ ಆ ಕಾರಣದಿಂದ ಹಂದಿಗಳು ಇಲ್ಲೆ ನಮ್ಮ ಮನೆಗಳ ಮುಂದೆ ವಾಸ ಮಾಡತಾ ಇವೆ ಆ ಕಾರಣದಿಂದ ಹಂದಿ ಜ್ವರಾ ನಮಗೆ ಬಂದು ಆಸ್ಪತ್ರೆಗೆ ದಾಖಲಾಗುವ ಪರಿಸ್ಥಿತಿ ನಮ್ಮ ದಾಗಿದೆ ಇಲ್ಲಿ ರಸ್ತೆ ಆಗಬೇಕು ಜರಂಡಿ ಆಗಬೇಕು ಇಲ್ಲಿಯ ರಸ್ತೆ ಸರಿಯಾಗಿ ಇಲ್ಲದ ಕ್ಕಾಗಿ ನಾವು ವಯಸ್ಸಾದವರು ಬಿದ್ದು ಕೈ ಕಾಲು ಕೆತ್ತಿ ಹೋಗಿವೆ ಇಲ್ಲಿಯ ವಾರ್ಡ ಮೆಂಬರರನ್ನ ಕೇಳಿದಾಗ ನೀವು ಏನು ಬೇಕಾದರೂ ಹೇಳತಿರಿ ನಾವು ಅದನ್ನ ಮಾಡಬೇಕಾ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಡಾ ಕಂಡಿತವಾಗಿ ಹೇಳತಾರೆ.ಈ ವಾರ್ಡಿಗೆ ಏನು ಮಂಜುರು ಆಗಿಲ್ಲಾ ಎಂದು ನಮ್ಮನ್ನೆ ಕೇಳತಾರೆ ಎಂದು ತಮ್ಮ ಅಳಲನ್ನ ತೋಡಿ ಕೊಂಡ ಇ ವಾರ್ಡಿನ ಜನ.

 

 

 

ಇಲ್ಲಿ ರಸ್ತೆ ಮಾಡಾಕ ಬಂದ ಎಲ್ಲಾ ಹಡ್ಡಿ(ಅಗಿದು)ಹೋಗ್ಯಾರಿ ನಮಗ ರೋಡ ಸರಿಯಾಗಿ ಆಗಬೇಕರಿ ಚರಂಡಿ ಗಟಾರ ಆಗಬೇಕರಿ ಇಲ್ಲಿ ಹಂದಿ ಬಾಳ ಬರತಾವ ಇಲ್ಲೆ ವಾಸ ಅದಾವರಿ ಅದಕ್ಕಾಗಿ ನಮಗ ಡೆಂಗ್ಯು ಜ್ವರಾ ಮಲೇರಿಯಾ ಬರಲಾಕ ಹತ್ತೆತರಿ ನಮ್ಮ ಮಕ್ಕಳಿಗೆ ನಮಗರಿ ಇ ವಾರ್ಡಿನ ಮೆಂಬರರನ್ನ ಕೇಳಿದರ ಅವರ ಹೇಳತಾರ ಇಲ್ಲಿ ರೋಡ ಇನ್ನು ಮಂಜುರ ಆಗಿಲ್ಲ ಅಂತ ಎರಡ ವರ್ಷ ಆಯಿತು ಇದನ್ನ ಹಡ್ಡಿ(ಅಗಿದು)ತಿರಗಾಡುವಾಗ ಇಲ್ಲಿ ಎಲ್ಲಾರು ಬಿಳಾಕ ಹತ್ಯಾರ ಇಲ್ಲಿ ಸ್ವಛತೆ ಇಲ್ಲದ ಕ್ಕಾಗಿ ನಮ್ಮ ಮನ್ಯಾಗ ಹಾವು,ಚೆಳು,ಬರಾಕ ಹತ್ಯಾವ ಇ ನಮ್ಮ ಮಹಾಲಿಂಗೇಶ್ವರ ಕಾಲೋನಿಯ ವಾರ್ಡನಂಬರ 31 ರ ಹಣೆ ಬರಹ ಎಂದು ಗೋಳಾಡುತ್ತಿರುವ ಜನ.

 

 

 

ಇಲ್ಲಿ ನೀರಿನ ಪೈಪ ಹಾಕುವ ಸಲುವಾಗಿ ಹಡ್ಡಿ ಹೋದಾವರು ಎರಡು ವರ್ಷಗಳಾದರೂ ಇನ್ನೂ ಇದನ್ನ ಮುಚ್ಚಿಲ್ಲಾ ವಯಸ್ಸಾದವರು ಚಿಕ್ಕ ಮಕ್ಕಳು ಇಲ್ಲಿ ಯಾರಿಗೂ ತಿರಗಾಡಾಕ ಬರವಲ್ಲತು ಇಲ್ಲಿ ಗೊತ್ತಿಲ್ಲದವರು ಬೈಕ ತಗೊಂಡ ಬಂದರ ಅವರ ಬೀಳದ ಹೋಗುದುಲ್ಲಾ ಆ ಕಾರಣಕ್ಕಾಗಿ ನಗರ ಸಭೆ ಕಮೀಶ್ನರ ಸಾಹೇಬರಿಗೆ ಹೇಳಿ ಮೂರು ತಿಂಗಳಾತು ಅವರು ಇವತ್ತ ಮಾಡುನು ನಾಳೆ ಮಡುನು ಅಂತ ಹೇಳತಾರು ಆದರ ಮಾಡವಲ್ಲರು.ಈ ವಾರ್ಡಿನ ಮೆಂಬರರಿಗೂ ಹೇಳಿದೆ ಅವರ ಮಗನಿಗೂ ಹೇಳಿದಿವಿ ಆದರ ಅವರು ಏನ ಹೇಳತಾರಂದ್ರ ಪಂಡ ಬಂದಿಲ್ಲಾ ಬಂದ್ರ ನೋಡುನು ಅಂತಾ. ಆದ ಕಾರಣ ಇ ವಾರ್ಡನ ಜನಾ ನಗರ ಸಭೆಗೆ ಬಂದು ಕೀಲಿ ಹಾಕಬೇಕಾಗತೈತಿ ಅಂತ ಇ ವಾರ್ಡನ ಜನ ರೊಚ್ಚಿಗೆದ್ರ ಬಾಳ ತೊಂದರಿ ಆಕೈತಿ ಅಂತಾ ಎಚ್ಚರಿಕೆ ಕೊಡತಿವಿ ಎಂದ ಜನ.

 

ವರದಿಗಾರರು

ಬಸವರಾಜ ಜಮಖಂಡಿ


Spread the love

About Laxminews 24x7

Check Also

ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು 10 ಕೋಟಿ ಮೌಲ್ಯದ ವಾಹನಗಳ ಜೊತೆ ಪರಾರಿ

Spread the loveಬೆಂಗಳೂರು : ಟ್ರಾವೆಲ್ಸ್ ಹೆಸರಲ್ಲಿ ನೂರಾರು ಟ್ಯಾಕ್ಸಿ ಮಾಲಕರಿಗೆ ಪಂಗನಾಮ ಹಾಕಿ ಟ್ರಾವೆಲ್ಸ್ ಬಾಗಿಲು ಹಾಕಿ ಸುಮಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ