Breaking News

ಮಹೇಶ ಕುಮಟಳ್ಳಿ, ಅಧ್ಯಕ್ಷರು, ಕೊಳಗೇರಿ ಅಭಿವೃದ್ದಿ ನಿಗಮ ಮಂಡಳಿಶೀಘ್ರ ರಾಜ್ಯಾದ್ಯಂತ 91, 734 ಮನೆ ನಿರ್ಮಾಣ

Spread the love

 

ಅಥಣಿ:  ಕೊಳಗೇರಿ ಅಭಿವೃದ್ದಿ ಮಂಡಳಿಯಿಂದ ಶೀಘ್ರ ರಾಜ್ಯಾದ್ಯಂತ 91, 734 ಮನೆ ನಿರ್ಮಾಣ ಮಾಡಲಾಗುವುದು, ಇದರಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಕೊಳಗೇಡಿ ಅಭಿವೃದ್ದಿ ಮಂಡಳಿ ಅಧ್ಯಕ್ಷ ಮಹೇಶ ಕುಮಟಳ್ಳಿ ಮಾಹಿತಿ ನೀಡಿದರು.

ಅಥಣಿ ಪ್ರವಾಸಿ ಮಂದಿರದಲ್ಲಿ ಮಾದ್ಯಮದವವರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾಹಿತಿ ನೀಡಿದ ಅವರು,   5.5 ಲಕ್ಷ ವೆಚ್ಚದ 91734 ಮನೆಗಳನ್ನು ಶೀಘ್ರ  ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕೆ 6500 ಕೋಟಿ ರೂ. ವೆಚ್ಚ ತಗಲುತ್ತದೆ. ಇದರಲ್ಲಿ ಕೇಂದ್ರದಿಂದ1.5 ಲಕ್ಷ, ರಾಜ್ಯದಿಂದ 2 ಲಕ್ಷ ಅನುದಾನ ಪಾಲುದಾರಿಕೆ ಹೊಂದಿದೆ. 350 ಚದುರ ಮೀಟರ ಮನೆ ನಿರ್ಮಾಣ ಮಾಡುವ ಈ ಯೋಜನೆ ಸುಮಾರು ಎರಡು ವರ್ಷಗಳಿಂದ ಬಾಕಿ ಉಳಿದಿದ್ದು, ಈಗಾಗಲೇ ಮಂತ್ರಿ ಮಂಡಲದ ಅನುಮತಿ ದೊರೆತಿದೆ ಎಂದು ತಿಳಿಸಿದರು.

ಸಂಪುಟ ಸಹೋದ್ಯೋಗಿಗಳಿಗೆ ಕೃತಜ್ಞತೆ:

ಈ ಯೋಜನೆಗೆ  ಕೇಂದ್ರದ ಅನದಾನ ಸುಮಾರು ಐದನೂರರಿಂದ ಆರುನೂರುಕೋಟಿ ರೂಪಾಯಿ ಜಮಾ ಆಗಲಿದೆ. ನನ್ನ ಈ ಕಾರ್ಯಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಉಪಮುಖ್ಯಮಂತ್ರಿ ಗೊವಿಂದ ಕಾರಜೋಳ, ಸಚಿವರಾದ ರಮೇಶ ಜಾರಕಿಹೊಳಿ,  ಸೋಮಣ್ಣ, ಕೆ. ಎಸ್. ಈಶ್ವರಪ್ಪ,  ಶಾಸಕರ ಸಹಕಾರವಿದೆ. ಅವರಿಗೆ ಈ ವೇಳೆ ನಾನು ಕೃತಜ್ಞತೆಯಿಂದ ಸ್ಮರಿಸುವುದಾಗಿ ಹೇಳಿದರು.

ಈಗಾಗಲೇ 83911 ಕೋಟಿ ರೂ ವೆಚ್ಚದ ಕಾಮಗಾರಿ ಪ್ರಾರಂಭವಿದ್ದು 20-30 ಪ್ರತಿಶತ ಕಾಮಗಾರಿ ಪೂರ್ಣಗೊಂಡಿದೆ.30-35 ಪ್ರತಿಶತ ಪ್ರಗತಿಯಲ್ಲಿದೆ.25-30 ಬಾಕಿಯಿದೆ. ಈ ಕಾರ್ಯಕ್ಕೆ 503.11ಕೊಟಿ ರೂಪಾಯಿ ಅನುದಾನ ಬಿಡುಗಡೆ ಆಗಬೇಕಾಗಬೇಕಾಗಿದ್ದು ಶೀಘ್ರ ಬಿಡುಗಡೆ ಮಾಡಿಕೊಂಡು ಚಾಲನೆ ನೀಡಲಾಗುವುದು. ಉತ್ತರ ಕರ್ನಾಟಕ ಪ್ರದೇಶಕ್ಕೆ ದೊರಕಬೇಕಾದ ಪಾಲನ್ನು ನ್ಯಾಯಯುತವಾಗಿ ದೊರಕಿಸಿ ಕೊಡಲಾಗುವುದು ಎಂದು ಹೇಳಿದರು.

ಅಥಣಿಯಲ್ಲಿ 1500 ಮನೆ ನಿರ್ಮಾಣ:

91734 ಮನೆಗಳಲ್ಲಿ ಅಥಣಿಯಲ್ಲಿ ಸುಮಾರು1500 ಮನೆಗಳನ್ನು ನಿರ್ಮಾಣ ಮಾಡಲಾಗುವುದು. ಬೆಳಗಾವಿ ಜಿಲ್ಲೆಯ18 ಕ್ಷೇತ್ರದಲ್ಲಿ ಪಟ್ಟಣ ಪಂಚಾಯತಿ, ಪುರಸಭೆ ಅಲ್ಲದ ಬೆಳಗಾವಿ ಗ್ರಾಮೀಣ ಹಾಗೂ ಯಮಕನಮರಡಿ ಕ್ಷೇತ್ರ ಹೊರತುಪಡಿಸಿ ಉಳಿದ 16 ಕ್ಷೇತ್ರದಲ್ಲಿ ಮಂಡಳಿಯಿಂದ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವದು-  ಮಹೇಶ ಕುಮಟಳ್ಳಿ,  ಅಧ್ಯಕ್ಷರು, ಕೊಳಗೇರಿ ಅಭಿವೃದ್ದಿ ನಿಗಮ ಮಂಡಳಿ

https://youtu.be/I0fEiE6nOOA


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ