Breaking News

ಒಳಮೀಸಲು ಜಾರಿ ಮೊದಲೇ ಕೃಷಿ ಇಲಾಖೆ ನೇಮಕಾತಿಗೆ ಅವಕಾಶ ಕೊಡಲ್ಲ: ಎಚ್.ಆಂಜನೇಯ

Spread the love

ಚಿತ್ರದುರ್ಗ: ಒಳಮೀಸಲು ಜಾರಿಗೆ ಸರ್ಕಾರ ತೀರ್ಮಾನ ಕೈಗೊಳ್ಳುವ ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಕೃಷಿ ಇಲಾಖೆಯ ಅಧಿಕಾರಿಗಳ ಹುದ್ದೆ ಭರ್ತಿ ಮಾಡಲು ಮುಂದಾಗಿರುವ ಸರ್ಕಾರದ ನಡೆಗೆ ಅವಕಾಶ ಕೊಡುವುದಿಲ್ಲ. ಒಳ ಮೀಸಲು ಜಾರಿ ನಂತರವೇ ಹುದ್ದೆಗಳ ಹಂಚಿಕೆಯಾಗಿ ಪರೀಕ್ಷೆ ಮತ್ತು ನೇಮಕಾತಿ ನಡೆಯಬೇಕೆಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಜಾರಿಗೊಳಿಸದೆ ಒಂದೆ ಒಂದು ಹುದ್ದೆಯನ್ನು ತುಂಬಲು ಬಿಡುವುದಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಬುಧವಾರ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು. ಸಚಿವ ಮುನಿಯಪ್ಪ ಸೇರಿದಂತೆ ಸಮುದಾಯದ ಹಲವು ಮುಖಂಡರು ನಿಯೋಗದಲ್ಲಿ ಇರುತ್ತಾರೆ. 24 ರಂದ ನಡೆಯುವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಒಳ ಮೀಸಲು ಬಗ್ಗೆ ಸ್ಪಷ್ಟ ತೀರ್ಮಾನಕ್ಕೆ ಬರುವ ವಿಶ್ವಾಸ ತಮಗಿದೆ ಎಂದರು.

56,432 ಹುದ್ದೆಗಳನ್ನು ಭರ್ತಿ ಮಾಡುವುದಕ್ಕೂ ಮುನ್ನ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಿ ನಮಗೆ ಸಿಗಬೇಕಾದ ಪಾಲು ಕೊಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೇಳಿದ್ದೇವೆ. 121 ಕೃಷಿ ಅಧಿಕಾರಿಗಳು ಹಾಗೂ 769 ಸಹಾಯಕ ಕೃಷಿ ಅಧಿಕಾರಿಗಳ ನೇಮಕಾತಿಗೆ ರಾಜ್ಯ ಸರ್ಕಾರ ನೋಟಿಫಿಕೇಷನ್ ಹೊರಡಿಸಿರುವುದು ಕೂಡ ನಮ್ಮ ಜನಾಂಗದ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ. ಒಳ ಮೀಸಲಾತಿಗಾಗಿ 35 ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೆ ಒಳ ಮೀಸಲಾತಿ ಜಾರಿಯಾಗಿದೆ. ಇತರೆ ಸಮುದಾಯಗಳ ಜೊತೆ ನಮ್ಮ ಜನಾಂಗ ಸ್ಪರ್ಧಿಸುವುದು ಕಷ್ಟ. ಅವಕಾಶದಿಂದ ವಂಚಿತರಾಗಿದ್ದೇವೆ.

ಶುಕ್ರವಾರ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಬೇಕು. ಬೇರೆಯವರಿಗೂ ನಮ್ಮಿಂದ ತೊಂದರೆಯಾಗಬಾರದೆಂದರು. ಎಲ್ಲಾ ಹುದ್ದೆಗಳ ನೇಮಕಕ್ಕೆ ಹೊರಡಿಸಿರುವ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಕೂಡಲೆ ನಿಲ್ಲಿಸಬೇಕು. ಒಳ ಮೀಸಲಾತಿಯಿಂದ ಉದ್ಯೋಗ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಯಾರು ಆಂತಕ ಪಡುವುದು ಬೇಡ. ಬಡ್ತಿಯಲ್ಲಿ ಒಳ ಮೀಸಲಾತಿ ಅನ್ವಯವಾಗಬೇಕು. ಆಂಧ್ರ, ತೆಲಂಗಾಣ ಮಾದರಿಯಂತೆ ನಮ್ಮ ರಾಜ್ಯದಲ್ಲಿಯೂ ಒಳ ಮೀಸಲಾತಿ ನೀಡಬೇಕು. ಎರಡು ಸದನದಲ್ಲೂ ಒಳ ಮೀಸಲಾತಿಗೆ ಒಪ್ಪಿಗೆಯಾಗಿದೆ. ಹಂಚಿಕೆಯಾಗುವುದೊಂದೆ ಬಾಕಿ.

ರಾಜ್ಯ ಸರ್ಕಾರ ಮೀನಾಮೇಷ ಎಣಿಸುವುದು ಬೇಡ. ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಕೊಡಲಿ ಎಂದು ಹೆಚ್.ಆಂಜನೇಯ ಮನವಿ ಮಾಡಿದರು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲು ಕೇಳುತ್ತಿದ್ದೇವೆ. ನಂತರದಲ್ಲಿ ಆರ್ಥಿಕ ಹಂಚಿಕೆಯಲ್ಲಿಯೂ ಮೀಸಲು ಬೇಕಾಗಿದೆ. ಈ ಸಂಬಂಧ ವ್ಯಾಪಕ ಕಾರ್ಯಕ್ರಮಗಳ ಹಮ್ಮಿಕೊಂಡು ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು. ಪ್ರತಿ ಜಿಲ್ಲೆಯಲ್ಲಿ ಯಾವಜಾತಿ ಜನಸಂಖ್ಯೆ ಎಷ್ಟಿದೆಯೇ ಅದರ ಆಧಾರದ ಮೇಲೆ ಆರ್ಥಿಕ ಸೌಲಭ್ಯ ವಿತರಣೆ ಆಗಬೇಕೆಂದು ಆಂಜನೇಯ ಹೇಳಿದರು.


Spread the love

About Laxminews 24x7

Check Also

ನಮ್ಮದು ಸಣ್ಣ ಪಕ್ಷ, ನಾವ್ಯಾಕೆ ಕಾಂಗ್ರೆಸ್ ಶಾಸಕರನ್ನ ಆಪರೇಷನ್ ಮಾಡೋಣ: ಹೆಚ್‌ಡಿಕೆ

Spread the loveಬೆಂಗಳೂರು: ನಮ್ಮದು ಸಣ್ಣ ಪಕ್ಷ ನಾವ್ಯಾಕೆ ಕಾಂಗ್ರೆಸ್  ಶಾಸಕರನ್ನ ಆಪರೇಷನ್ ಮಾಡೋಣ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ