Breaking News

ಚಿಕನ್ ತರಲು ಹೋದ ವೃದ್ಧ ನಾಪತ್ತೆ- ಕುಟುಂಬಸ್ಥರಲ್ಲಿ ಆತಂಕ

Spread the love

ಚಿಕ್ಕೋಡಿ (ಬೆಳಗಾವಿ): ಚಿಕನ್ ತರಲು ಹೋದ ವೃದ್ಧನೋರ್ವ ನಾಪತ್ತೆಯಾಗಿರುವ ಘಟನೆ ರಾಯಬಾಗ ತಾಲೂಕಿನಲ್ಲಿ ನಡೆದಿದ್ದು, ಕುಟುಂಬಸ್ಥರಲ್ಲಿ ಆತಂಕ ಶುರುವಾಗಿದೆ.

ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ರಾಮಪ್ಪ ತಿಪ್ಪಣ್ಣ ಭಜಂತ್ರಿ (80) ಕಾಣೆಯಾದ ವೃದ್ಧ. ರಾಮಪ್ಪ ಅವರು ಏಪ್ರಿಲ್ 28ರಂದು ಸಂಜೆ 4 ಗಂಟೆ ಸುಮಾರಿಗೆ ಸೈಕಲ್ ತೆಗೆದುಕೊಂಡು ಬೂದಿಹಾಳ ಗ್ರಾಮಕ್ಕೆ ಹೋಗಿ ಚಿಕನ್ ತರುತ್ತೇನೆ ಎಂದು ಹೇಳಿ ಹೋಗಿದ್ದರು. ರಾತ್ರಿಯಾದರೂ ಮನೆಗೆ ಮರಳಿ ಬಂದಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ ಸಿಗುತ್ತಿಲ್ಲ ಎಂದು ರಾಮಪ್ಪ ಅವರ ಮಗ ಯಲ್ಲಪ್ಪ ಭಜಂತ್ರಿ ಹೇಳಿದ್ದಾರೆ.

ಈವರೆಗೂ ನಮ್ಮ ಮಾವನವರ ಸುಳಿಯೂ ಸಿಕ್ಕಿಲ್ಲ. ಬೂದಿಹಾಳದಿಂದ ಕೋಳಿ ಖರೀದಿಸಿದವರನ್ನ ವಿಚಾರಿಸಿದಾಗ ನಮ್ಮ ಮಾವ ರಾತ್ರಿ 8:30ಕ್ಕೆ ಕೋಳಿ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ನಮ್ಮ ಮಾವನವರನ್ನು ಆದಷ್ಟು ಬೇಗ ಹುಡಕಿ ಕೊಡಿ ಎಂದು ಸೊಸೆ ಲಕ್ಕವ್ವ ಅಳಲು ತೊಡಿಕೊಂಡಿದ್ದಾರೆ.

ಈ ಸಂಬಂಧ ಯಲ್ಲಪ್ಪ ಭಜಂತ್ರಿ ರಾಯಬಾಗ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಏಪ್ರಿಲ್ 30ರಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.


Spread the love

About Laxminews 24x7

Check Also

ವಿದ್ಯಾರ್ಥಿಗಳ ಫಲಿತಾಂಶವನ್ನು ಮತ್ತಷ್ಟು ಉತ್ತಮಗೊಳಿಸಲು ಒಂದು ದಿನದ ಕಾರ್ಯಾಗಾರ

Spread the loveಚಿಕ್ಕೋಡಿ ನಗರದ ಪರಣ ನಾಗಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ